Published
5 months agoon
By
Vanitha Jainಲಾಹೋರ್, ಡಿಸೆಂಬರ್ 8, (ಯು.ಎನ್.ಐ): ಕಳ್ಳತನದ ಆರೋಪದ ಮೇಲೆ ನಾಲ್ವರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮನಬಂಧಂತೆ ಥಳಿಸಿದ ಘಟನೆ ಪಾಕಿಸ್ತಾನದ ಲಾಹೋರ್ನಿಂದ 150 ಕಿ.ಮೀ ದೂರದಲ್ಲಿರುವ ಫೈಸಲಾಬಾದ್ ಮಾರುಕಟ್ಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಸಾಕಷ್ಟು ಜನರ ಮಧ್ಯೆಯೇ ಯುವತಿ ಸೇರಿದಂತೆ ನಾಲ್ವರು ಮಹಿಳೆಯರ ಬಟ್ಟೆ ಕಳಚಿ ಕೋಲಿನಿಂದ ಹೊಡೆಯುತ್ತಿರುವುದನ್ನು ಬಟ್ಟೆ ಕೊಡುವಂತೆ ಮನವಿ ಮಾಡಿದರೂ ಅಮಾನವೀಯವಾಗಿ ವರ್ತಿಸುವುದನ್ನು ಸಹ ಕಾಣಬಹುದಾಗಿದೆ.
ಮಹಿಳೆಯರು ತಮ್ಮನ್ನು ಹೋಗಲು ಬಿಡುವಂತೆ ಅಳುತ್ತಾ ಅಂಗಲಾಚುತ್ತಾ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಒಂದು ಗಂಟೆ ಕಾಲ ಅವರನ್ನು ಬೀದಿಗಳಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ
ಐವರ ಬಂಧನ
ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆಯಲ್ಲಿ ಭಾಗಿಯಾದ ಐದು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಐವರು ಶಂಕಿತರು ಮತ್ತು ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ವಕ್ತಾರರು ಮಂಗಳವಾರ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ?
ಒಬ್ಬ ಯುವತಿಯು ಸೇರಿದಂತೆ ಐವರು ಫೈಸಲಾಬಾದ್ ಬಳಿಯ ಮಾರುಕಟ್ಟೆಗೆ ಕಸ ಆರಿಸಲು ಹೋಗಿದ್ದರು. ಆಗ ಅವರಿಗೆ ಬಾಯಾರಿಕೆಯಾಗಿದೆ. ಆದ ಕಾರಣ ಆ ಐವರು ಉಸ್ಮಾನ್ ಎಲೆಕ್ಟ್ರೀಕ್ ಅಂಗಡಿಯೊಳಗೆ ಹೋಗು ಕುಡಿಯಲು ನೀರು ಕೊಡುವಂತೆ ಕೇಳಿದೆವು. ಆಗ ಬಂದ ಅಂಗಡಿ ಮಾಲೀಕ ಸದ್ದಾಂ ಅಂಗಡಿಯೊಳಗೆ ಕದಿಯಲು ಬಂದಿದ್ದೀರಾ ಎಂದು ಆರೋಪಿಸಿ ಹೊಡೆಯಲು ಪ್ರಾರಂಭಿಸಿದರು. ನಂತರ ಬಟ್ಟೆಯನ್ನು ಬಿಚ್ಚಿ ಅಮಗಡಿಯಿಂದ ಹೊರಗೆ ಎಳೆದುಕೊಂಡು ಬಂದು ಮತ್ತೆ ಕೋಲಿನಿಂದ ಹೊಡೆದರು. ಆಗ ಅಲ್ಲಿಂದ ಎಲ್ಲರೂ ವಿಡಿಯೋ ಮಾಡಲು ಪ್ರಾರಂಭಿಸಿದರೇ ಹೊರತು ಅವರನ್ನು ತಡೆಯಲು ಯಾರು ಕೂಡ ಮುಂದೆ ಬರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪೊಲೀಸರು ಈ ದುಷ್ಕೃತ್ಯ ಎಸಗಿದ ಅಂಗಡಿ ಮಾಲೀಕ ಸದ್ಧಾಂ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಫೈಸಲಾಬಾದ್ ಪೊಲೀಸ್ ಡಾ. ಅಬಿದ್ ಖಾನ್ ತಿಳಿಸಿದ್ದಾರೆ.
ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಬೇಡಿ ಎಂದ ಯುಜಿಸಿ, ಎಐಸಿಟಿಇ
ಪಸರಿಸಿದ ಬೆಂಕಿಯ ಕೆನ್ನಾಲಿಗೆ; 9 ಮಕ್ಕಳ ಸಾವು, 20 ಮಂದಿಗೆ ಗಾಯ
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸಂಪುಟದಲ್ಲಿ ಯಾರೆಲ್ಲಾ ಇದ್ದಾರೆ?
ಬಾಬರ್ ಅಜಮ್, ರಾಚೆಲ್ ಹೇನ್ಸ್ ಮಾರ್ಚ್ ತಿಂಗಳ ಐಸಿಸಿ ಆಟಗಾರರು
ಕಳ್ಳರ ಜೊತೆ ವಿಧಾನಸಭೆಯಲ್ಲಿ ಕುಳಿತುಕೊಳ್ಳಲ್ಲ ಎಂದ ಇಮ್ರಾನ್ ಖಾನ್
ಪಾಕ್ ಪ್ರಧಾನಿಗೆ ದಂಡ ವಿಧಿಸಿದ ಚುನಾವಣಾ ಆಯೋಗ