Connect with us


      




ದೇಶ

ಅಕ್ರಮ ಆಸ್ತಿ ಆರೋಪ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೋರಿದ ಜಗನ್, ಸಿಬಿಐನಿಂದ ಆಕ್ಷೇಪ

Vanitha Jain

Published

on

ಜಗನ್ ಮೋಹನ್ ರೆಡ್ಡಿ

ಹೈದರಾಬಾದ್, ಡಿಸೆಂಬರ್ 7, (ಯು.ಎನ್.ಐ): ಅಕ್ರಮ ಆಸ್ತಿ ಹೊಂದಿರುವ ಆರೋಪದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಸಿಬಿಐ ಕೋರ್ಟಿಗೆ ಹಾಜರಾಗದಿರಲು ಕೋರ್ಟ್ ಯಾವುದೇ ವೈಯಕ್ತಿಕ ವಿನಾಯಿತಿ ನೀಡಬಾರದೆಂದು ತೆಲಂಗಾಣ ಹೈಕೋರ್ಟಿಗೆ ಸಿಬಿಐ ಮನವಿ ಸಲ್ಲಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ತಡಮಾಡುವ ಉದ್ದೇಶದಿಂದ ಕೋರ್ಟಿಗೆ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ಕೋರುತ್ತಿರುವುದು ಸಿಎಂ ಜಗನ್ ಮೋಹನ್ ರೆಡ್ಡಿ ಗೇಮ್ ಪ್ಲಾನ್‍ಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯ ಪಟ್ಟಿದೆ. ಕ್ವಿಡ್ ಪ್ರೊ ಕೊ ಕೇಸ್ ನಲ್ಲಿ ಸಿಬಿಐನ ಪ್ರತ್ಯೇಕ ಕೇಸು ವಿಚಾರಣೆಯಲ್ಲಿ ಹಾಜರಾಗದಿರಲು ವಿನಾಯಿತಿ ಕೋರಿ ಕ್ವಿಡ್ ಪ್ರೊ ಕೊ ಕೇಸಿನಲ್ಲಿ ಎ1 ಆರೊಪಿಯಾಗಿರುವ ಜಗನ್ ಮೋಹನ್ ಕೋರ್ಟ್ ನಲ್ಲಿ ಪಿಟಿಷನ್ ದಾಖಲು ಮಾಡಿದ್ದಾರೆ.

ನ್ಯಾಯಮೂರ್ತಿ ಜಸ್ಟಿಸ್ ಉಜ್ಜಲ್ ಭುಯಾನ್ ನೇತೃತ್ವದ ನ್ಯಾಯ ಪೀಠ ಸೋಮವಾರ ವಿಚಾರಣೆಯನ್ನು ಮುಂದುವರೆಸಿದೆ. ಸಿಬಿಐ ನ್ಯಾಯವಾದಿ ಸುರೇಂದರ್ ಕೇಸಿಗೆ ಸಂಬಂಧಿಸಿದ ವಾದವನ್ನು ಮಂಡಿಸಿದರು.

ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆಯನ್ನು ತಡ ಮಾಡುವ ಉದ್ದೇಶದಿಂದಲೇ ಹೀಗೆ ಮಾಡುತ್ತಿದ್ದಾರೆ. ಇದೆಲ್ಲ ಅವರ ಗೇಂ ಪ್ಲಾನ್, ಸಿಬಿಐ ನಲ್ಲಿ ಕೇಸು ದಾಖಲಾಗಿ ಹತ್ತು ವರ್ಷಗಳು ಕಳೆದಿದ್ದರೂ ಇನ್ನೂ ಡಿಸ್ಚಾರ್ಜ್ ಗಳ ಹಂತ ಕೂಡ ತಲುಪಿಲ್ಲ, ಆರೋಪಿಗಳು ಉದ್ದೇಶಪೂರ್ವಕವಾಗಿ ಒಬ್ಬರ ಹಿಂದೊಬ್ಬರಂತೆ ಪಿಟಿಷನ್ ದಾಖಲು ಮಾಡುತ್ತಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿರುವುದು ಯಾವುದೇ ಕಾನೂನಿನಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಚಾರಣೆಗೆ ಹಾಜರಾಗುವುದರಿಂದ ವೈಯಕ್ತಿಕ ವಿನಾಯಿತಿ ಕೋರಿದ್ದ ಪಿಟಿಷನ್‍ಗಳನ್ನ ಕೆಳಹಂತದ ಕೋರ್ಟ್ ಮತ್ತು ಹೈ ಕೋರ್ಟ್ ಈ ಹಿಂದೆಯೇ ತಳ್ಳಿಹಾಕಿತ್ತು ಎಂದು ವಾದ ಮಂಡಿಸಿ ಆರೋಪಿತರು ಈಗಾಗಲೆ ಉನ್ನತ ಹುದ್ದೆಯಲ್ಲಿದ್ದಾರೆ ಮತ್ತು ಸಾಕ್ಷಿ ನಾಶಕ್ಕೆ ಅವಕಾಶವಿದೆ ಎಂದು ಅಭಿಪ್ರಾಯ ಪಟ್ಟರು.

ಜಗನ್ ಪರ ನ್ಯಾಯವಾದಿಗಳಾದ ನಿರಂಜನ್ ರೆಡ್ಡಿ ತಮ್ಮ ವಾದ ಮಂಡಿಸಿ ,ಸಿಬಿಐ ಕೋರ್ಟ್ ಹಾಗೂ ಹೈಕೋರ್ಟ್ ನಲ್ಲಿ ತಾವೆಂದೂ ವಾಯಿದೆ ಪಡೆದುಕೊಂಡಿಲ್ಲ, ಈಗಾಗಲೇ ಕೇಸ್ ವಿಚಾರಣೆ ತಡವಾಗಿರುವುದಕ್ಕೆ ನಾವು ಕಾರಣ ಅಲ್ಲ ಎಂದು ಹೇಳಿದರು.

ಜಗನ್ ಮೋಹನ್ ರೆಡ್ಡಿ ಆಂಧ್ರದ ಸಿಎಂ ಆಗಿದ್ದಾರೆ. ಜೊತೆಗೆ ಅವರ ನಿವಾಸವೂ ಕೂಡ ಆಂಧ್ರದಲ್ಲೆ ಇರುವುದರಿಂದ ಕೋರ್ಟ್ ವಿಚಾರಣೆ ಸಮಯಕ್ಕೆ ಹಾಜರಾಗಲೂ ಯಾವುದೇ ತೊಂದರೆಯಾಗುವುದಿಲ್ಲ ಹಾಗಾಗಿ ಜಗನ್ ವಿಚಾರಣೆಗೆ ಹಾಜರಾಗಲು ವಿನಾಯಿತಿ ಯಾವುದೇ ಕಾರಣಕ್ಕೂ ನೀಡಬಾರದೆಂದು ಕೇಳಿಕೊಂಡರು.

Share