Connect with us


      




ದೇಶ

ಚುನಾವಣೆ ಘೋಷಣೆಗೂ ಮುನ್ನ ಸಮಾಜವಾದಿ ಪಕ್ಷದಿಂದ ಪ್ರಣಾಳಿಕೆ ಬಿಡುಗಡೆ

UNI Kannada

Published

on

ಉತ್ತರಪ್ರದೇಶ: ಜ.1(ಯು.ಎನ್.ಐ) ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಯುಪಿ ಚುನಾವಣೆಗೆ ಮುನ್ನವೇ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಭರವಸೆಯ ಮಹಾಪೂರವೇ ಇದೆ.
ಈ ಹಿಂದೆ ಸಮಾಜವಾದಿ ಪಕ್ಷದ ವತಿಯಿಂದ (ಎಸ್‌ಪಿ) ಟ್ವೀಟ್ ಮಾಡುವ ಮೂಲಕ ಅಪಘಾತದಲ್ಲಿ ಸಾವನ್ನಪ್ಪಿದ ಸೈಕ್ಲಿಸ್ಟ್‌ಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿತ್ತು. .ಈಗ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಉಚಿತ ವಿದ್ಯುತ್ ಭರವಸೆ ನೀಡಿದ್ದಾರೆ.
ಯುಪಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪಕ್ಷಗಳಿಂದ ರಾಜಕೀಯ ಘೋಷಣೆಗಳು ಮತ್ತು ಭರವಸೆಗಳು ಬರುತ್ತಲೇಯಿವೆ.  ಹಿಂದೆ, ಯುಪಿಯಲ್ಲಿ ವಿದ್ಯುತ್ ಸಲುವಾಗಿ ಒತ್ತಾಯಿಸುತ್ತಿರುವ ಆಮ್ ಆದ್ಮಿ ಪಕ್ಷವು ರೈತರಿಗೆ 300 ಯೂನಿಟ್ ಉಚಿತ ವಿದ್ಯುತ್ ಅನ್ನು ಘೋಷಿಸಿದೆ.

ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಚುನಾವಣಾ ಭರವಸೆಯಲ್ಲಿ ಗೃಹ ವಿದ್ಯುತ್ ಗ್ರಾಹಕರಿಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿಯೂ,  ರೈತರಿಗೆ ನೀರಾವರಿಗೆ ಉಚಿತ ವಿದ್ಯುತ್ ಸಿಗಲಿದೆ ಎಂದಿದೆ.   ಟ್ವೀಟ್ ಮಾಡಿರುವ ಅಖಿಲೇಶ್ ಯಾದವ್, ಹೊಸ ವರ್ಷಕ್ಕೆ ಬೆಳಕಿನ ಶುಭಾಶಯ ಕೋರಿದ್ದಾರೆ. ಈಗ 22 ರಲ್ಲಿ ‘ಹೊಸ ಯುಪಿ’ಯಲ್ಲಿ ಹೊಸ ವರ್ಷವು ಹೊಸ ಬೆಳಕಿನೊಂದಿಗೆ ಆರಂಭವಾಗಿದೆ‌. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ 300 ಯೂನಿಟ್ ಗೃಹ ವಿದ್ಯುತ್ ಉಚಿತ ಮತ್ತು ನೀರಾವರಿ ಬಿಲ್ ಮನ್ನಾ ಆಗಲಿದೆ. ಹೊಸ ವರ್ಷವು ಎಲ್ಲರಿಗೂ ಶಾಂತಿ ಮತ್ತು ಸಂತೋಷವನ್ನು ನೀಡಲಿ ಎಂದಿದ್ದಾರೆ.
ಅಂದುಕೊಂಡಂತೆ ಸಮಾಜವಾದಿ ಪಕ್ಷದ ಸರ್ಕಾರ ಬಂದಲ್ಲಿ ಅಖಿಲೇಶ್ ಯಾದವರ ಘೋಷಣೆ ಜಾರಿಯಾದಲ್ಲಿ ಗ್ರಾಮೀಣ ಭಾಗಕ್ಕೆ ಸರಾಸರಿ 1200 ರೂ ಮತ್ತು ನಗರ ಗ್ರಾಹಕರು ಪ್ರತಿ ತಿಂಗಳು ಸರಾಸರಿ 1700 ರೂ ಲಾಭವನ್ನು ಪಡೆಯಬಹುದಾಗಿದೆ.

Share