Connect with us


      
ಸಾಮಾನ್ಯ

ಚನ್ನೈ ಸೂಪರ್ ಕಿಂಗ್ಸ್ ನೂತನ ಸಾರಥಿ ರವೀಂದ್ರ ಜಡೇಜ

UNI Kannada

Published

on

ಚನ್ನೈ : ಮಾರ್ಚ್ 2022 (ಯು.ಎನ್.ಐ.) ಐಪಿಎಲ್ ಸೀಸನ್ 15 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುವ ಜವಾಬ್ದಾರಿ ಆಲ್ ರೌಂಡರ್ ರವೀಂದ್ರ ಜಡೇಜ  ಮೇಲಿದೆ. ಸಿಎಸ್ ಕೆ ನಾಯಕತ್ವ ಸ್ಥಾನದಿಂದ ಮಹೇಂದ್ರ ಸಿಂಗ್ ಧೋನಿ ಕೆಳಗಿಳಿದಿದ್ದು ರವೀಂದ್ರ ಜಡೇಜ ತಂಡವನ್ನ ಮುನ್ನಡೆಸಲಿದ್ದಾರೆ. ನಾಯಕನ ಜವಾಬ್ದಾರಿಯನ್ನ ಹೊತ್ತುಕೊಂಡ ಬಳಿಕ ಜಡೇಜ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು ಈ ವಿಡಿಯೋವನ್ನ ಸಿಎಸ್ ಕೆ ಫ್ರಾಂಚೈಸಿ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.

ಫೀಲಿಂಗ್ ಗುಡ್ . ಮಾಹಿ ಭಾಯ್ ಈಗಾಗಲೇ ದೊಡ್ಡ ಪರಂಪರೆಯನ್ನು ಹೊಂದಿಸಿದ್ದಾರೆ ಆದ್ದರಿಂದ ನಾನು ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ. ಮಾಹಿ ಭಾಯ್ ಅವರು ಇಲ್ಲಿರುವುದರಿಂದ ನಾನು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಮಾಹಿ ಭಾಯಿ ನಮಗೆ ಮಾರ್ಗದರ್ಶಕರಾಗಿ ಇದ್ದರು, ಈಗಲೂ ಇದ್ದಾರೆ ಮತ್ತು ಸದಾಕಾಲ ಇರುತ್ತಾರೆ.  ಹಾಗಾಗಿ ನಾನು ಚಿಂತಿಸುವುದಿಲ್ಲ, ನಿಮ್ಮ ಹಾರೈಕೆ ಮತ್ತು ಪ್ರೀತಿಗೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸುತ್ತಿರಿ. ಎಂದು ಜಡೇಜ ಹೇಳಿದ್ದಾರೆ.

Share