Connect with us


      




ಆರೋಗ್ಯ

ಚಳಿಗಾಲದಲ್ಲಿ ಸ್ಕಾರ್ಪ್‌ನಿಂದ ಕೂದಲು ಒರಟಾಗದನ್ನ ತಡೆಯೋಕೆ ಹೀಗೆ ಮಾಡ್ನೋಡಿ

UNI Kannada

Published

on

ಬೆಂಗಳೂರು,ಜನವರಿ,03(ಯು.ಎನ್.ಐ)ಕೂದಲು ಶುಷ್ಕತೆಯ ಸಮಸ್ಯೆ ಸಾಮಾನ್ಯ. ಚಳಿಗಾಲದಲ್ಲಿ ಈ ಸಮಸ್ಯೆ ಉಲ್ಬಣಗೊಳ್ಳೋದು ಸಹಜ. ಅಲ್ಲದೇ ಚಳಿಗಾಲದಲ್ಲಿ ಕೂದಲು ಒರಟಾಗೋಬಜೊತೆಗೆ ತೆಳ್ಳಗೂ ಆಗತ್ತೆ.

ಚಳಿಗಾಲವನ್ನು ಹೊರತುಪಡಿಸಿ, ತಲೆ ಮತ್ತು ಕಿವಿಗಳಲ್ಲಿ ಶೀತವನ್ನು ತಪ್ಪಿಸೋಕೆ ನಾವು ಬಳಸೋ ಸ್ಕಾರ್ಫ್ ಅಥವಾ ಮಫ್ಲರ್ಗಳು ನಮ್ಮ ಕೂದಲಿನ ತೇವಾಂಶವನ್ನು ಹೀರಿಕೊಳ್ಳುತ್ವೆ ಎನ್ನೋದೇ ಇದಕ್ಕೆ ದೊಡ್ಡ ಕಾರಣ.

ಅಂದ್ರೆ ಚಳಿಯಿಂದ ರಕ್ಷಿಸಿಕೊಳ್ಳೋಕೆ ಸ್ಕಾರ್ಫ್, ಕ್ಯಾಪ್ ಇತ್ಯಾದಿಗಳನ್ನು ಬಳಸೋದ್ರಿಂದ ಕೂದಲಿನ ತೇವಾಂಶ ಕಣ್ಮರೆಯಾಗುತ್ತೆ.ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ವಿಶೇಷ ಸಲಹೆಗಳನ್ನ ಅಳವಡಿಸಿಕೊಂಡರೆ ನಮ್ಮ ಕೂದಲು ಒಣಗದಂತೆ ರಕ್ಷಿಸಿಕೊಳ್ಳೋದ್ರ ಜೊತೆಗೆ ಶೀತದಿಂದಲೂ ನಮ್ಮನ್ನ ನಾವು ರಕ್ಷಿಸಿಕೊಳ್ಳಬಹುದಾಗಿದೆ.

ಕೂದಲು ಒರಟಾಗಂತೆ ತಡೆಯೋಕೆ, ಚಳಿಗಾಲದಲ್ಲಿ ಸ್ಕಾರ್ಫ್ ಕ್ಯಾಪ್ ಒಳಗೆ ಹತ್ತಿ ಬಟ್ಟೆಯನ್ನು ಹಾಕಬೇಕು. ಈ ಸರಳ ಪರಿಹಾರವನ್ನು ತೆಗೆದುಕೊಳ್ಳುವುದರಿಂದ, ಸ್ಕಾರ್ಫ್ ಅಥವಾ ಕ್ಯಾಪ್ ಕೂದಲಿನಿಂದ ಹೆಚ್ಚು ಎಣ್ಣೆ ಅಥವಾ ತೇವಾಂಶವನ್ನು ಹೀರಿಕೊಳ್ಳುವುದಿಲ್ಲ. ಏಕೆಂದರೆ ಈ ರೀತಿಯಾಗಿ ಕೂದಲನ್ನು ಸ್ಪರ್ಶಿಸುವ ಮೇಲ್ಮೈ ಹತ್ತಿಯಿಂದ ಮಾಡಲ್ಪಟ್ಟಿರೋದ್ರಿಂದ ಹೆಚ್ಚು ತೇವಾಂಶವನ್ನು ಹೀರಿಕೊಳ್ಳುವುದಿಲ್ಲ.

ಶೀತ ಋತುವಿನಲ್ಲಿ ತಂಪಾದ ಗಾಳಿಯಿಂದ ನಿಮ್ಮ ಕೂದಲನ್ನು ರಕ್ಷಿಸಲು ಹೇರ್-ಜೆಲ್ ಬಳಕೆ ಕೂಡ ತುಂಬಾ ಪರಿಣಾಮಕಾರಿಯಾಗಿರೋದ್ರಿಂದ ಎಲ್ಲಿಯಾದರೂ ಹೊರಗೆ ಹೋಗೋವಾಗ, ಕೂದಲಿಗೆ ಉತ್ತಮ ಹೇರ್-ಜೆಲ್ ಅನ್ನ ಖಂಡಿತವಾಗಿ ಬಳಸಿದರೆ ಇದು ರಕ್ಷಣಾ ಕವಚವನ್ನ ಒದಗಿಸಿ ಕೂದಲಿನ ತೇವಾಂಶ ಹಾಗೇ ಉಳಿಯೋ ಹಾಗೆ ಮಾಡುತ್ತೆ.

ಇನ್ನು ರಾತ್ರಿ ಮಲಗೋ ಮೊದಲು, ಹಗುರವಾದ ಕೈಗಳಿಂದ ಕೂದಲಿಗೆ ಹೇರ್-ಸೀರಮ್ ಅನ್ನು ಹಚ್ಚಿದ ನಂತರ, ಕೂದಲನ್ನ ಪೋನಿಟೇಲ್ನಂತೆ ಇಂಟರ್ಲಾಕ್ ಮಾಡಿ ಮೇಲೆ ಹತ್ತಿ ಸ್ಕಾರ್ಫ್ ಅನ್ನು ಧರಿಸಿ. ಹೀಗೆ ನಿಯಮಿತವಾಗಿ ಮಾಡುವುದರಿಂದ ಕೂದಲಿನ ಹೊಳಪು ಮತ್ತು ತೇವಾಂಶ ಕೂಡ ಹಾಗೆ ಉಳಿಯತ್ತೆ.

ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿ ನೀರನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಕೂದಲನ್ನ ತೊಳೆಯಲು ಹೆಚ್ಚು ಬಿಸಿ ನೀರನ್ನ ಬಳಸುವುದರಿಂದ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆ ಮತ್ತು ತೇವಾಂಶ ಹೊರಟ್ಹೋಗತ್ತೆ. ಆದ್ರಿಂದ ಆದಷ್ಟು ಕೂದಲಿಗೆ ಬಿಸಿನೀರನ್ನು ಬಳಸಬಾರದು. ಉಗುರು ಬೆಚ್ಚನೆಯ ನೀರನ್ನೇ ಬಳಸ್ಬೇಕು. ಅಲ್ಲದೆ, ಶಾಂಪೂ ಮಾಡೋ ಮೊದಲು ಕೂದಲಿನ ಬೇರುಗಳಿಗೆ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಅವು ಶುಷ್ಕ ಮತ್ತು ನಿರ್ಜೀವವಾಗುವುದನ್ನ ತಡೀಬಹುದಾಗಿದೆ.

Share