Connect with us


      
ಕರ್ನಾಟಕ

ಕಾಂಗ್ರೆಸ್‍ನವರದು ಮತದ ಮೇಲಿನ ಅಂಧತೆ- ಸಿ.ಟಿ.ರವಿ

Published

on

ಬೆಂಗಳೂರು: ಜನೆವರಿ.02 (ಯು.ಎನ್.ಐ): ತಾಲಿಬಾನ್‍ನದು ಮತಾಂಧತೆಯಾದರೆ ಕಾಂಗ್ರೆಸ್‍ನವರದು ಮತದ ಮೇಲಿನ ಅಂಧತೆ. ತಾಲಿಬಾನ್‍ಗೂ ಸ್ಪರ್ಧೆ ಕೊಡುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರ ವರ್ತನೆ ಇರುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಕಿಡಿಕಾರಿದ್ದಾರೆ.
ನಗರದ “ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್”ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಹುಸಂಖ್ಯಾತರ ಭಾವನೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕುಟುಂಬಕ್ಕೆ ಜೋತು ಬಿದ್ದ ಪಕ್ಷವಾಗಿರುವ ಕಾಂಗ್ರೆಸ್ ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿಯನ್ನೂ ಹೊಂದಿಲ್ಲ. ಬಿಜೆಪಿ ತರುವ ಪರಿವರ್ತನೆ – ಅಭಿವೃದ್ಧಿಯನ್ನೆಲ್ಲವನ್ನೂ ವಿರೋಧಿಸಬೇಕು ಎಂಬ ಕೆಟ್ಟ ಚಾಳಿ ದೇಶದ ಅತ್ಯಂತ ಹಿರಿಯ ಅನುಭವಿ ರಾಜಕೀಯ ಪಕ್ಷ ಎಂದುಕೊಂಡಿರುವ ಕಾಂಗ್ರೆಸ್‍ಗೆ ಬಂದಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದರು.
ಇಂದಿನದು ಮಹಾತ್ಮ ಗಾಂಧಿ ಕಾಂಗ್ರೆಸ್ ಅಲ್ಲ. ಈಗಿರುವುದು ಸೋನಿಯಾ ಗಾಂಧಿ ಕಾಂಗ್ರೆಸ್ ಎಂದು ಟೀಕಿಸಿದ ಅವರು, 2014, 2018, 2019ರ ಚುನಾವಣೆ ಫಲಿತಾಂಶ ನೋಡಿಯೂ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಬರದಿದ್ದರೆ ಜನರೇ ಅವರಿಗೆ ಮತ್ತೆ ಮುಂದೆ ಬುದ್ಧಿ ಕಲಿಸುತ್ತಾರೆ. ಕಾಂಗ್ರೆಸ್ಸನ್ನು ಹಿಂದೂಗಳು ನಂಬುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‍ನ ಭ್ರಷ್ಟ ಮತ್ತು ಒಡೆದು ಆಳುವ ನೀತಿಯನ್ನು ಜನರು ಬೆಂಬಲಿಸುವುದಿಲ್ಲ. ಕಾಂಗ್ರೆಸ್‍ನ ಮನಸ್ಥಿತಿಗೆ ಜನರೇ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ನಮ್ಮ ಬಿಜೆಪಿ ಪಕ್ಷದಲ್ಲಿ ಪಕ್ಷದ ಅಧ್ಯಕ್ಷರೇ ಸುಪ್ರೀಂ. ಆದರೆ, ಬೆಳಗಾವಿಯಲ್ಲಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರಿಗೆ ತಮ್ಮನ್ನು ಬಿಟ್ಟು ಸಭೆ ಮಾಡಬೇಡ ಎಂದದ್ದು ನೋಡಿದರೆ, ಇಲ್ಲಿ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಮೋ ಅಥವಾ ವಿಪಕ್ಷ ನಾಯಕರು ಸುಪ್ರೀಂ ಸ್ಥಾನ ಪಡೆದಿದ್ದಾರೆಯೋ ಎಂಬ ಸಂದೇಹ ಮೂಡುತ್ತದೆ. ಕಾಂಗ್ರೆಸ್ ಕಾಲದಲ್ಲಿ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯ್ದೆಯನ್ನು ಮತ್ತೆ ಅನುಷ್ಠಾನಕ್ಕೆ ತರುವುದನ್ನು ಅದೇ ಪಕ್ಷದವರು ವಿರೋಧಿಸುತ್ತಿದ್ದಾರೆ. ಬಲವಂತ, ಪ್ರಲೋಭನೆಯ ಮತಾಂತರ ನಿಯಂತ್ರಿಸುವ ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಯಾವುದೋ ಒಂದು ಸಮುದಾಯವನ್ನು ಹೊರಗಿಟ್ಟು ಅಥವಾ ಒಂದು ಸಮುದಾಯವನ್ನು ಒಳಗಿಟ್ಟು ಈ ಕಾಯ್ದೆ ತಂದಿಲ್ಲ. ಮತಾಂತರಕ್ಕೆ ಮಾತ್ರ ನಿಯಂತ್ರಣ ಹೇರಿದೆ. ಮತಾಂತರ ಆಗುವುದಕ್ಕೆ ಕೆಲವು ನಿಯಮಾವಳಿ ರೂಪಿಸಿದೆ. ದೇವಸ್ಥಾನಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೂ ವಿರೋಧ, ಲವ್ ಜಿಹಾದ್ ಕಾಯ್ದೆಗೂ ವಿರೋಧ, ಯುವತಿಯ ಮದುವೆ ವಯಸ್ಸನ್ನು ಹೆಚ್ಚಿಸಿದ್ದನ್ನೂ ಕಾಂಗ್ರೆಸ್‍ನವರು ಆಕ್ಷೇಪಿಸುತ್ತಾರೆ ಎಂದು ಖಂಡಿಸಿದರು.
ಮೊದಲು ಪೌರತ್ವ ಕೊಡುವ ವಿಧೇಯಕ ಸಿಎಎ ತಂದಾಗ ಕಾಂಗ್ರೆಸ್ ವಿರೋಧಿಸಿತು. ಜವಾಹರಲಾಲ್ ನೆಹರೂ ಅವರು ಪ್ರಧಾನಿ ಆಗಿದ್ದಾಗ ಅದನ್ನು ತಂದಿದ್ದರು. ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾದಾಗಲೂ ಅದನ್ನೇ ಮಾಡಿದ್ದರು. ಆದರೆ, ಅದನ್ನು ಬಿಜೆಪಿ ತಂದಾಗ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು. ಅಲ್ಲಿಂದ ಶುರುವಾಗಿ 370ನೇ ವಿಧಿ ರದ್ದು ಪಡಿಸಿದಾಗ ಈ ವಿಧಿ ಮತ್ತೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಮುಖಂಡರು ಪುಂಖಾನುಪುಂಖವಾಗಿ ಹೇಳಿಕೆ ಕೊಟ್ಟರು ಎಂದು ಸಿ.ಟಿ.ರವಿ ವಿವರಿಸಿದರು.
ದೇವಸ್ಥಾನಕ್ಕೆ ದಾನ ಕೊಡುತ್ತಾರೆ. ಅದರ ಹಣದಲ್ಲಿ ದೇವಾಲಯ ಅಭಿವೃದ್ಧಿ, ಸಮಾಜಮುಖಿ ಕೆಲಸ ಆಗಬೇಕು. ಬ್ರಿಟಿಷರು, ಔರಂಗಜೇಬನಿಗೆ ದೇವಸ್ಥಾನದ ಹಣದ ಅನಿವಾರ್ಯತೆ ಇತ್ತು. ದೇವಸ್ಥಾನ ಸಮಾಜದ ಸ್ವತ್ತು. ದೇವಸ್ಥಾನದ ಸ್ವಾಯತ್ತತೆ ಕುರಿತು ಮುಖ್ಯಮಂತ್ರಿಗಳ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಮತ್ತು ಅದರ ಪರವಾಗಿ ನಿಲ್ಲುತ್ತೇವೆ. ಧರ್ಮಸ್ಥಳದ ಬೆಳವಣಿಗೆ ಮತ್ತು ದೇವಸ್ಥಾನಗಳ ಪುನರುತ್ಥಾನದ ಅಧ್ಯಯನಕ್ಕೆ ಕೆಪಿಸಿಸಿ ಅಧ್ಯಕ್ಷರು ಮುಂದಾಗಲಿ ಎಂದು ಸವಾಲೆಸೆದರು.
ದೇವಾಯಲದ ಆದಾಯದ ಮೇಲಿನ ಪ್ರೀತಿಯಿಂದ ಬ್ರಿಟಿಷರು ಅವುಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸ್ವಾತಂತ್ರ್ಯ ಬಂದು 75 ವರ್ಷದ ಬಳಿಕವೂ ದೇವಾಲಯದ ಮೇಲೆ ಆದಾಯದ ಮೇಲೆ ಕಣ್ಣಿಡುವುದು ಸ್ವಾತಂತ್ರ್ಯದ ನೈಜ ಅರ್ಥಕ್ಕೇ ವಿರೋಧ ಮೂಡಿಸುವಂತಿದೆ. ಕೆಪಿಸಿಸಿ ಅಧ್ಯಕ್ಷರು ಸರಕಾರ ಭಸ್ಮವಾಗುವ ಹೇಳಿಕೆ ನೀಡಿದರು. ಅವರನ್ನು ಅವರೇ ಭಸ್ಮಾಸುರ ಎಂದುಕೊಂಡಿದ್ದಾರೆ. ಆದರೆ, ಅವರೇ ಶಾಪಗ್ರಸ್ತರಾಗಿ ಬೇಲ್‍ನಲ್ಲಿದ್ದಾರೆ. ಸಿಬಿಐ, ಇ.ಡಿ ಕುಣಿಕೆಯಲ್ಲಿದ್ದಾರೆ. ಕುಣಿಕೆ ಬಿಗಿಯಾದರೆ ರಾಜಕೀಯವಾಗಿ ಕಾಂಗ್ರೆಸ್ ನಾಯಕರು ಉಳಿಯುವುದೇ ಕಷ್ಟ ಎಂದು ಭವಿಷ್ಯ ನುಡಿದರು.
ಆಸೆ ಆಮಿಷದ ಮತ್ತು ಬಲಪ್ರಯೋಗದ ಮತಾಂತರದ ಪರ ಎಂದು ಕಾಂಗ್ರೆಸ್ ಹೇಳಿಕೆ ನೀಡಲಿ ಎಂದು ಸವಾಲೆಸೆದ ರವಿಕುಮಾರ್, ಸೆಕ್ಯುಲರ್ ಹೆಸರಿನಲ್ಲಿ ಕಾಂಗ್ರೆಸ್ ಹಿಂದೂ ಭಾವನೆಗಳನ್ನು ಘಾಸಿ ಮಾಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಕುಂಬಳಕಾಯಿ ಕಳ್ಳ ಎಂದೊಡನೆ ಇವರು ಹೆಗಲು ಮುಟ್ಟಿ ನೋಡಿಕೊಳ್ಳುವುದ್ಯಾಕೆ? ಮತಾಂತರ ಎಂದರೆ ಅದು ರಾಷ್ಟ್ರಾಂತರಕ್ಕೆ ಸಮ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಅಂಬೇಡ್ಕರರು ನಾನು ನನ್ನ ಸಾಂಸ್ಕೃತಿಕ ಬೇರನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದರಲ್ಲದೆ, ಭಾರತೀಯ ಸಾಂಸ್ಕೃತಿಕತೆ ಇರುವ ಬೌದ್ಧ ಧರ್ಮಕ್ಕೆ ಸೇರಿದ್ದರು. ಬೌದ್ಧ ಧರ್ಮ ಹಿಂದೂ ಧರ್ಮಕ್ಕೆ ಸುಧಾರಣೆ ತಂದಿದೆ ಎಂದೂ ಅಂಬೇಡ್ಕರ್ ಹೇಳಿರುವುದಾಗಿ ಸಿ.ಟಿ.ರವಿ ಸ್ಮರಿಸಿದರು.
ಮೇಕೆದಾಟು ಸಂಬಂಧ ಕೆಪಿಸಿಸಿ ಅಧ್ಯಕ್ಷರು ಆರೋಗ್ಯ ಸುಧಾರಣೆಗಾಗಿ ಪಾದಯಾತ್ರೆ ಮಾಡಲಿ ಎಂದ ಸಿ.ಟಿ.ರವಿ , ಆಂತರಿಕ ಗದ್ದುಗೆಯ ಗುದ್ದಾಟಕ್ಕಾಗಿ ಮೇಲುಗೈ ಸಾಧನೆಗೆ ಈ ಪಾದಯಾತ್ರೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರಕಾರ 6 ವರ್ಷ ಕಾಲ ಈ ಯೋಜನೆಗಾಗಿ ಮಾಡಿದ ಪ್ರಯತ್ನಗಳೇನು ಎಂದು ವಿವರ ನೀಡಬೇಕು. ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆ ಅನುಮೋದನೆ ಸಿಗಬೇಕಾಗಿದೆ. ಯೋಜನೆಗೆ ರಾಜ್ಯ ಸರಕಾರ ಬದ್ಧತೆಯನ್ನೂ ವ್ಯಕ್ತಪಡಿಸಿದೆ. ಹೀಗಿರುವಾಗ ತಮ್ಮ ಪಾದಯಾತ್ರೆ ಯಾವ ಉದ್ದೇಶಕ್ಕೆ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.
ಚುನಾವಣೆಯಿಂದ ಚುನಾವಣೆಗೆ ಪರಿಸ್ಥಿತಿಗಳು ಭಿನ್ನ ಇರುತ್ತವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಥಳೀಯ ನಾಯಕತ್ವ ಶೇ 50ರಷ್ಟು ಪ್ರಭಾವ ಬೀರುತ್ತದೆ. ಅಲ್ಲಿನ ರಾಜಕೀಯ ಸನ್ನಿವೇಶಗಳೇ ಬೇರೆ ಇರುತ್ತವೆ. ವಿಧಾನಸಭೆಯ ರಾಜಕೀಯ ಸನ್ನಿವೇಶಗಳೇ ಬೇರೆ ಇರುತ್ತವೆ. ಈಗ ರಾಜ್ಯದ ಜನ ಜೈಲ್ ಮತ್ತು ಬೇಲ್, ಭ್ರಷ್ಟಾಚಾರದ ಮಾದರಿಯನ್ನು ಬಯಸುತ್ತಿಲ್ಲ. ಅಭಿವೃದ್ಧಿ ಮಾಡುವ ರಾಜಕಾರಣವನ್ನು ಬಯಸುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನನ್ನ ನಾಯಕತ್ವದಲ್ಲೇ ಚುನಾವಣೆ ಎನ್ನುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್‍ನಲ್ಲಿ ಸಾಮೂಹಿಕ ನಾಯಕತ್ವದ ಧ್ವನಿಯೂ ಕೇಳುತ್ತಿದೆ. ಒಂದು ಚುನಾವಣೆ ಆಧಾರದಲ್ಲಿ ಇನ್ನೊಂದು ಚುನಾವಣೆಯನ್ನು ಅಳೆಯಲಾಗದು.ರಾಜ್ಯದಲ್ಲಿ ಚುನಾವಣೆ ನೇತೃತ್ವದ ಕುರಿತು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ. ಚುನಾವಣೆ ಹಿನ್ನಡೆ, ಪಕ್ಷ- ಸರ್ಕಾರದ ಕಾರ್ಯವೈಖರಿ ಬಗ್ಗೆ ಆಗಾಗ ಅವಲೋಕನ ನಡೆಯುತ್ತದೆ .
ನಾನು ಯಾವುದೇ ಹುದ್ದೆಯ ರೇಸ್‍ನಲ್ಲಿಲ್ಲ. ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಸುದೈವವಶಾತ್ ಪಕ್ಷ ಈಗಾಗಲೇ ನನಗೆ ರಾಷ್ಟ್ರಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದೆ ಎಂದರು.
ಮತಾಂತರ ನಿಯಂತ್ರಣ ಮಸೂದೆಯಡಿ ಅವರವರ ಚಟುವಟಿಕೆ ನಡೆಸಲು ಅಡ್ಡಿ ಇಲ್ಲ. ಕಪಾಲಿ ಬೆಟ್ಟದ ಹೆಸರು ಬದಲಿಸಿ ಅಲ್ಲಿ ಏಸು ಪ್ರತಿಮೆ ನಿರ್ಮಿಸಲು ಮುಂದಾದಾಗ ಸಮಸ್ಯೆ ಆಗುತ್ತದೆ. ಒಂದರ ಅಸ್ತಿತ್ವವನ್ನು ಅಳಿಸಿ ಮತ್ತೊಂದರ ಅಸ್ತಿತ್ವಕ್ಕೆ ಮುಂದಾದಾಗ ಸಂಘರ್ಷ ಆಗುತ್ತದೆ. ಆರೆಸ್ಸೆಸ್ ಶಾಖೆಗಳನ್ನು ಮಾಡುತ್ತಾ ರಾಷ್ಟ್ರಭಕ್ತಿ ತುಂಬುತ್ತಿದೆ. ಆದರೆ, ಸಂಘದ ಕುರಿತು ತಪ್ಪು ಕಲ್ಪನೆ ಮೂಡಿಸುತ್ತಾ ಬರಲಾಗಿದೆ ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.

ಕರ್ನಾಟಕ

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

Published

on

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ ಆಡಳಿತ ಬರಬಹುದು. ನಾನು ಕೊಡುವ

ಡೋಸ್ ಎಷ್ಟರ ಮಟ್ಟಿಗೆ ವರ್ಕ್ ಆಗುತ್ತೆ ನೋಡೋಣ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ.‌ಇಬ್ರಾಹಿಂ ಮಾರ್ಮಿಕವಾಗಿ ಹೇಳಿದರು.

ಅವರಿಂದು ಸುದ್ದಿಗಾರರ ಜೊತೆ ಮಾತನಾಡಿ,  ಸಾಮಾಜಿಕ ನ್ಯಾಯ ಕೇಳಿದ್ರೆ ಈಗ ಮಾಡಿದ್ದಾರೆ. ಬೆಳೆ ಕೊಯ್ಲು‌ ಮಾಡಿ ನಮ್ಮನ್ನ ಹೊರ ಹಾಕಿದ್ದಾರೆ ಎಂದು ಆಕ್ತೋಶ ವ್ಯಕ್ತಪಡಿಸಿದ ಅವರು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರದಿಂದಲೂ ನನಗೆ ರಾಜಕೀಯ ಆಹ್ವಾನ ಬಂದಿದೆ ಅಖಿಲೇಶ್, ಮಮತಾ ಬ್ಯಾನರ್ಜಿ ಅಥವಾ ದೇವೇಗೌಡ ಇವರಲ್ಲಿ ಯಾರ ಜೊತೆ ರಾಜಕೀಯವಾಗಿ ಗುರುತಿಸಿಕೊಳ್ಳಬೇಕು ಯೋಚನೆ ಮಾಡ್ತೀನಿ. 3 ವರ್ಷದ ವಿಧಾನ ಪರಿಷತ್ ಸ್ಥಾನಕ್ಕೂ ಶೀಘ್ರ ರಾಜೀನಾಮೆ ನೀಡುವ ಬಗ್ಗೆಯೂ ವಿಚಾರ ಮಾಡ್ತೀನಿ ಎಂದರು.

ಹೆಚ್.ಡಿ. ಕುಮಾರಸ್ವಾಮಿಯಿಂದ ಮುಂಜಾನೆ ಕರೆ ಬಂದಿತ್ತು. ಕಾಂಗ್ರೆಸ್ ನವರು ಕಾಲ್ ಮಾಡಿದ್ರು, ನಾ ಅವರ ಬಗ್ಗೆ ಹೇಳಿದ್ರೆ
120 ಇಂದ 80 ಬಂತು 80 ರಿಂದ ಎಷ್ಟು ಬರಲಿದೆ ನೋಡಿ‌ ಎಂದು ಆಕ್ರೋಶ ವ್ಯಕ್ತಡಿಸಿದ ಇಬ್ರಾಹಿಂ ನನಗೆ ಸ್ಥಾನ ತಪ್ಪಿದರ ಬಗ್ಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ಎಂದರು

ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಅದು ಕೇಶವ ಕೃಪಾ, ನಾನು ಬಸವ ಕೃಪ ಹೇಗೆ ಒಂದಾಗಲು ಸಾಧ್ಯ ಎಂದರು.

ಜಮೀರ್ ಜೊತೆಗಿನ ಮಾತುಕತೆ ಹೇಳಲ್ಲ. ಅವರು ಕಾಂಗ್ರೆಸ್ ನಲ್ಲಿ ಇದಾರೆ. ಕಾಂಗ್ರೆಸ್ ನ ಎಲ್ಲಾ ಮುಸ್ಲಿಂ ನಾಯಕರು ನನ್ನ ಜೊತೆ ಅನ್ಯೋನ್ಯವಾಗಿದ್ದಾರೆ ಎಂದರು.

ಯಡಿಯೂರಪ್ಪ ಜೊತೆ ಒಂದಾಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಎಂ. ಇಬ್ರಾಹಿಂ ಕಾದು ನೋಡಿ, ಕಾಲಾಯ ತಷ್ಯೇಯೇ ನಮಃ ಎಂದು ಹೇಳಿದರು.

Continue Reading

ಕರ್ನಾಟಕ

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

Published

on

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ನಿಯೋಗದ ಅಹವಾಲುಗಳನ್ನು ಮುಖ್ಯಮಂತ್ರಿ ಆಲಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಮತ್ತು ಭದ್ರಾ ಉಪಕಣವೆಯ 2 ಮತ್ತು 3 ನೇ ಹಂತದ ಯೋಜನೆಗೆ ಹಣ ಬಿಡುಗಡೆ ಹಾಗೂ ಜಿಲ್ಲೆಯ ಜಲಧಾರೆ ಯೋಜನೆಗೆ ಬಜೆಟ್ ಹಣ ನೀಡುವಂತೆ ನಿಯೋಗ ಮನವಿ ಮಾಡಿದೆ. ನಿಯೋಗದಲ್ಲಿ ಉಪ ಸಭಾಪತಿ ಪ್ರಾಣೇಶ್, ಶಾಸಕ ಸುರೇಶ್, ಬೆಳ್ಳಿ ಪ್ರಕಾಶ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್‌ ಸಹ ಇದ್ದರು.

ಸಿಎಂ ಭೇಟಿ ಬಳಿಕ ಜೀವರಾಜ್ ಅವರು ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಮ್ಮ ಜಿಲ್ಲೆಯಲ್ಲಿ ನನಗಿಂತಲೂ ಹಿರಿಯರಿದ್ದಾರೆ, ಮೂಡಿಗೆರೆ ಎಂ ಪಿ ಕುಮಾರಸ್ವಾಮಿ ಇದಾರೆ, ತರೀಕೆರೆ ಸುರೇಶ್ ಇದಾರೆ, ಅವರಿಗೆ ಕೊಡಲಿ. ಸಿ ಟಿ ರವಿ ಮಾರ್ಗದರ್ಶನದಲ್ಲಿ ಮುಂದೆ‌ ಹೋಗ್ತೀವಿ.
ಸಂಪುಟ ವಿಸ್ತರಣೆ ಸಮಯದಲ್ಲಿ ನಮ್ಮ ಜಿಲ್ಲೆಗೆ ಅವಕಾಶ ಸಿಕ್ಕರೆ ಸಿಗಬಹುದು.. ಸಿಗದೇನೂ ಇರಬಹುದು. ಯಾರಿಗೆ ಕೊಟ್ಟರು ಸಂತೋಷ ಕೊಟ್ಟಿಲ್ಲ ಅಂದ್ರೂ ಸಂತೋಷ ಎಂದರು.

ಬಿಜೆಪಿ ಶಾಸಕರು ಕಾಂಗ್ರೆಸ್ನವರ ಸಂಪರ್ಕದಲ್ಲಿರುವ ವಿಚಾರವಾಗಿ ಮಾತನಾಡಿ, ನಮ್ಮ ಪಕ್ಷದಿಂದ ಯಾರು ಹೋಗೋದಿಲ್ಲ. ಚುನಾವಣಾ ಹತ್ತಿರ ಬಂದಾಗ ಏನ್ ಆಗುತ್ತೆ ಅನ್ನೋದು ದೇವರೊಬ್ಬರಿಗೆ ಮಾತ್ರ ಗೊತ್ತು.‌ ಒಮ್ಮೆ ಪಕ್ಷಕ್ಕೆ ಸೇರ್ಪಡೆಯಾದರೆ ಅಲ್ಲಿ ವಲಸಿಗ ಮೂಲ ಅನ್ನೋದು ಬರೋದಿಲ್ಲ.‌ ಈಶ್ವರಪ್ಪ ಉಸ್ತುವಾರಿಯಾಗಿ ಬಂದಿರೋದನ್ನ ನಾವು ಸ್ವಾಗತ ಮಾಡ್ತೀವಿ ಎಂದು ಹೇಳಿದರು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ.‌ ಸಿ.ಟಿ ರವಿ ನೇತೃತ್ವದಲ್ಲಿ ನಮ್ಮ ಪಕ್ಷದ ಚಿಕ್ಕಮಗಳೂರು ಶಾಸಕರೆಲ್ಲ ಸಿಎಂ ಭೇಟಿ ಮಾಡಿದ್ವಿ. ಚಿಕ್ಕಮಗಳೂರು ಜಿಲ್ಲೆ ಸಮಸ್ಯೆ ಬಗ್ಗೆ ಚರ್ಚೆಗೆ ತೆರಳಿದ್ವಿ. ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಮತ್ತು ಮೂಡಿಗೆರೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಭದ್ರಾ ಉಪಕಣಿವೆಯ ಕಾಮಗಾರಿ, ಜಿಲ್ಲೆಯ ಜಲಧಾರೆಯ ಯೋಜನೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮನವಿ ಸಲ್ಲಿಸಿ ಬಂದಿದ್ದೇವೆ ಎಂದು ವಿವರಿಸಿದರು.

Continue Reading

ಕರ್ನಾಟಕ

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

Published

on

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ.

ಅವರಿಂದು ಸುದ್ದಿಗಾರರ ಜೊತೆ ಮಾತನಾಡಿ, ಇಬ್ರಾಹಿಂ ಅವರು ಹಿರಿಯ ರಾಜಕಾರಣಿ.‌ ನಮ್ಮ ಪಕ್ಷ ಹಾಗೂ ದೇವೇಗೌಡರ ಏಳು ಬೀಳುವಿನಲ್ಲೊಯೂ ಜೊತೆಯಾದವರು. ವಿರೋಧ ಪಕ್ಷದ ನಾಯಕರ ಸ್ಥಾನಕ್ಕೆ ಅವರ ಹೆಸರು ಕೇಳಿ‌ ಬಂದಿತ್ತು. ಆ ಸ್ಥಾನ ದೊರೆತರೆ ನಾಯಕರ ಉಪಯೋಗ ಮಾಡಿಕೊಳ್ಳಿ. ನಿಮ್ಮನ್ನು ದುರುಪಯೋಗ ಪಡಿಸಿಕೊಳ್ಳಲ್ಲ ಎಂದಿದ್ದೆ ಎಂದು ವಿವರಿಸಿದರು.

ಅವರಿಗೆ ಇನ್ನೂ ದೇವೇಗೌಡರು ಹಾಗೂ ನಮ್ಮ ಪಕ್ಷದ ಬಗ್ಗೆ ವ್ಯಾಮೋಹ ಇದೆ.‌ ಅವರು ಬಂದರೆ ಸ್ವಾಗತ. ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ. ಇಂದೂ ಕೂಡ ನಾನು ಕರೆ ಮಾಡಿ ಮಾತಾಡಿದ್ದೀನಿ. ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ. ಜನತಾ ಪರಿವಾರದ ನಾಯಕರು ಸೆಟ್ಟಲ್ ಆಗಿದ್ದಾರೆ. ಅವರನ್ನು ವಾಪಸ್ ತರುವ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.

ಯವ ನಾಯಕತ್ವ ತರುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ. ಹೊಸ ನಾಯಕರ ನೇಮಕಾತಿ‌ ಮಾಡಲಾಗುತ್ತಿದೆ. ಹೊಸ ನಾಯಕರ ಸೃಷ್ಟಿ ಮೊದಲಿನಿಂದಲೂ ನಡೆಯುತ್ತಿದೆ. ಜೆಡಿಎಸ್ ಮೊದಲಿನಿಂದಲೂ ಗುರು ಮನೆ ಇದ್ದಂತೆ. ಹಲವರು ನಾಯಕರಾಗಿ‌ ಬೆಳೆದು ಹೋಗಿದ್ದಾರೆ ಎಂದು ಪ್ರತಿಪಾದಿಸಿದರು.

Continue Reading
Advertisement
ದೇಶ16 mins ago

ಅಧಿಕೃತವಾಗಿ ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಕಂಪೆನಿ ಹಸ್ತಾಂತರ

ನವದೆಹಲಿ: ಜನೆವರಿ 27  (ಯು.ಎನ್.ಐ.) ಕೇಂದ್ರ ಸರ್ಕಾರವು ಗುರುವಾರ ಅಧಿಕೃತವಾಗಿ ಏರ್ ಇಂಡಿಯಾವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸಿದೆ. 69 ವರ್ಷಗಳ ಬಳಿಕ ಪುನಃ ಟಾಟಾ ಮಡಿಲಿಗೆ ಏರ್...

ಕರ್ನಾಟಕ40 mins ago

ಉ.ಪ್ರ.‌ಚುನಾವಣೆ ನಂತರ ರಾಜ್ಯದಲ್ಲಿ‌ಮಹತ್ವದ ಬದಲಾವಣೆ: ಸಿ.ಎಂ ಇಬ್ರಾಹಿಮ್

ಬೆಂಗಳೂರು: ಜನೆವರಿ 27 (ಯು.ಎನ್.ಐ.)‌ ನಾನು ಹೇಳಿದಂತೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳು ಘಟಿಸುತ್ತಾ ಬಂದಿವೆ.‌ ಉತ್ತರ ಪ್ರದೇಶ ಚುನಾವಣಾ ಬಳಿಕ ಸಾರ್ವತ್ರಿಕ ಚುನಾವಣೆ, ಇಲ್ಲವೇ ರಾಷ್ಟ್ರ ಪತಿ...

ದೇಶ54 mins ago

ವೈಯಕ್ತಿಕ ದ್ವೇಷ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ದುಷ್ಟರು

ನವದೆಹಲಿ: ಜನೆವರಿ 27 (ಯು.ಎನ್.ಐ.) ವೈಯಕ್ತಿಕ ದ್ವೇಷದ ಕಾರಣ ಮಹಿಳೆಯನ್ನು ಅಪಹರಿಸಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಟರು ಚಪ್ಪಲಿ ಹಾರ ಹಾಕಿ, ಮುಖಕ್ಕೆ ಕಪ್ಪು...

ಕರ್ನಾಟಕ2 hours ago

ಸಿಎಂ ಭೇಟಿ ಮಾಡಿದ ಚಿಕ್ಕಮಗಳೂರು ಶಾಸಕರ ನಿಯೋಗ

ಬೆಂಗಳೂರು: ಜನೆವರಿ 27 (ಯು.ಎನ್.ಐ.) ಶಾಸಕ ಹಾಗೂ ಬಿಜೆಪಿ ಪ್ರಧಾನ ಕಾರ್ಯಯದರ್ಶಿ ಸಿ ಟಿ ರವಿ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲೆ ಶಾಸಕರು ಮುಖ್ಯಮಂತ್ರಿ‌ ಬಸವರಾಜ ಎಸ್ ಬೊಮ್ಮಾಯಿ...

ಕರ್ನಾಟಕ2 hours ago

ಸಿಎಂ‌ ಇಬ್ರಾಹಿಂ ಬಂದರೆ ಸ್ವಾಗತ: ಎಚ್‌‌‌ಡಿಕೆ

ಬೆಂಗಳೂರು:ಜನೆವರಿ 27 (ಯು.ಎನ್.ಐ.) ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಿಎಂ‌ ಇಬ್ರಾಹಿಂ‌ ಅವರು ಜಾತ್ಯತೀತ ಜನತಾ ದಳಕ್ಕೆ ಬಂದರೆ ಸ್ವಾಗತಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.‌ಕುಮಾರಸ್ವಾಮಿ ಹೇಳಿದ್ದಾರೆ....

ದೇಶ3 hours ago

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಅಂತ್ಯ; ಶಾಲಾ-ಕಾಲೇಜುಗಳು ಬಂದ್

ಹೊಸದಿಲ್ಲಿ: ಜನೆವರಿ 27 (ಯು.ಎನ್.ಐ.) ರಾಷ್ಟ್ರ ರಾಜಧಾನಿ ಜನರಿಗೆ ದೆಹಲಿ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿರುವ  ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಅನ್ನು...

ಕ್ರೀಡೆ3 hours ago

ಟೀಂ ಇಂಡಿಯಾ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಟ್ವಿಟರ್ ಖಾತೆ ಹ್ಯಾಕ್

ಮುಂಬೈ: ಜನೆವರಿ ೨೭ (ಯು.ಎನ್.ಐ.) ಇತ್ತೀಚೆಗೆ ಬಿಟ್‌ಕಾಯಿನ್ ಸ್ಕ್ಯಾಮರ್ ಗಳು ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದು, ಈಗಾಗಲೇ ಸಾಕಷ್ಟು ಮಂದಿಯ ಟ್ವಿಟರ್ ಖಾತೆ ಇದೇ ವಿಚಾರಕ್ಕೆ ಹ್ಯಾಕ್...

ಸಿನೆಮಾ4 hours ago

ನಾಗಚೈತನ್ಯ, ಸಮಂತಾ ವಿಚ್ಛೇದನಕ್ಕೆ ನಟ ನಾಗಾರ್ಜುನ ಕೊಟ್ಟ ಕಾರಣ ಏನು?

ಹೈದರಾಬಾದ್: ಜನೆವರಿ 27 (ಯು.ಎನ್.ಐ.) ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ...

ದೇಶ4 hours ago

ಅನ್ಯ ಜಾತಿ ಹುಡುಗಿ ಮದುವೆಯಾದ ಮಗ: ತಾಯಿ ಮೇಲೆ ಹಲ್ಲೆ

ಚೆನ್ನೈ: ಜನೆವರಿ 27 (ಯು.ಎನ್.ಐ.) ಅನ್ಯ ಜಾತಿಯ ಹುಡುಗಿಯನ್ನು ಮಗ ವಿವಾಹವಾದ ಕಾರಣ ತಾಯಿಯನ್ನು ದೀಪದ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ತಮಿಳುನಾಡಿನ ವಿರುದುನಗರ ಜಿಲ್ಲೆಯ ತಿರುಚುಲಿ...

ಸಿನೆಮಾ4 hours ago

‘ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾರೆ’ – ನಟಿ ಶ್ವೇತಾ ತಿವಾರಿ

ಭೋಪಾಲ್: ಜನೆವರಿ 27 (ಯು.ಎನ್.ಐ.) ಕಿರುತೆರೆ ಹಾಗೂ ಹಿಂದಿ ಫಿಲಂ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ...

ಟ್ರೆಂಡಿಂಗ್

Share