Connect with us


      
ಕರ್ನಾಟಕ

ಚುನಾವಣೆಯಲ್ಲಿ ಈ ಜಯ ಮುಂಬರುವ ಭಾರತ ದೇಶದ ದಿಕ್ಸೂಚಿಯನ್ನ ತೋರಿಸಿದೆ : ಸಿಎಂ ಬೊಮ್ಮಾಯಿ

UNI Kannada

Published

on

ಬೆಂಗಳೂರು : ಮಾರ್ಚ್ 10 (ಯು.ಎನ್.ಐ.) ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಜಯ ಮುಂಬರುವ ಭಾರತ ದೇಶದ ದಿಕ್ಸೂಚಿಯನ್ನ ತೋರಿಸಿದೆ. ಕೆಲವು ಶಕ್ತಿಗಳು ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆ ಬಗ್ಗೆಯೂ ಚಿಂತನೆ ಮಾಡದೆ ಸಾಮಾನ್ಯ ಜನರು ಆತಂಕಕ್ಕೊಳಗಾಗುವಂತೆ ಮಾಡಿದ್ದಾರೆ ಎಂದು ಸಿ ಎಂ ಬೊಮ್ಮಾಯಿ ಹೇಳಿದ್ದಾರೆ

 ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ  ಬಿಜೆಪಿ ಕಚೇರಿಗೆ ಆಗಮಿಸಿದ ಸಿಎಂ ಮಾದ್ಯಮಗಳೊಂದಿಗೆ ಮಾತನಾಡಿದರು. ನಮ್ಮೆಲ್ಲರಿಗೂ ಇಂದು ಬಹಳ ಸಂತೋಷ ಆಗಿದೆ, ಈ ಜಯ ಮುಂಬರುವ ಭಾರತ ದೇಶದ ದಿಕ್ಸೂಚಿಯನ್ನ ತೋರಿಸಿದೆ. ಕೆಲವು ಶಕ್ತಿಗಳು ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆ ಬಗ್ಗೆಯೂ ಚಿಂತನೆ ಮಾಡದೆ ಸಾಮಾನ್ಯ ಜನರು ಆತಂಕಕ್ಕೊಳಗಾಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಪ್ರತಿದಿನವೂ ದೇಶದ ಬಗ್ಗೆ ಚಿಂತನೆ ಮಾಡುವ ಪ್ರಧಾನಿ ಈ ಹಿಂದೆ ಎಂದೂ ಸಿಕ್ಕಿರಲಿಲ್ಲ, ಮೋದಿ ಅವರು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೆ ಜನಬೆಂಬಲವಿದೆ ಜೊತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎತ್ತರದಲ್ಲಿದೆ. ಉಕ್ರೇನ್, ರಷ್ಯಾ ಯುದ್ಧ ನಡೆಯುತ್ತಿದ್ದು,  ಯುದ್ದ ನಿಲ್ಲಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಅಂತ ಹೇಳುವ ಧೈರ್ಯ ಅವರಿಗಿದೆ ಆ ಧೈರ್ಯ ಅಮೇರಿಕಾಗೂ ಇಲ್ಲ ಎಂದರು.

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಜಾತಿ ಲೆಕ್ಕಾಚಾರ ಹಾಕಿ ಗೆದ್ದೇ ಬಿಟ್ಟ ಅಖಿಲೇಶ್ ಅಂತ ಹೇಳ್ತಿದ್ದರೂ ಆದರೆ ಏನಾಯಿತು. ಎಲ್ಲೂ ಅತಂತ್ರ ಆಗಲಿಲ್ಲ, ಅವರ ಕುತಂತ್ರ ನಡೆಯಲಿಲ್ಲ, ಮೋದಿ-ಆದಿತ್ಯನಾತ್ ತಂತ್ರ ಮಾತ್ರ ವರ್ಕ್ ಆಯ್ತು. ಕಿಸಾನ್ ಯೋಜನೆ, ಪ್ರಧಾನ ಮಂತ್ರಿ ಗೃಹ ನಿರ್ಮಾಣ, ಉಜ್ವಲ ಯೋಜನೆ ಜನರಿಗೆ ಮುಟ್ಟಿದೆ.

ಬಿಜೆಪಿ ಕಮಲ ಐದರಲ್ಲಿ ನಾಲ್ಲು ಕಡೆ ಅರಳಿದೆ, ರಾಜಕೀಯ ನಮಗೂ ಗೊತ್ತಿದೆ ಬರುವ ದಿನಗಳಲ್ಲಿ ಪಂಜಾಬ್‌ನಲ್ಲಿ ಬಿಜೆಪಿಗೆ ಹೆಚ್ಚು ಸಂಸದರು ಆಯ್ಕೆಯಾಗಲಿದ್ದಾರೆ. ಪಂಜಾಬ್ ನಲ್ಲಿ ಸದ್ಯ ಆಪ್ ಗೆದ್ದಿದ್ರೂ ಕೂಡ ಕಳೆದ ಎರಡು ವರ್ಷ ಕೋವಿಡ್ ಪ್ರಭಾವದ ಸಂದರ್ಭದಲ್ಲಿ ಹೆಚ್ಚು ಕೆಲಸ ಮಾಡಿದ್ದು ಬಿಜೆಪಿ ಪಕ್ಷ.

ರಾಜ್ಯದಲ್ಲಿ ಕವಿಡ್ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಶ್ರಮವಹಿಸಿ ಪ್ರತೀ ಬೂತ್ ಮಟ್ಟದಲ್ಲಿ ಕಿಟ್ ಹಂಚಿದ್ದಾರೆ.ಮುಂದೆ ಅತ್ಯಂತ ಆನೆ ಬಲದಿಂದ ಮುನ್ನಡೆಯಲಿದೆ,

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರ ಹೆಚ್ಚು ನೋಂದಣಿ ಮಾಡಿಸಿದ್ರೆ ಫ್ರಿಡ್ಜ್ ಕೊಡ್ತಾರಂತೆ ಅದು ಕೂಡ ಬಾದಾಮಿ ಕ್ಷೇತ್ರದಲ್ಲಿ ಈಗ ಕೊಟ್ಟು, ಮುಂದೆ ಹತ್ತು ಪಟ್ಟು ತೆಗೆದುಕೊಳ್ತಾರೆ. ಅಧಿಕಾರಕ್ಕೆ ಬರಲ್ಲ ಅಂತ ಗೊತ್ತು ಹಾಗಾಗಿ ಎಷ್ಟು ಬೇಕಾದ್ರೂ ಕೊಡ್ತಾರೆ ಕಾಂಗ್ರೆಸ್ ನವರು ಮುಂದೆ ಎಲ್ಲಾದರೂ ಕಾಂಗ್ರೆಸ್ ಹಡಗು ಮುಳುಗಿದರೆ ಅದು ಕರ್ನಾಟಕದಲ್ಲೇ ಎಂದು ಅವರು ಹೇಳಿದರು.

Share