Connect with us


      
ಜಾನಪದ

ಚೀನಾದಲ್ಲಿ ಮತ್ತೆ ಲಾಕ್ಡೌನ್

UNI Kannada

Published

on

ಬೀಜಿಂಗ್, ಡಿ.13(ಯು.ಎನ್.ಐ)ಕೋವಿಡ್ ತವರೂರು ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಓಮೈಕ್ರಾನ್ ರೂಪಾಂತರದ ಹಲವು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೀನಾದಲ್ಲಿ ಮತ್ತೆ ಲಾಕ್ಡೌನ್ ಹೇರಲಾಗಿದೆ.

ಚೀನಾದ ಝೆಜಿಯಾಂಗ್ ಪ್ರದೇಶದಲ್ಲಿ ಮತ್ತೆ ಲಾಕ್ಡೌನ್ ವಿಧಿಸಲಾಗಿದ್ದು, ಇಲ್ಲಿ ಹತ್ತಕ್ಕೂ ಹೆಚ್ಚಿನ ಲಿಸ್ಟೆಡ್ ಕಂಪೆನಿಗಳು ತಮ್ಮ ಉತ್ಪಾದನೆ ನಿಲ್ಲಿಸಿವೆ. ಡಿ. 6 ಮತ್ತು 12 ರ ನಡುವೆ ಝೆಜಿಯಾಂಗ್ ನಲ್ಲಿ 173 ಕೊರೊನಾ ಪ್ರಕರಣಗಳು ಕಂಡುಬಂದಿವೆ. ಇವೆಲ್ಲವೂ ಸ್ಥಳೀಯವಾಗಿ ಸೋಂಕಿಗೆ ಒಳಗಾಗಿವೆ.

ಸೋಮವಾರ ಒಂದೇ ದಿನ ಮಧ್ಯಾಹ್ನದ ಹೊತ್ತಿಗೆ ಒಟ್ಟು 80 ಹೊಸ ಸ್ಥಳೀಯ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರಲ್ಲಿ 74 ಮಂದಿ ಝೆಜಿಯಾಂಗ್ನವರೇ ಆಗಿದ್ದಾರೆ. ನಿಂಗ್ಬೋದಲ್ಲಿ 44, ಶಾಕ್ಸಿಂಗ್ ನಲ್ಲಿ 77 ಮತ್ತು 1 ಲಕ್ಷಣರಹಿತ ಪ್ರಕರಣಗಳು ಹಾಗೂ ಪ್ರಾಂತೀಯ ರಾಜಧಾನಿ ಹ್ಯಾಂಗ್ಜೌದಿಂದ 17 ಪ್ರಕರಣಗಳು ವರದಿಯಾಗಿವೆ ಎಂದು ಪ್ರಾಂತೀಯ ಸರ್ಕಾರ ಭಾನುವಾರ ಸ್ಪಷ್ಟಪಡಿಸಿತ್ತು.

ಡೆಲ್ಟಾಸ್ಟ್ರೈನ್ ಎವೈ4 ನಿಂದಾಗಿ ಮೂರು ನಗರಗಳಲ್ಲಿ ಪ್ರಕರಣಗಳು ಹೆಚ್ಚಿರುವುದಾಗಿ ಜೀನೋಮ್ ಸೀಕ್ವೆನ್ಸಿಂಗ್ ವಿಶ್ಲೇಷಣೆ ಬಹಿರಂಗಪಡಿಸಿರುವುದಾಗಿ ಝೆಜಿಯಾಂಗ್ ಪ್ರಾಂತೀಯ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ. ಈ ಡೆಲ್ಟಾಸ್ಟ್ರೈನ್ ಕೊರೊನಾ ವೈರಸ್ ಗಿಂತಲೂ ಹೆಚ್ಚಾಗಿ ಹರಡುವ ಮತ್ತು ಅಪಾಯಕಾರಿ ವೈರಸ್ ಆಗಿದೆ.

ಕೊರೊನಾ ವೈರಸ್ ನ ಮೊದಲ ಪ್ರಕರಣವು ಕಳೆದ 2019 ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಲ್ಲಿ ಮೊದಲ ಬಾರಿಗೆ ಕಂಡುಬಂದಿತ್ತು. ಬಳಿಕ ಅತಿವೇಗವಾಗಿ ಚೀನಾದ್ಯಂತ ಹಾಗೂ ಕೆಲವೇ ತಿಂಗಳಿನಲ್ಲಿ ವಿಶ್ವಾದ್ಯಂತ ಹರಡಿತ್ತು. ಕೊರೊನಾದಿಂದಾಗಿ ಚೀನಾದಲ್ಲಿ ಮೊದಲ ಬಾರಿಗೆ ಲಾಕ್ಡೌನ್ ಮಾಡಲಾಗಿದ್ದು, ಈಗ ಒಮೈಕ್ರಾನ್ ರೂಪಾಂತರವು ಮುನ್ನಲೆಗೆ ಬಂದ ಬಳಿಕ ಅನೇಕ ದೇಶಗಳು ಮತ್ತೆ ನಿರ್ಬಂಧದ ಹಾದಿಯನ್ನು ಪ್ರಾರಂಭಿಸಿವೆ. ಗೂಗಲ್ ಮತ್ತು ಆಪಲ್ ನಂತಹ ದೊಡ್ಡ ಕಂಪನಿಗಳು ಆಫಿಸ್ ಪ್ರಾರಂಭಿಸುವ ಯೋಜನೆಯನ್ನು ಮುಂದೂಡಿವೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಏಷ್ಯಾದ ಎರಡು ದೊಡ್ಡ ಶಕ್ತಿಗಳಾದ ಭಾರತ ಮತ್ತು ಚೀನಾದ ಪ್ರಭಾವ ಕಡಿಮೆಯಾಗಿದೆ ಎಂದು ಆಸ್ಟ್ರೇಲಿಯಾದ ಲೋವಿ ಇನ್ಸಿಟ್ಯೂಟ್ ತನ್ನ ವರದಿಯಲ್ಲಿ ಹೇಳಿಕೆ ನೀಡಿದೆ. ಇದರ ಪ್ರಕಾರ ಹೊರಜಗತ್ತಿನಲ್ಲಿ ಮತ್ತು ಅವುಗಳ ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಪ್ರಭಾವ ಕಡಿಮೆಯಾಗಿದೆಯಾದರೆ ಅಮೆರಿಕಾ ಅತ್ಯುತ್ತಮ ರಾಜತಾಂತ್ರಿಕತೆಯ ಮೂಲಕ ಹಿಡಿತ ಬಲಪಡಿಸಿ ಹಿಂದೂ ಮತ್ತು ಫೆಸಿಪಿಕ್ ಮಹಾಸಾಗರ ಪ್ರದೇಶಗಳ ಮೇಲೆ ಪ್ರಭಾವ ಹೆಚ್ಚಿಸಿದೆ.

Share