Connect with us


      
ರಾಜಕೀಯ

ಆದಿತ್ಯನಾಥ್ ಸಿಎಂ ಆಗಿ ಯಾವುದೇ ಪ್ರಯೋಜನ ಇಲ್ಲ: ಅಖಿಲೇಶ್ ಯಾದವ್

Vanitha Jain

Published

on

ಲಕ್ನೋ, ಜನವರಿ 04(ಯು.ಎನ್.ಐ) ಭಗವಾನ್ ಶ್ರೀಕೃಷ್ಣ ರಾತ್ರಿ ತನ್ನ ಕನಸಿಗೆ ಬಂದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನನ್ನ (ಸಮಾಜವಾದಿ) ಪಕ್ಷವು ಸರ್ಕಾರ ರಚನೆಯಾಗುವುದಾಗಿ ಮತ್ತು ‘ರಾಮ ರಾಜ್ಯ’ ಸ್ಥಾಪಿಸುವುದಾಗಿ ನುಡಿಯುತ್ತಾನೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.

ರಾಜ್ಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ವಿಫಲವಾಗಿದೆ. ಆದಿತ್ಯನಾಥ್ ಸಿಎಂ ಆಗಿ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಯಾದವ್ ಬಿಂಬಿಸಿದ್ದಾರೆ.

ಬಿಜೆಪಿಯ ಬಹ್ರೈಚ್ ಶಾಸಕಿ ಮಾಧುರಿ ವರ್ಮಾ ಅವರ ಪಕ್ಷಕ್ಕೆ ಸೇರ್ಪಡೆಗಾಗಿ ನಡೆದ ಸಮಾರಂಭದಲ್ಲಿ ಯುಪಿ ಮಾಜಿ ಮುಖ್ಯಮಂತ್ರಿ, ಮಾಧುರಿ ವರ್ಮಾ ಎರಡನೇ ಬಾರಿ ಶಾಸಕರಾಗಿದ್ದಾರೆ. 2010ರಿಂದ 2012 ರವರೆಗೆ ಯುಪಿಯ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿದ್ದರು. ಬಹ್ರೈಚ್ ಜಿಲ್ಲೆಯ ನಾನ್ಪಾರಾ ವಿಧಾನಸಭಾ ಕ್ಷೇತ್ರದಿಂದ ಹಾಲಿ ಬಿಜೆಪಿ ಶಾಸಕರ ಸೇರ್ಪಡೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ಯಾದವ್, ಉತ್ತರ ಪ್ರದೇಶದಲ್ಲಿ ಸರ್ಕಾರ ರಚಿಸುವ ಹಾದಿಯಲ್ಲಿದ್ದಾರೆ ಎಂದು ಪ್ರತಿಪಾದಿಸಿದರು.

ಸಮಾಜವಾದ ಮಾರ್ಗದ ಮೂಲಕ ರಾಮರಾಜ್ಯದ ಹಾದಿಯಲ್ಲೇ ಇದೆ. ಸಮಾಜವಾದ ಸ್ಥಾಪನೆಯಾದ ದಿನವೇ ರಾಜ್ಯದಲ್ಲಿ ರಾಮರಾಜ್ಯ ಸ್ಥಾಪನೆಯಾಗಲಿದೆ. ಇನ್ನು ಯುಪಿಯಲ್ಲಿ ಸಮಾಜವಾದಿ ಪಕ್ಷ ರಚನೆಯಾಗಲಿದೆ ಎಂದು ಭಗವಾನ್ ಶ್ರೀಕೃಷ್ಣ ಪ್ರತಿ ರಾತ್ರಿ ನನ್ನ ಕನಸಿನಲ್ಲಿ ಬಂದು ಹೇಳುತ್ತಾನೆ ಎಂದರು.

ತಮ್ಮ ಪಕ್ಷದಲ್ಲಿ ಹಲವಾರು ಕ್ರಿಮಿನಲ್‍ಗಳು ಮತ್ತು ದರೋಡೆಕೋರರು ಇದ್ದಾರೆ ಎಂಬ ಬಿಜೆಪಿಯ ಆರೋಪಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್, “ಹಲವಾರು ಘೋರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಯುಪಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ತನ್ನ ಎಲ್ಲಾ ಕ್ರಿಮಿನಲ್‍ಗಳು ಮತ್ತು ಮಾಫಿಯಾ ಅಂಶಗಳನ್ನು ಶುದ್ಧೀಕರಿಸಲು ವಾಷಿಂಗ್ ಮೆಷಿನ್ ಖರೀದಿಸಿದೆಯೇ ಎಂದು ಅವರು ಕುಟುಕಿದರು. ಬಿಜೆಪಿಯಲ್ಲಿ ಅನೇಕ ಹಿರಿಯ ನಾಯಕರು ತಮ್ಮ ರಕ್ತ ಮತ್ತು ಬೆವರನ್ನು ಹರಸಿ ಸಾಕಷ್ಟು ಕಷ್ಟಪಟ್ಟು ಪಕ್ಷವನ್ನು ಬಲಪಡಿಸಿದರು. ಅವರು ಕೆಲವೊಮ್ಮೆ ಹೇಳುತ್ತಾರೆ. ಅವರು ಪಕ್ಷಕ್ಕಾಗಿ ಬೆವರು ಹರಿಸಿದರು ಆದರೆ ಆದಿತ್ಯನಾಥ್ ಎಲ್ಲಿಂದ ಬಂದರು, ಹೇಗೆ ಬಂದರು ಎಂದು ಪ್ರಶ್ನಿಸಿದರು.

Share