Published
2 months agoon
ಬೆಂಗಳೂರು ನಗರ ಜಿಲ್ಲೆ: ಏಪ್ರಿಲ್ 01 (ಯು.ಎನ್.ಐ.) : ಸ್ವಲೀನತೆಯೂ (autism) ಸಹ ಸಮಾಜದ ಒಂದು ಅಂಗವಾಗಿದ್ದು, ಸ್ನೇಹ, ಸೌರ್ಹಾರ್ದತೆ ಮತ್ತು ನೈಜ ಪ್ರೀತಿಯಿಂದ ಒಪ್ಪಿಕೊಂಡು ಆಟಿಸಂ ಪರಿಸ್ಥಿತಿಯಿಂದ ಬಳಲುತ್ತಿರುವ ಪ್ರತಿ ವ್ಯಕ್ತಿಯ ವೈಶಿಷ್ಠ್ಯವನ್ನು ಗುರುತಿಸುವುದರ ಮೂಲಕ ಅಂತಹ ವ್ಯಕ್ತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಸಬಲೀಕರಣ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವ ಆಚಾರ್ ಹಾಲಪ್ಪ ಬಸಪ್ಪ ಅವರು ತಿಳಿಸಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿರುವ ಸಚಿವರು, ಆಟಿಸಂ ಕುರಿತು ಸಾರ್ವಜನಿಕರಲ್ಲಿ ಹೆಚ್ವಿನ ಜಾಗೃತಿಯಾಗಬೇಕು ಎಂದಿದ್ದಾರೆ. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರನ್ನು ಜಾರಿಗೆ ತಂದಿದೆ. ಇದರಲ್ಲಿ 21 ವಿವಿಧ ಬಗೆಯ ಅಂಗವಿಕಲತೆಯನ್ನು ಗುರುತಿಸಲಾಗಿದೆ. ಭೌದ್ಧಿಕ ವಿಕಲತೆಯಲ್ಲಿAutism Spectrum Disorder ಸ್ವಲೀನತೆ (ಆಟಿಸಂ) ಎಂಬ ಅಂಗವೈಕಲ್ಯತೆಯನ್ನು ಸಹ ಗುರುತಿಸಲಾಗಿದೆ. ಸ್ವಲೀನತೆ (ಆಟಿಸಂ) ಎಂದರೆ ನರಗಳ ಬೆಳವಣಿಗೆಯಲ್ಲಿನ ಅಸ್ವಸ್ಥತೆ, ಸಾಮಾನ್ಯವಾಗಿ ಇದು ಮೂರು (Mild, Moderate ಮತ್ತು Severe) ಹಂತಗಳಲ್ಲಿರುತ್ತದೆ ಎಂದು ವಿವರಿಸಿದ್ದಾರೆ.
ಒಂದು ಮಗು ಹುಟ್ಟಿದ ಎರಡು ವರ್ಷಗಳ ನಂತರವೂ ಸಹ ತಂದೆ/ತಾಯಿ ಅಥವಾ ಪೋಷಕರ ಮಾತುಗಳಿಗೆ ಅಥವಾ ಅವರ ಭಾವನೆಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದು ಮತ್ತು ಸಹಜ ಬೆಳವಣಿಗೆಯಲ್ಲಿ ವ್ಯತ್ಯಾಸ ಕಂಡುಬರುವುದು ಸ್ವಲೀನತೆ (ಆಟಿಸಂ)ಯ ಪ್ರಮುಖ ಲಕ್ಷಣಗಳಾಗಿವೆ.
ಸ್ವಲೀನತೆಯುಳ್ಳ ಮಕ್ಕಳನ್ನು ಹೊರಗಿನ ಪ್ರಪಂಚಕ್ಕೆ ಪರಿಚಯಿಸದೆ, ಅವರಿಗೆ ಅಗತ್ಯವಿರುವ ತರಬೇತಿ ಮತ್ತು ಆರೋಗ್ಯ ಪುನರ್ವಸತಿಗಳ ಕಡೆ ಹೆಚ್ಚಿನ ಗಮನಹರಿಸದೆ, ಸ್ವಲೀನತೆಯುಳ್ಳ ಮಗು ಹುಟ್ಟಿರುವುದು ಒಂದು ಶಾಪ ಎಂಬ ಮೂಢ ನಂಬಿಕೆಯಿಂದ ಜೀವನ ಸಾಗಿಸುತ್ತಿರುವ ಕುಟಂಬಗಳು ಸಮಾಜದಲ್ಲಿ ಬಹಳಷ್ಟಿವೆ ಎಂದರು.
ಸ್ವಲೀನತೆ ಒಂದು ದೈಹಿಕ ನ್ಯೂನತೆಯಾಗಿದ್ದರೂ ಇಂತಹ ಮಕ್ಕಳನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಉತ್ತಮ ತರಬೇತಿ ನೀಡಿ, ಅವರ ಆರೋಗ್ಯ ಪುನರ್ವಸತಿ ಒದಗಿಸಿದಲ್ಲಿ ಸಾಮಾನ್ಯ ಜನರಂತೆ ಇವರೂ ಸಹ ಸಮರ್ಥ ಜೀವನವನ್ನು ಸಾಗಿಸಲು ಸಾಧ್ಯ ಎಂದು ಹೇಳಿದರು.
ಇದಕ್ಕೆ, ಕು. ಜಿಯಾ ರಾಯ್ ಎಂಬ ಆಟಿಸಂವುಳ್ಳ 13 ವರ್ಷದ ಬಾಲಕಿ ಶ್ರೀಲಂಕಾದ ತಲೈಮನ್ನಾರ್ನ ಸಮುದ್ರದಲ್ಲಿ 13 ಗಂಟೆಗಳ ಕಾಲ ಸುಮಾರು 29 ಕಿಲೋಮೀಟರ್ ಈಜುತ್ತಾ ಭಾರತದ ತಮಿಳುನಾಡು ತಲುಪಿರುವುದು ಒಂದು ಉತ್ತಮವಾದ ಉದಾಹರಣೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ನರ್ಸಿಂಗ್ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ : ಸಿಎಂ ಬೊಮ್ಮಾಯಿ
ದಾದಿಯರಿಗೆ ವಂದಿಸಿದ ರಾಹುಲ್ ಗಾಂಧಿ
ಕೋವಿಡ್ ೧೯; ಹೊಸ ರೂಪಾಂತರಗಳಿಂದ ನಿರಂತರ ಆತಂಕ
ಮದ್ದಿಲ್ಲದೇ ಮಧುಮೇಹ ಗುಣಪಡಿಸಲು ಸಾಧ್ಯ !
‘ಸಿಕಲ್ ಸೆಲ್ ಅನೀಮಿಯಾ’ ಇರುವ ದಂಪತಿ ಮಕ್ಕಳು ಪಡೆಯಬಹುದು! ಹೇಗೆ ಅಂತಿರಾ? ಇಲ್ಲಿದೆ ಪರಿಹಾರ
ಇನ್ನು ಆರು ತಿಂಗಳಲ್ಲಿ ಆರೋಗ್ಯ ವ್ಯವಸ್ಥೆಯ ಸಮಗ್ರ ನಿಯಂತ್ರಣ ಕೇಂದ್ರ ಸ್ಥಾಪನೆ