Connect with us


      




ಸಾಮಾನ್ಯ

ಕ್ರಿಕೆಟ್ ಇತಿಹಾಸದಲ್ಲೇ ಅದ್ಭುತ ಕ್ಯಾಚ್..

UNI Kannada

Published

on

ಮಹಿಳಾ ವಿಶ್ವಕಪ್ : ಮಾರ್ಚ್ 22 (ಯು.ಎನ್.ಐ.) ಮಹಿಳಾ ಏಕದಿನ ವಿಶ್ವಕಪ್‌ನ ಅಂಗವಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಆಸ್ಟ್ರೇಲಿಯಾದ ಫೀಲ್ಡರ್ ಆಶ್ಲೇ ಗಾರ್ಡ್ನರ್ ಅವರು ಅದ್ಭುತ ಕ್ಯಾಚ್ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದರು. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ 46 ಓವರ್‌ಗಳಲ್ಲಿ ಜೆಸ್ ಜೊನಾಸೆನ್ ಬೌಲಿಂಗ್ ಗೆ ಮಿಗ್ನಾನ್ ಡು ಪ್ರೀಜ್ ಮಿಡ್ ವಿಕೆಟ್ ಕಡೆಗೆ ಬೃಹತ್ ಶಾಟ್ ಆಡಿದರು.

ಆದರೆ, ಚೆಂಡು ಬೌಂಡರಿ ದಾಟುತ್ತದೆ ಎಂದು ಎಲ್ಲರು ಅಭಿಪ್ರಾಯಪಟ್ಟಿದ್ದರು. ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಆಶ್ಲೇ ಗಾರ್ಡ್ನರ್ ಮೇಲಕ್ಕೆ ಜಿಗಿಯುತ್ತಲೇ ಒಂದು ಕೈಯಿಂದ ಅತ್ಯುತ್ತಮ ಕ್ಯಾಚ್ ಪಡೆದರು.

ಗಾರ್ಡ್ನರ್ ಹಿಡಿದ ಕ್ಯಾಚ್ ನಿಂದ ಮೈದಾನದಲ್ಲಿದ್ದವರೆಲ್ಲಾ ಒಮ್ಮೆಲೆ ಬೆಚ್ಚಿಬಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು.

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಾದ ಲೀ (36), ವೊಲ್ವಾರ್ಟ್ (90) ಮತ್ತು ನಾಯಕ ಸುನೆ ಲಾಸ್ (52) ಗರಿಷ್ಠ ಸ್ಕೋರರ್‌ಗಳು. ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕರಾದ ರಾಚೆಲ್ ಹೇನ್ಸ್ (17) ಮತ್ತು ಅಲಿಸ್ಸಾ ಹ್ಯಾಲೆ (5) ಅವರನ್ನು ಕಳೆದುಕೊಂಡ ಆಸ್ಟ್ರೇಲಿಯಾ 272 ರನ್‌ಗಳ ಗುರಿಯನ್ನು ತಲುಪಿತು.

Share