Connect with us


      
ಸಿನೆಮಾ

ಖ್ಯಾತ ನಟ ಪುನೀತ್ ಹೃದಯಾಘಾತ

pratham

Published

on

ಬೆಂಗಳೂರು: ಅಕ್ಟೋಬರ್ 29 (ಯು.ಎನ್.ಐ.) ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಅಭಿಮಾನಿಗಳು, ಚಿತ್ರರಂಗದವರು ದಿಗ್ಬ್ರಮೆಗೊಳಗಾಗಿದ್ದಾರೆ.

ನಿನ್ನೆ ರಾತ್ರಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ಆದರೂ ಅವರು ಅದರತ್ತ ಗಂಭೀರ ಗಮನ ನೀಡಲಿಲ್ಲ.ಇಂದು ಬೆಳಗ್ಗೆಯೂ ಅವರು ಜಿಮ್ ಗೆ ಹೋದರು ಎನ್ನಲಾಗಿದೆ. ಇಂದು ಬೆಳಗ್ಗೆ 11.30ಕ್ಕೆ ಹೃದಯಾಘಾತ ಆದ ಕೂಡಲೇ ಅವರನ್ನು ನಗರದ ವಿಕ್ರಮ್ ಆಸ್ಪತ್ರಗೆ ದಾಖಲಿಸಲಾಗಿದೆ. ತುರ್ತು ನಿರ್ಗಮನ ಘಟಕದಲ್ಲಿರಿಸಲಾಗಿದೆ. ವೈದ್ಯರ ತಂಡ ಪುನೀತ್ ಆರೋಗ್ಯ ಚಿಕಿತ್ಸೆಯತ್ತ ಸಂಪೂರ್ಣ ಗಮನ ಹರಿಸಿದೆ.

ಆಸ್ಪತ್ರೆ ಮುಂದೆ ಅಪಾರ ಅಭಿಮಾನಿಗಳು ಜಮಾಯಿಸಿದ್ದಾರೆ. ಈ ಸಂದರ್ಭದಲ್ಲಿ ಹೊರಬಂದ ವೈದ್ಯರು ಮಾಧ್ಯಮಗಳ ಜೊತೆ ಮಾತನಾಡಿದರು. ಅವರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಪರಿಸ್ಥಿತಿ ಗಂಭೀರವಾಗಿದೆ. ಬಹಳ ಸಿರೀಯಸ್ ಆಗಿದೆ ಎಂದು ವಿವರಿಸಿದರು. ಅಭಿಮಾನಿಗಳು ಪುನೀತ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
UNI, KR

Share