Connect with us


      
ಕರ್ನಾಟಕ

ಮಹಾಲಕ್ಷ್ಮೀ ಲೇ ಔಟ್ ಮಾದರಿ ಕ್ಷೇತ್ರ ನಿರ್ಮಾಣದ ಕನಸು: ಸಚಿವ ಕೆ. ಗೋಪಾಲಯ್ಯ

UNI Kannada

Published

on

MINISTER GOPALAIH

ಬೆಂಗಳೂರು,ಜನೆವರಿ‌ 07(ಯು.ಎನ್.ಐ) ಮಹಾಲಕ್ಷ್ಮಿ ಲೇ‌ ಔಟ್ ‌ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು ತಮ್ಮದಾಗಿದೆ ಎಂದು ಕ್ಷೇತ್ರದ ಶಾಸಕರೂ ಆಗಿರಯವ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 67 ನೇ ವಾರ್ಡ ನ ನಾಗಪುರದ ನಂದಿನಿ ಚಿತ್ರ ಮಂದಿರ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯನ್ನು ಬೆಳಿಗ್ಗೆ ಪರಿಶೀಲಿಸಿ ಅವರು ಮಾತನಾಡಿದರು.

ಈಗಾಗಲೇ ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಉತ್ತಮ ಡಾಂಬರ್ ರಸ್ತೆಗಳು ನಿರ್ಮಾಣ ಮಾಡಲಾಗಿದ್ದು, ಯಾವ ಕಡೆಯಲ್ಲಿಯೂ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಜನರ ತೆರಿಗೆ ಹಣದಲ್ಲಿ ಸರ್ಕಾರ ಕೈಗೊಂಡಿರುವ ಕಾಮಗಾರಿಗಳು ಸಂಪೂರ್ಣ ಗುಣಮಟ್ಟದಿಂದ ಕೂಡಿರಬೇಕು. ಈ ಸಂಬಂಧ ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಒಳಚರಂಡಿ, ಶುದ್ಧ ಕುಡಿಯುವ ನೀರು ಘಟಕಗಳು, ಕೊಳಚೆ ನೀರು ಶುದ್ದೀಕರಣ ಘಟಕಗಳು, ಉತ್ತಮ ಸೌಲಭ್ಯ ಹೊಂದಿರುವ ಸರ್ಕಾರಿ ಆಸ್ಪತ್ರೆಗಳು, ದೆಹಲಿ ಮಾದರಿಯ ಸರ್ಕಾರಿ ಶಾಲೆಗಳು ಹೀಗೆ ಹತ್ತು ಹಲವು ಯೋಜನೆಗಳನ್ನು ಮಾಡಿ ಕ್ಷೇತ್ರವನ್ನು ಮಾದರಿ ಮಾಡಲಾಗುತ್ತಿದೆ. ನನ್ನ ಈ ಅಭಿವೃದ್ಧಿಯ ಕನಸಿಗೆ ಕ್ಷೇತ್ರದ ಮತದಾರ ಬಾಂಧವರು ಸದಾ ಆಶೀರ್ವಾದ ನೀಡುವಂತೆ ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿಮಾಜಿ ಉಪ ಮೇಯರ್ ಹರೀಶ್, ರೈಲ್ವೆ ನಾರಾಯಣ್, ವೆಂಕಟೇಶ್ ಮೂರ್ತಿ, ನಾಗರಾಜ್ ,ವಾರ್ಡಿನ ಅಧ್ಯಕ್ಷ ಮದನ್, ಆರ್ ನಾರಾಯಣ್, ರಾಘವೇಂದ್ರನಾಗರಾಜ್, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು

Share