Connect with us


      




ದೇಶ

ಎರಡನೆ ಬಾರಿಗೆ ಉತ್ತರಖಂಡ ಸಿಎಂ ಆಗಿ ಪುಷ್ಕರ್ ಸಿಂಗ್ ದಾಮಿ ಆಯ್ಕೆ

UNI Kannada

Published

on

ಉತ್ತರಖಂಡ : ಮಾರ್ಚ್ 21 (ಯು.ಎನ್.ಐ.) ಪುಷ್ಕರ್ ಸಿಂಗ್ ದಾಮಿ ಮತ್ತೊಮ್ಮೆ ಉತ್ತರಖಂಡದ ಮುಖ್ಯಮಂತ್ರಿ ಆಗಲಿದ್ದಾರೆ. ಉತ್ತರಖಂಡ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಪುಷ್ಕರ್ ಸಿಂಗ್ ದಾಮಿಯನ್ನ ಆಯ್ಕೆ‌ ಮಾಡಲಾಗಿದ್ದು, ೨ನೇ ಬಾರಿಗೆ ದಾಮಿ ಮುಖ್ಯಮಂತ್ರಿ ಪಟ್ಟಕ್ಕೇರಲಿದ್ದಾರೆ.

ಮುಖ್ಯಮಂತ್ರಿ ಆಯ್ಕೆ ಸೇರಿದಂತೆ ಶಾಸಕಾಂಗ ಪಕ್ಷದ ರಚನೆಗೆ ಕೇಂದ್ರ ಬಿಜೆಪಿಯಿಂದ ವೀಕ್ಷಕರಾಗಿ ನೇಮಕವಾಗಿದ್ದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ‌.

ದಾಮಿ ಕತಿಮ ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭುವನ್ ಕಪ್ರಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಆದರೂ ಅವರನ್ನ ಮತ್ತೆ ಸಿಎಂ ಆಗಿ ಮುಂದುವರೆಸುವ ಜವಾಬ್ದಾರಿ ಶಾಸಕರ ಮೇಲಿದ್ದು, ಅವರಿಗಾಗಿ ಶಾಸಕರು ಕ್ಷೇತ್ರ ತ್ಯಾಗ ಮಾಡಲು ಸಭೆಯಲ್ಲಿ ಸೂಚಿಸಲಾಗಿದೆ‌. ಇದಕ್ಕೊಪ್ಪಿರುವ ಅನೇಕ ಶಾಸಕರು ದಾಮಿಯನ್ನ ಗೆಲ್ಲಿಸಲು ತಮ್ಮ ಕ್ಷೇತ್ರ ಬಿಟ್ಟುಕೊಟ್ಟು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ  ಒಕ್ಕೊರಲಿನಿಂದ ಸಮ್ಮತಿ ಸೂಚಿಸಿದ್ದಾರೆ. ಉತ್ತರಖಂಡದಲ್ಲಿ ಬಿಜೆಪಿ 70 ಸ್ಥಾನಗಳ ಪೈಕಿ 47 ಸ್ಥಾನಗಳಲ್ಲಿ ಗೆದ್ದು ಬೀಗಿದೆ.

Share