Published
5 months agoon
By
UNI Kannadaಬೆಂಗಳೂರು, ಡಿ ೧೩(ಯು ಎನ್ ಐ) ಮುಂದುವರಿಯುತ್ತಿರುವ ಪ್ರತೀಕಾರ ರಾಜಕೀಯದ ಭಾಗವಾಗಿ, ಜಾರಿ ನಿರ್ದೇಶನಾಲಯ(ಈಡಿ) ಕೇರಳದಲ್ಲಿ ದಾಳಿ ನಡೆಸಿದ್ದು, ನಂತರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಸಂಬಂಧ ಹೊಂದಿದ್ದ ಮೂವರ ವಿರುದ್ಧ ಹೇಳಿಕೆಯನ್ನು ಹೊರಡಿಸಿದೆ. ಆದರೆ ಇದು ನಿರಾಧಾರ, ಅತಾರ್ಕಿಕ, ದುರುದ್ದೇಶದ್ದು, ಎಂದು ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಒಂದೆಡೆ, ದೊಡ್ಡ-ಸಣ್ಣಪುಟ್ಟ ಮಾಣಿಕ ಮುಸ್ಲಿಮ್ ವರ್ತಕರ ಗೂಢಾಚಾರಿಕೆ ನಡೆಸಲು ಈ ಡಿ ಯನ್ನು ನಿಯೋಜಿಸಲಾಗಿದೆ. ಮತ್ತೊಂದೆಡೆ, ಎಲ್ಲಾ ದೊಡ್ಡ ವ್ಯಾಪಾರಿ ವಂಚನೆಗಳು ಹೆಚ್ಚಲು ಅನುವು ಮಾಡಿಕೊಡಲಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಇದು ಸಂಘಪರಿವಾರದ ಕೋಮುವಾದಿ ಅಜೆಂಡಾವಾಗಿದೆ. ಕೇರಳದಲ್ಲಿ ನಡೆದ ಬಿಜೆಪಿ ನಾಯಕರ ೪೦೦ ಕೋಟಿ ಕಪ್ಪು ಹಣ ವ್ಯವಹಾರದ ತನಿಖೆ ನಡೆಸಲು ಆಸಕ್ತಿ ತೋರದ ಈಡಿ, ಇದೀಗ ಮುಸ್ಲಿಮರ ಕಾನೂನುಬದ್ಧ ವ್ಯಾಪಾರದ ಹಿಂದೆ ಬಿದ್ದಿದೆ.
ಉತ್ತರ ಪ್ರದೇಶದ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಮತ್ತೊಂದು ಸುತ್ತಿನ ಮುಸ್ಲಿಮ್ ವಿರೋಧಿ ಅಪಪ್ರಚಾರದ ಮೂಲಕ ಮತ್ತಷ್ಟು ಕೋಮು ವಿಭಜನೆ ಸೃಷ್ಟಿಸುವುದು ಆರೆಸ್ಸೆಸ್-ಬಿಜೆಪಿಯ ಯೋಜನೆಯಾಗಿದೆ. ಅವರಿಗೆ ಪಿ.ಎಫ್.ಐಯನ್ನು ಗುರಿಪಡಿಸುವುದು ಮತ್ತು ಅದನ್ನು ಕೆಟ್ಟದಾಗಿ ಚಿತ್ರೀಕರಿಸುವುದು ತುರ್ತು ರಾಜಕೀಯ ಅನಿವಾರ್ಯವಾಗಿದೆ. ಜನರ ನಡುವೆ ಹೆಚ್ಚುತ್ತಿರುವ ಪಾಪ್ಯುಲರ್ ಫ್ರಂಟ್ ನ ಜನಪ್ರಿಯತೆಂ ಕುಗ್ಗಿಸುವ ಪ್ರಯತ್ನದಲ್ಲಿ ಈಡಿ ಸಹಿತ ಕೇಂದ್ರೀಯ ಏಜೆನ್ಸಿಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ.
ಪಾಪ್ಯುಲರ್ ಫ್ರಂಟ್, ತನ್ನ ವಿರುದ್ಧ ಈ ಡಿ ತಿಂಗಳುಗಟ್ಟಲೆ ನಡೆಸಿದ ಕಾನೂನು ಬಾಹಿರ ಕಾರ್ಯಾಚರಣೆಯನ್ನು ದಿಲ್ಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದೆ. ಈ ಸಂಬಂಧ ಕಳೆದ ವಾರ ನಡೆದ ವಿಚಾರಣೆಯಲ್ಲಿ ಈಡಿ ತನ್ನ ಉತ್ತರ ದಾಖಲಿಸಲು ನಾಲ್ಕು ತಿಂಗಳ ಸಮಯಾವಕಾಶ ಕೇಳಿದೆ. ಆದರೆ ಮನೆ ಮತ್ತು ವಿಲ್ಲಾ ಯೋಜನಾ ಪ್ರದೇಶದಲ್ಲಿ ನಡೆದ ಈಡಿ ದಾಳಿಗಳು ಎರಡೂ ಕಡೆಗಳಿಂದ ಮಂಡಿಸಲಾದ ವಾದದ ಸ್ಫೂರ್ತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಮೂಲ ನಿಯಮಾವಳಿಗಳನ್ನು ಪಾಲಿಸದೇ ಈಡಿ ಅಧಿಕಾರಿಗಳು ಈ ರೀತಿ ಮನೆಗಳಿಗೆ ನುಗ್ಗಿದ ಕಾರಣ ಕುಟುಂಬದ ವೃದ್ಧ ಸದಸ್ಯರು ಆಘಾತಗೊಂಡಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಡಿ ತಂಡದಲ್ಲಿ ಓರ್ವ ಮಹಿಳಾ ಅಧಿಕಾರಿಯೂ ಇರಲಿಲ್ಲ ಮತ್ತು ಅವರು ಕೇವಲ ಮಹಿಳೆಯರೇ ಇದ್ದ ಮನೆಗೂ ನುಗ್ಗಿದ್ದರು. ಈ ನಾಚಿಕೆಗೇಡಿನ ಉಲ್ಲಂಘನೆಯನ್ನು ಮರೆಮಾಚಲು ಈಡಿ ಇದೀಗ ಅಮಾಯಕರ ವಿರುದ್ಧ “ಕಪ್ಪು ಹಣ”ದ ವಿಚಿತ್ರ ಆರೋಪವನ್ನು ಮಾಡುತ್ತಿದೆ. ಇತ್ತೀಚಿನ ಈ ದಾಳಿಗಳು ಮತ್ತು ಅವರ ವ್ಯವಹಾರವನ್ನು ಸಂಘಟನೆಯೊಂದಿಗೆ ಸಂಪರ್ಕ ಕಲ್ಪಿಸುತ್ತಿರುವುದು ಕಿರುಕುಳ ನೀಡುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ.
ಈಡಿ ಹಾಗೂ ಇತರ ಏಜೆನ್ಸಿಗಳ ನಡೆಗಳ ವಿರುದ್ಧ ಸಂಘಟನೆ ತನ್ನ ಪ್ರಜಾಸತ್ತಾತ್ಮಕ ಮತು ಕಾನೂನು ಹೋರಾಟವನ್ನು ಮುಂದುವರಿಸಲಿದೆ ಎಂದು ಅನೀಸ್ ಅಹ್ಮದ್ ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಬಬುಲ್ ಸುಪ್ರಿಯೋ ಬಳಿಕ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್! ಟಿಎಂಸಿ ಸೇರಿದ ಬಿಜೆಪಿ ಸಂಸದ
ಕೇಂದ್ರವು ರೈತರನ್ನು ಕ್ರೀಡಾಂಗಣದಲ್ಲಿ ಜೈಲಿನಲ್ಲಿಡಲು ಬಯಸಿತ್ತು: ಸಿಎಂ ಕೇಜ್ರಿವಾಲ್
ರೈತರು ಸರ್ಕಾರಗಳನ್ನು ಉರುಳಿಸಬಹುದು: ಸಿಎಂ ಕೆಸಿಆರ್
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ