Connect with us


      
ಸಾಹಿತ್ಯ

ಕಾವ್ಯಕ್ಕೆ ಖಡ್ಗದ ಸ್ವರೂಪ ನೀಡಿದವರು

Published

on

ಸಿದ್ದಲಿಂಗಯ್ಯ. ಹೀಗೆಂದೊಡನೆ ಯಾವ ಸಿದ್ದಲಿಂಗಯ್ಯ ಎಂಬ ಪ್ರಶ್ನೆ ಎದುರಾಗಬಹುದು. ದಲಿತ ಕವಿ. ಹೀಗೆಂದೊಡನೆ ಮುಗುಳ್ನಗೆ ಹೊದ್ದ ಚಿತ್ರ ಚಿತ್ತಭಿತ್ತಿಯಲ್ಲಿ ಮೂಡುತ್ತದೆ. “ಖಡ್ಗಕ್ಕಿಂತ ಲೇಖನಿ” ಹರಿತ ಇಂಥದ್ದೊಂದು ನಾಣ್ಣುಡಿ ಪತ್ರಿಕಾರಂಗದಲ್ಲಿ ಇದೆ. ಕಾವ್ಯವೂ ದಲಿತ ವಿರೋಧಿ ವ್ಯವಸ್ಥೆ ಎದೆ ನಡುಗಿಸಬಲ್ಲದು ಎಂದು ಇವರೇ ತೋರಿಸಿದರು. ಕಾವ್ಯಕ್ಕೆ ಖಡ್ಗದ ಸ್ವರೂಪ ನೀಡಿದರು.

ಮಂಚನಬೆಲೆ. ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕಿನ ಪುಟ್ಟಹಳ್ಳಿ. ಇಲ್ಲಿ ೧೯೫೪ರಲ್ಲಿ ಸಿದ್ದಲಿಂಗಯ್ಯ ಜನನ. ತಂದೆ ದೇವಯ್ಯ-ತಾಯಿ ವೆಂಕಮ್ಮ. ಚುರುಕಿನ ಬಾಲಕ. ಆಗಲೂ ಮೊಗದಲ್ಲಿ ಸದಾ ತುಂಟ ನಗು. ಬೆಳೆದದ್ದು ಬೆಂಗಳೂರಿನಲ್ಲಿ. ಶ್ರೀರಾಮಪುರದಲ್ಲಿ ವಾಸ. ಮಲ್ಲೇಶ್ವರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ.

ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ. ಕಲಿತ ವಿವಿಯಲ್ಲಿಯೇ ಸಂಶೋಧಕ- ಅಧ್ಯಾಪಕ. ಇಷ್ಟರಲ್ಲಾಗಲೇ ಅವರ ಕಾವ್ಯದ ಶಕ್ತಿ ಬೆಳಕು ಕಾಣಲಾರಂಭಿಸಿತ್ತು. ೧೯೭೦ರ ದಶಕ. ಕರ್ನಾಟಕದಲ್ಲಿ ದಲಿತ ಚಳವಳಿ ಉಗಮ. ಅದು ಹಳ್ಳಿಹಳ್ಳಿಗೂ ತಲುಪಿತು. ಇದರಲ್ಲಿ ಸಿದ್ದಲಿಂಗಯ್ಯ ಅವರ ಕಾವ್ಯದ ಶಕ್ತಿಯೂ ಅಡಕವಾಗಿತ್ತು. ಅದೊಂದು ಸಿಡಿಗುಂಡು. ಸಮುದಾಯ ಹಾಡುತ್ತಿದ್ದರೆ ದಲಿತ ವಿರೋಧಿ ಶಕ್ತಿಗೆ ಎದೆನಡುಕ.

ಇಕ್ರಲಾ ವದೀರ್ಲಾ

ನಿನ್ನೆ ದಿನ ನನ್ನ ಜನ.

ಅಲ್ಲೇ ಕುಂತವ್ರೇ

ನಾಡ ನೋವಿನಿಂದ ಅರಳಿದ ಆಲದ ಮರವೇ

ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ

ಇವೆಲ್ಲವೂ ೧೯೭೦ರ ದಶಕದಿಂದ ೯೦ರ ದಶಕದವರೆಗೂ ಚಳವಳಿಗಳ ಬಂಡಾಯ ಗೀತೆಗಳು. ಸರಕಾರಗಳ ವಿರೋಧದ ಎಲ್ಲ ಬಗೆಯ ಹೋರಾಟಗಳಲ್ಲಿಯೂ ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ  ಹಾಡು ಇದ್ದೇ ಇರುತ್ತಿತ್ತು. ಇದು ಏಕಗೀತೆಯಾಗಿರಲಿಲ್ಲ. ಸಮುದಾಯದ ಎದೆಯಾಳದ ನೋವಿನ ಹಾಡಾಗಿತ್ತು.

ನೊಂದವರ ಧ್ವನಿ. ಇದು ಸಿದ್ದಲಿಂಗಯ್ಯ ಕಾವ್ಯದ ವಿಶೇಷ. ಜನಸಮುದಾಯದಲ್ಲಿ ವಿಶೇಷವಾಗಿ ದಲಿತ ಸಮುದಾಯದಲ್ಲಿ ಅವರು ಬರೆದ ಎಲ್ಲ ಬಗೆಯ ಬರೆಹಗಳು ವಿಚಾರಶಕ್ತಿಯನ್ನು ಮತ್ತಷ್ಟೂ ಉದ್ದೀಪಿಸಿದವು. ಅವರು ನಾಟಕಗಳನ್ನೂ ಬರೆದಿದ್ದಾರೆ. ಮ್ಯಾಕ್ಸಿಂ ಗಾರ್ಕಿಯ ತಾಯಿ ಕೃತಿ ನಾಟಕರೂದಲ್ಲಿಯೂ ಪ್ರದರ್ಶನಗೊಂಡಿದೆ. ರಂಗಪ್ರದರ್ಶನಕ್ಕೆ ಅವರು ಬರೆದ “ಓ ಗೆಳತಿ ವ್ಲಾಸೋವ” ಎಂದಿಗೂ ಉಳಿಯುವ ಗೀತೆಗಳಲ್ಲೊಂದು.

ಸಿದ್ದಲಿಂಗಯ್ಯ ಎಂದಿಗೂ ಅನ್ಯಾಯಗಳ ವಿರೋಧಿಯಾಗಿದ್ದರು. ಅದು ದಲಿತರಿಗೆ ಆದ ಅನ್ಯಾಯವೇ ಆಗಿರಲಿ ಅಥವಾ ನಾಡುನುಡಿಗೆ ಸಂಬಂಧಿಸಿದ ಅನ್ಯಾಯವೇ ಆಗಿರಲಿ ವಿರೋಧಿಸುವುದರಲ್ಲಿ ಮೊದಲಿಗರಾಗಿದ್ದರು. ತಮ್ಮ ಅಧಿಕಾರಗಳನ್ನು ನಾಡುನುಡಿಯ ಏಳಿಗೆಗೆ ಕಟಿಬದ್ಧವಾಗಿ ಬಳಸಿದರು.

ಎರಡು ಬಾರಿ ವಿಧಾನಪರಿಷತ್‌ ಸದಸ್ಯ. ಮಾತಿಗೆ ನಿಂತರೆ ವಿಚಾರಗಳ ಎಲ್ಲ ಮಗ್ಗುಲುಗಳ ಬಗ್ಗೆಯೂ ವಿಮರ್ಶೆ. ಸರ್ಕಾರದ ಕಣ್ಣು ತೆರೆಯುತ್ತಿತ್ತು. “ಸದನದಲ್ಲಿ ಸಿದ್ದಲಿಂಗಯ್ಯ” ಕೃತಿ ಈ ಬಗ್ಗೆ ಮಾಹಿತಿ ನೀಡುತ್ತದೆ. ಕನ್ನಡ ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷ. ಅಲ್ಲಿಯೂ ಮೌಲಿಕ ಕೆಲಸಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಈ ಅವಧಿಯಲ್ಲಿ ಅವರು ಮಾಡಿದ ಕೆಲಸಗಳು ಗಡಿನಾಡ ಕನ್ನಡ ಯುವಕರ ಬದುಕಿಗೆ ಬೆಳಕು ನೀಡುವಲ್ಲಿ ಕಾಣಿಕೆ ನೀಡಿವೆ.

ಜ್ವಾಲೆಯಂಥ ಕಾವ್ಯ ನೀಡಿದ ಸಿದ್ದಲಿಂಗಯ್ಯ ಬೆಳದಿಂಗಳಿನಂಥಾ ಕಾವ್ಯವನ್ನೂ ನೀಡಿದ್ದಾರೆ. ಈ ಮೂಲಕ ತಮ್ಮಲ್ಲಿ ಜ್ವಲಿಸುವ ಬೆಂಕಿಯೂ, ಹೃದಯಕ್ಕೆ ತಂಪನ್ನೀಯುವ ಬೆಂದಿಂಗಳಂಥಾ ಶಕ್ತಿಯೂ ಇದೆ ಎನ್ನುವುದನ್ನು ತೋರಿಸಿದ್ದಾರೆ. “ ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ” ಈ ಕವನವಂತೂ ಯುವಕರ ಹೃದಯದ ಹಾಡು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಬರೆದಿದ್ದಾರೆ. ಎಲ್ಲವೂ ಗಟ್ಟಿಕಾಳು “ ಊರುಕೇರಿ” ಅವರ ಆತ್ಮಕಥನ.

ಸಭೆ-ಸಮಾರಂಭಗಳಲ್ಲಿ ಅವರು ಮಾತನಾಡುತ್ತಿದ್ದರೆ ಕಿಂಚಿತ್ತೂ ಸದ್ದಿರುತ್ತಿರಲಿಲ್ಲ. ಇದಕ್ಕಿದ್ದ ಹಾಗೆ ಸೇರಿದವರಲ್ಲಿ ನಗೆಯ ಹೊನಲು. ಮತ್ತೆ ಸದ್ದಿಲ್ಲ. ಮತ್ತೆ ನಗೆಯ ಹೊನಲು. ಮತ್ತೆ ಸದ್ದಿಲ್ಲ. ಸಮುದ್ರದಲ್ಲಿ ಅಲೆಗಳ ಉಬ್ಬರವಿದ್ದಂತ ಮಾತು. ಹಾಸ್ಯದ ಕಡಲಿನಲ್ಲಿ ಕೇಳುಗರನ್ನು ತೊಯ್ಯಿಸುತ್ತಿದ್ದರು. ಈ ಮೂಲಕವೂ ಒಂದು ಎಚ್ಚರದ ದನಿಯನ್ನು ನೀಡುತ್ತಿದ್ದರು.

ಕಳೆದ ಮೂರು ತಿಂಗಳಿನಿಂದ ಅವರ ಆರೋಗ್ಯ ಏರುಪೇರಾಗಿತ್ತು. ಕೋವಿಡ್‌ ಸೋಂಕಿಗೆ ಒಳಗಾಗಿದ್ದರು. ಬದುಕಿದ್ದಾಗ ಅನ್ಯಾಯದ ವಿರುದ್ಧ ಸೆಣಸಿದ ಅವರು ಸಾವಿನೊಂದಿಗೂ ಸೆಣಸಿದ್ದರು. ದನಿಯೊಂದರ ಸದ್ದಡಗಿತ್ತು. ಆಗ ವಯಸ್ಸು ೬೭.ಕವಿ – ಕಲಾವಿದರಿಗೆ ಸಾವಿಲ್ಲ. ಇದು ಖಂಡಿತ ಸತ್ಯ. ಸಿದ್ದಲಿಂಗಯ್ಯ ತಮ್ಮ ಕಾವ್ಯದ ಮೂಲಕ ಎಂದೆಂದಿಗೂ ಬದುಕಿರುತ್ತಾರೆ. ಅವರು ನಡೆದ ನುಡಿದ ಬರೆದ ಹೋರಾಟದ ಹಾದಿಯ ದೀವಿಟಿಗೆಯನ್ನು ಅವರು ದಾಟಿಸಿದ್ದಾರೆ.  ಇವರ “ಊರುಕೇರಿ” ಆಲಿಸಿರಿ ಸಂಗ್ರಹದಲ್ಲಿದೆ. ಉಚಿತವಾಗಿ ಕೇಳಬಹುದು. ಯಾವುದೇ ಕಹಿಗಳನ್ನೂ ಮನಸಿನಲ್ಲಿ ಇಟ್ಟುಕೊಳ್ಳದೇ ತಮ್ಮ ಅನುಭವಗಳನ್ನು ಬರೆದ ಆತ್ಮಕಥನವಿದು.

ಗೂಗಲ್ ಪ್ಲೇ ಸ್ಟೋರ್ / ಐ ಪೋನ್ ಪ್ಲೇ ಸ್ಟೋರ್ ಇಲ್ಲಿಂದ ಆ್ಯಪ್ ಇಳಿಸಿಕೊಂಡು ಮೊಬೈಲಿನಲ್ಲಿ ಸ್ಥಾಪಿಸಿಕೊಳ್ಳಿ.

ಗೂಗಲ್ ಪ್ಲೇ ಸ್ಟೋರ್ ಆಲಿಸಿರಿ ಆ್ಯಪ್ ಲಿಂಕ್

https://play.google.com/store/apps/details

ಐ ಪೋನ್ ಪ್ಲೇ ಸ್ಟೋರ್ ಆಲಿಸಿರಿ ಆ್ಯಪ್ ಲಿಂಕ್ :

https://apps.apple.com/…/aalisiri-audiobooks/id1469361029

Continue Reading

ಸಾಹಿತ್ಯ

ಕವಿ ಚೆನ್ನವೀರ ಕಣವಿ ಆರೋಗ್ಯದಲ್ಲಿ ಏರುಪೇರು

Published

on

ಧಾರವಾಡ: ಜನೆವರಿ 19  (ಯು.ಎನ್.ಐ.) ಕೋವಿಡ್ ಸೋಂಕು ತಗುಲಿದ ಕಾರಣ ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕವಿ ಚೆನ್ನವೀರ ಕಣವಿ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದೆ.

ಕಣವಿ ಅವರಿಗೆ ನೀಡುತ್ತಿರುವ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿರುವುದಾಗಿ ಅವರಿಗೆ ಚಿಕಿತ್ಸೆ ನೀಡುತ್ತಿರುವ ಎಸ್‌ಡಿಎಂ ಆಸ್ಪತ್ರೆಯು ತಿಳಿಸಿದೆ.

ಜ್ವರದಿಂದ ಬಳಲುತ್ತಿದ್ದ ಡಾ. ಕಣವಿ ಅವರನ್ನು ಜನವರಿ 14ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೋವಿಡ್–19 ಸೋಂಕು ಇರುವುದು ದೃಢಪಟ್ಟಿತ್ತು. ಅಲ್ಲಿಂದ ಅವರಿಗೆ ನಿರಂತರವಾಗಿ ವೈದ್ಯಕೀಯ ಆಮ್ಲಜನಕ ನೀಡಲಾಗುತ್ತಿದೆ. ಮಂಗಳವಾರ 8 ಲೀ ಆಮ್ಲಜನವನ್ನು ನೀಡಲಾಗಿದೆ. ಡಾ. ಕಣವಿ ಅವರ ಆಸ್ಪತ್ರೆ ವೆಚ್ಚ ಭರಿಸಲು ಕ್ರಮ ವಹಿಸಲಾಗಿದೆ ಎಂದು ಧಾರವಾಡ ಜಿಲ್ಲಾಡಳಿತ ತಿಳಿಸಿದೆ.

Continue Reading

ಸಾಹಿತ್ಯ

ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ: ನಟಿ ‘ಭಾವನಾ’ತ್ಮಕ ಪೋಸ್ಟ್

Published

on

ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಭಾವನಾ ಮೆನನ್ ಐದು ವರ್ಷಗಲ ಹಿಂದೆ ನಡೆದ ಆಘಾತಕಾರಿ ವಿಚಾರದ ಬಗ್ಗೆ ಮೌನ ಮುರಿದು, ನನ್ನ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ ಎಂದಿದ್ದಾರೆ.

ಐದು ವರ್ಷಗಳ ಹಿಂದೆ ನಡೆದ ಘಟನೆಯನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಮೆಲುಕು ಹಾಕಿದ ಭಾವನಾ, ಐದು ವರ್ಷದ ಹಾದಿ ಬಲಿಪಶುವಿನಿಂದ ಬದುಕುವ ಹುಮ್ಮಸ್ಸಿನೊಂದಿಗಿನ ಹಾದಿ ಸುಲಭವಾಗಿರಲಿಲ್ಲ. ಆ ಸಂದರ್ಭದಲ್ಲಿ ಎಷ್ಟೋ ಮಂದಿ ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದವು, ಅವಮಾನಿಸಿದವು. ಇನ್ನು ಕೆಲವು ಧ್ವನಿಗಳು ನನ್ನ ಪರವಾಗಿ ಮಾತನಾಡಿದವು. ಇದೆಲ್ಲವನ್ನು ನೋಡಿದಾಗ ನನ್ನ ನ್ಯಾಯದ ಹೋರಾಟದ ಹಾದಿಯಲ್ಲಿ ನಾನು ಒಬ್ಬಂಟಿಯಲ್ಲ ಎಂದೆನಿಸುತ್ತಿದೆ. ನ್ಯಾಯ ಗೆಲ್ಲಲು, ಯಾವುದೇ ಮಹಿಳೆಯು ಇಂತಹ ಹೀನಾ ಪರಿಸ್ಥಿತಿಗೆ ಒಳಗಾಗದಂತೆ ನೋಡಿಕೊಳ್ಳಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಲು ನನ್ನ ಹೋರಾಟದ ಹಾದಿ ಮುಂದುವರೆಸುತ್ತೇನೆ. ನನ್ನ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದ ಭಾವನಾ ಹಳೆಯ ಎಲ್ಲಾ ಕಹಿ ನೆನಪುಗಳಿಂದ ಹೊರಬಮದು ತಮ್ಮ ನಟನೆಗೆ ಮತ್ತಷ್ಟು ಜೀವ ತುಂಬುತ್ತಿದ್ದಾರೆ.

Continue Reading

ಸಾಹಿತ್ಯ

ಸಕಲ ಪೊಲೀಸ್ ಗೌರವಗಳೊಂದಿಗೆ ಚಂಪಾ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

Published

on

ನ್ಯೂಯಾರ್ಕ್: ಜನೆವರಿ 10 (ಯು.ಎನ್.ಐ.) ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಕನ್ನಡದ ಶ್ರೇಷ್ಠ ಸಾಹಿತಿ, ನಾಟಕಕಾರ ಪ್ರೊ. ಚಂದ್ರಶೇಖರ ಪಾಟೀಲ್ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರರಿಗೆ ವಿಷಯ ತಿಳಿಸಿದ ಅವರು, ‘ಚಂಪಾ’ ಎಂದೇ ಪ್ರಸಿದ್ಧರಾದ ಇವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಸ್ವತಂತ್ರ ಚಿಂತನೆಯ ಲೇಖನದಲ್ಲಿ ಮೊನಚು ಇರುತ್ತಿತ್ತು. ವಿಷಯವನ್ನು ಪ್ರತಿಪಾದಿಸುವ ರೀತಿ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ವಿಮರ್ಶಿಸಿ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತಹ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಚಂಪಾ ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಚಂಪಾರವರು ತಮ್ಮ ಕುಟುಂಬಕ್ಕೆ ಅದರಲ್ಲಿಯೂ ತಮ್ಮ ತಂದೆಯವರಿಗೆ ಬಹಳ ಆತ್ಮೀಯರಾಗಿದ್ದರು. ತಮಗೆ ಮಾರ್ಗದರ್ಶಕರಾಗಿದ್ದ ಚಂಪಾ ಇಂದು ನಮ್ಮನ್ನು ಅಗಲಿರುವುದು ಸಾಹಿತ್ಯ ಲೋಕಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಕುಟುಂಬಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.

ಸಕಲ ಪೊಲೀಸ್ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.

Continue Reading
Advertisement
ಅಂಕಣ4 mins ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ23 mins ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ1 hour ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ1 hour ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು2 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ದೇಶ2 hours ago

ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ… ದೇಶಾದ್ಯಂತ ಪರಾಕ್ರಮ ದಿನವಾಗಿ ಆಚರಣೆ

ನವದೆಹಲಿ, ಜ ೨೩( ಯುಎನ್ ಐ) ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ೧೨೫ನೇ ಜನ್ಮಜಯಂತಿ ಇಂದು. ದೇಶಾದ್ಯಂತ ಪರಾಕ್ರಮ ದಿನವಾಗಿ ನೇತಾಜಿ...

ಕರ್ನಾಟಕ3 hours ago

ಇಡೀ ವರ್ಷ ಸುಭಾಷ್ ಚಂದ್ರಬೋಸ್ ಜನ್ಮದಿನಾಚರಣೆಗೆ ತೀರ್ಮಾನ: ಸಿಎಂ

ಬೆಂಗಳೂರು : ಜನೆವರಿ 23 (ಯು.ಎನ್.ಐ.) ರಾಜ್ಯ ಸರ್ಕಾರದ ವತಿಯಿಂದ ವರ್ಷವಿಡೀ ನೇತಾಜಿ ಸುಭಾಷ್ ಚಂದ್ರಬೋಸ್ ರವರ 125ನೇ ಜನ್ಮ ದಿನಾಚರಣೆಯನ್ನ ಆಚರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ...

ಅಂಕಣ3 hours ago

ಸ್ವಾತಂತ್ರ್ಯಕ್ಕಿಂತ ದೊಡ್ಡದು ಇನ್ಯಾವುದಿದೆ ?

‌ಅಂಕಣ: ದಿಟನುಡಿ -೩ ಕಳೆದ ವಾರ ನನ್ನ ಕೈರೋಪ್ರಾಕ್ಟರ್ ರೇ ಬಳಿ ಹೋಗಿದ್ದೆ. ಏಕೋ ಗೊತ್ತಿಲ್ಲ ಕೆಲ ದಿನಗಳ ಹಿಂದೆ ಸೊಂಟ ಹಿಡಿದಿತ್ತು. ಏಳಲು, ಕೂರಲು, ನಿಲ್ಲಲು...

ದೇಶ3 hours ago

ಪಂಜಾಬ್ ಚುನಾವಣೆ: ಕೆಂಪು ಕೋಟೆ ಹಿಂಸಾಚಾರದ ಆರೋಪಿಗೆ ರೈತ ಸಂಘಟನೆಯಿಂದ ಟಿಕೆಟ್!

ಚಂಡೀಗಢ: ಜನೆವರಿ 23 (ಯು.ಎನ್.ಐ.) ರೈತರ ಸಂಘಟನೆ ಯುನೈಟೆಡ್ ಸಮಾಜ ಮೋರ್ಚಾ ಪಂಜಾಬ್ ವಿಧಾನಸಭಾ ಚುನಾವಣೆಗೆ 35 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ...

ಕರ್ನಾಟಕ4 hours ago

ನ್ಯಾಯಮೂರ್ತಿ ಕೆ ಎಲ್. ಮಂಜುನಾಥ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಬೆಂಗಳೂರು: ಜನವರಿ 23 (ಯು.ಎನ್.ಐ.)  ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನ್ಯಾಯಮೂರ್ತಿ ಮಂಜುನಾಥ್ ಅವರು...

ಟ್ರೆಂಡಿಂಗ್

Share