Connect with us


      




ಕ್ರೀಡೆ

ಐಸಿಸಿ ಮಹಿಳಾ  ವಿಶ್ವಕಪ್;  ಪಾಕ್‌ ನೊಂದಿಗೆ  ಮೊದಲ ಪಂದ್ಯ ಆಡಲಿರುವ ಭಾರತ

UNI Kannada

Published

on

 

ಲಂಡನ್‌, ಡಿ 15(ಯುಎನ್‌ ಐ) – ಐಸಿಸಿ ಮಹಿಳಾ ವಿಶ್ವಕಪ್ 2022 ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಈ ವಿಶ್ವಕಪ್ ಮಾರ್ಚ್ 4 ರಂದು ಪ್ರಾರಂಭವಾಗಿ ಏಪ್ರಿಲ್ 3 ರಂದು ಫೈನಲ್‌ನೊಂದಿಗೆ ಸಮಾಪನಗೊಳ್ಳಲಿದೆ. ಇನ್ನೂ ಮಾರ್ಚ್ 4 ರಂದು ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ನಡುವಣ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ. ಟೀಂ ಇಂಡಿಯಾ ಮಹಿಳಾ ತಂಡ ಮೊದಲ ಪಂದ್ಯವನ್ನು ಮಾರ್ಚ್ 6 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ನಂತರ ಮಾರ್ಚ್ 10 ರಂದು ನ್ಯೂಜಿಲೆಂಡ್, ಮಾರ್ಚ್ 12 ರಂದು ವೆಸ್ಟ್ ಇಂಡೀಸ್, ಮಾರ್ಚ್ 16 ರಂದು ಇಂಗ್ಲೆಂಡ್, ಮಾರ್ಚ್ 19 ರಂದು ಆಸ್ಟ್ರೇಲಿಯಾ, ಮಾರ್ಚ್ 22 ರಂದು ಬಾಂಗ್ಲಾದೇಶ ಹಾಗೂ ಮಾರ್ಚ್ 27 ರಂದು ದಕ್ಷಿಣ ಆಫ್ರಿಕಾ ತಂಡದ ಎದುರು ಸೆಣಸಲಿದೆ.

ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಆಕ್ಲೆಂಡ್, ಕ್ರೈಸ್ಟ್‌ಚರ್ಚ್, ಡ್ಯುನೆಡಿನ್, ಹ್ಯಾಮಿಲ್ಟನ್, ಟೌರಂಗಾ ಹಾಗೂ ವೆಲ್ಲಿಂಗ್‌ಟನ್‌ನಲ್ಲಿ ಟೂರ್ನಿಯ ಒಟ್ಟು 31 ಪಂದ್ಯಗಳು ನಡೆಯಲಿವೆ. ಲೀಗ್ ಹಂತದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು ಸೆಮಿಸ್‌ಗೆ ಅರ್ಹತೆ ಪಡೆಯುತ್ತವೆ. ಮೊದಲ ಸೆಮಿಫೈನಲ್ ಮಾರ್ಚ್ 30 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿದೆ. ಎರಡನೇ ಸೆಮಿಫೈನಲ್ ಮಾರ್ಚ್ 31 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಫೈನಲ್‌ ಪಂದ್ಯ ಏಪ್ರಿಲ್ 3 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ಇನ್ನೂ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ ಅನ್ನು 2017 -20ವರೆಗೆ ಪರಿಗಣಿಸಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ. ನ್ಯೂಜಿಲೆಂಡ್ ಕೂಡ ಆತಿಥೇಯವಾಗಿ ನೇರವಾಗಿ ಅರ್ಹತೆ ಪಡೆದುಕೊಂಡಿದೆ. ಇತರ ಮೂರು ತಂಡಗಳಾದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್, ಅರ್ಹತಾ ಪಂದ್ಯಗಳನ್ನು ಆಡಬೇಕಾಗಿತ್ತು. ಆದರೆ ಕೋವಿಡ್‌ ಹಿನ್ನಲೆಯಲ್ಲಿ ಪಂದ್ಯಗಳನ್ನು ರದ್ದು ಪಡಿಸಿದ್ದರು. ಇನ್ನೂ ಕಳೆದ ಬಾರಿ ಐಸಿಸಿ ಮಹಿಳಾ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿತು.

Share