Connect with us


      
ಆರೋಗ್ಯ

ಒಮಿಕ್ರಾನ್;‌ ಮಹಾರಾಷ್ಟ್ರದಲ್ಲಿ ಹೊಸದಾಗಿ 8 ಪ್ರಕರಣ… 7 ಮುಂಬೈನಲ್ಲಿಯೇ

UNI Kannada

Published

on

ಮುಂಬೈ, ಡಿ 15 (ಯುಎನ್‌ ಐ) – ಭಾರತದಲ್ಲಿ  ಕೊರೊನಾ  ಹೊಸ ರೂಪಾಂತರಿ  ಓಮಿಕ್ರಾನ್ ಪ್ರಕರಣಗಳು ದಿನದಿನಕ್ಕೂ ಹೆಚ್ಚುತ್ತಿದ್ದು ಜನರಲ್ಲಿ  ಆತಂಕಕ್ಕೆ ಕಾರಣವಾಗಿವೆ.   ದೇಶದಲ್ಲಿ ಒಂದೇ ದಿನದಲ್ಲಿ ಅತಿ ಹೆಚ್ಚು 16 ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಮಂಗಳವಾರ ಹೊಸದಾಗಿ ಎಂಟು  ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮುಂಬೈ ಮಹಾ ನಗರವೊಂದರಲ್ಲೇ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದ ಮಹಾರಾಷ್ಟ್ರದಲ್ಲಿ ಈವರೆಗೆ ದಾಖಲಾಗಿರುವ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ದೆಹಲಿಯಲ್ಲಿ ನಾಲ್ಕು ಹಾಗೂ ರಾಜಸ್ಥಾನದಲ್ಲಿ ನಾಲ್ಕು ಹೊಸ ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಈವರೆಗೆ ದಾಖಲಾಗಿರುವ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ ಹೊರತಾಗಿ ಗುಜರಾತ್ (4), ರಾಜಸ್ಥಾನ (9), ದೆಹಲಿ (6), ಕರ್ನಾಟಕ (3), ಕೇರಳ (1), ಆಂಧ್ರಪ್ರದೇಶ (1) ಮತ್ತು ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ (1) ಪ್ರಕರಣಗಳು ದಾಖಲಾಗಿವೆ.

 

Share