Connect with us


      




ದೇಶ

ಚಳಿಗಾಲದ ಅಧಿವೇಶನ: ನ. 29 ರಿಂದ ಡಿ.23 ರವರೆಗೆ ನಡೆಸಲು ಸಮಿತಿ ಶಿಫಾರಸು

Bindushree Hosuru

Published

on

ನವದೆಹಲಿ: ನ. 8 (ಯುಎನ್ಐ) ಈ ವರ್ಷದ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸುವಂತೆ ಸಂಸತ್ತಿನ ವ್ಯವಹಾರಗಳ ಸಂಪುಟ ಸಮಿತಿಯು ಶಿಫಾರಸು ಮಾಡಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಕಳೆದ ಒಂದೂವರೆ ವರ್ಷಗಳ ಹಿಂದೆ ನಡೆದ ಸಂಸತ್ತಿನ ಅಧಿವೇಶನಗಳಂತೆ ಈ ವರ್ಷವೂ ಚಳಿಗಾಲದ ಅಧಿವೇಶನವು ಕೋವಿಡ್​​-19 ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ನಡೆಯಲಿದೆ. ಅಧಿವೇಶನವು ಸುಮಾರು 20 ಅಧಿವೇಶನಗಳನ್ನು ಹೊಂದಿರುತ್ತದೆ ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವವರು ಹೇಳಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿಲ್ಲ. ಇದು ಬಜೆಟ್ ಮತ್ತು ಮಾನ್ಸೂನ್ ಅಧಿವೇಶನಗಳನ್ನೂ ಮೊಟಕುಗೊಳಿಸಲು ಕಾರಣವಾಯಿತು.

“ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯ ಸಿಸಿಪಿಎ (ಸಂಸತ್ತಿನ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ) ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕಗಳನ್ನು ಶಿಫಾರಸು ಮಾಡಿದೆ” ಎಂದು ಮೂಲವೊಂದು ತಿಳಿಸಿದೆ.

ಸಂಸತ್ತಿನ ಎರಡೂ ಸದನಗಳು ರಾಜ್ಯಸಭೆ ಮತ್ತು ಲೋಕಸಭೆ ಏಕಕಾಲದಲ್ಲಿ ಕಲಾಪಗಳನ್ನು ನಡೆಸುತ್ತವೆ ಮತ್ತು ಸದಸ್ಯರು ಸಾಮಾಜಿಕ ಅಂತರದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

ಸಂಸದರು ಸೇರಿದಂತೆ ಸಂಸತ್ತಿನಲ್ಲಿ ಹಾಜರಿರುವವರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮೊದಲು ಎಲ್ಲಾರಿಗೂ ಕೋವಿಡ್-19 ಪರೀಕ್ಷೆಗೆ ಒಳಪಡಲು ಹೇಳಬಹುದು.

ರಾಜಕೀಯವಾಗಿ ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಅಧಿವೇಶನವು ಮಹತ್ವದ್ದಾಗಿದೆ. ಅದರ ನಂತರ ಬಜೆಟ್ ಅಧಿವೇಶನ ನಡೆಯಲಿದೆ. ಹಣದುಬ್ಬರ, ಇಂಧನ ಬೆಲೆ ಏರಿಕೆ, ಖಾದ್ಯ ತೈಲದ ಬೆಲೆ ಏರಿಕೆ, ಕಾಶ್ಮೀರದಲ್ಲಿ ನಾಗರಿಕರ ಮೇಲೆ ಉಗ್ರಗಾಮಿಗಳ ದಾಳಿ, ರೈತರನ್ನು ಬಲಿತೆಗೆದುಕೊಂಡ ಲಖಿಂಪುರ ಖೇರಿ ಹಿಂಸಾಚಾರ ಮತ್ತು ಮೂರು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಇವೆಲ್ಲಾ ಸಮಸ್ಯೆಗಳ ಮೇಲೆ ಚರ್ಚೆ ನಡೆಯುವ ಸಾಧ್ಯತೆ ಇದೆ.

Share