Connect with us


      




ಕ್ರೀಡೆ

ಕೊಹ್ಲಿಯಿಂದ ಯಾವುದೇ ಮಾಹಿತಿ ಇಲ್ಲ…. ಸಂದಿಗ್ಧ ಸ್ಥಿತಿಯಲ್ಲಿ ಬಿಸಿಸಿಐ

UNI Kannada

Published

on

 

ಮುಂಬೈ, ಡಿ 15(ಯುಎನ್‌ ಐ) – ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದೊಂದಿಗೆ ನಡೆಯಲಿರುವ ಏಕ ದಿನ ಸರಣಿಯಿಂದ ತಪ್ಪಿಸಿಕೊಳ್ಳಲಿದ್ದಾರಾ ? ಕುಟುಂಬದೊಂದಿಗೆ ಸಮಯ ಕಳೆಯಲು ಅವರು ಸ್ವಲ್ಪ ವಿಶ್ರಾಂತಿ ಕೋರುತ್ತಿದ್ದಾರಾ? ಅಥವಾ ಹೊಸ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಭಿನ್ನಾಭಿಪ್ರಾಯವೇ? ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ.. ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಮತ್ತೊಮ್ಮೆ ಈ ಅಂಶಗಳ ಬಗ್ಗೆ ಚರ್ಚೆ ಆರಂಭಗೊಂಡಿದೆ. ಆದರೆ, ಕೊಹ್ಲಿ ಏಕದಿನ ಸರಣಿಯಲ್ಲಿ ಆಡುವುದಿಲ್ಲ ಎಂಬ ವದಂತಿಗಳು ಮಂಗಳವಾರ ಬೆಳಗಿನಿಂದ ಕೇಳಿಬರುತ್ತಿವೆ

ಸಫಾರಿ ನೆಲದಲ್ಲಿ ಮೂರು ಟೆಸ್ಟ್‌ಗಳ ಸರಣಿ ಮುಗಿದ ನಂತರ ಕೊಹ್ಲಿ ವಿಶ್ರಾಂತಿ ಬಯಸಿದ್ದಾರೆ ಎಂಬುದು ಮಾಹಿತಿ. ತಮ್ಮೊಂದಿಗೆ ಪ್ರಯಾಣಿಸುತ್ತಿದ್ದ ಪತ್ನಿ, ಮಗಳಿಗಾಗಿ ಆಟಕ್ಕೆ ಸ್ವಲ್ಪ ವಿರಾಮ ಹೇಳು ಬಯಸಿದ್ದಾರೆ. ಜನವರಿ 19, 21 ಹಾಗೂ 23 ರಂದು ಏಕದಿನ ಪಂದ್ಯಗಳು ನಡೆಯಲಿವೆ. ಆದರೆ, ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಮೇಲಾಗಿ ವಿರಾಮ ಪಡೆಯುವ ವಿಷಯದಲ್ಲಿ ಈವರೆಗೆ ಕೊಹ್ಲಿ ಯಾವುದೇ ಮನವಿ ಮಾಡಿಲ್ಲ ಎಂದು ಮಂಡಳಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ, ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಗಳನ್ನು ಆಡಲಿದ್ದಾರೆ ಎಂದು ನಾವು ಭಾವಿಸಿದ್ದೇವೆ. ಮಗಳ ಜನ್ಮದಿನವಾದ ಜನವರಿ 11 ರಿಂದ ಕೊಹ್ಲಿ ಕೇಪ್ ಟೌನ್‌ನಲ್ಲಿ ಮೂರನೇ ಟೆಸ್ಟ್ ಆಡಲಿದ್ದಾರೆ, ಈ ಪಂದ್ಯ ಕೊಹ್ಲಿ ವೃತ್ತಿ ಜೀವನದ 100ನೇ ಪಂದ್ಯವಾಗಲಿದೆ.

 

Share