Connect with us


      
ಕ್ರೀಡೆ

ಟೀಂ  ಇಂಡಿಯಾಗೆ  ಬಿಗ್ ಶಾಕ್..    ಟೆಸ್ಟ್  ಸರಣಿಯಿಂದ  ರೋಹಿತ್ ಔಟ್  !

UNI Kannada

Published

on

 

ಮುಂಬೈ,  ಡಿ 13 (ಯುಎನ್‌ ಐ)  ದಕ್ಷಿಣ ಆಫ್ರಿಕಾ   ಪ್ರವಾಸಕ್ಕೂ  ಮುನ್ನ   ಟೀಂ  ಇಂಡಿಯಾ     ಬಿಗ್  ಶಾಕ್    ಎದುರಾಗಿದೆ. ತಂಡದ  ಉಪ ನಾಯಕ ರೋಹಿತ್ ಶರ್ಮಾ ಗಾಯಗೊಂಡಿರುವ   ಕಾರಣ  ಟೆಸ್ಟ್ ಸರಣಿಯಿಂದ     ಹೊರಗುಳಿದಿದ್ದಾರೆ ಎಂಬ  ಸುದ್ದಿಗಳು  ಕೇಳಿಬರುತ್ತಿವೆ.     ಅಭ್ಯಾಸದ ವೇಳೆ   ರೋಹಿತ್ ಶರ್ಮಾ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.   ಕ್ರಿಕೆಟ್ ಬಜ್‌  ವರದಿ ಪ್ರಕಾರ,  ಮುಂಬೈನಲ್ಲಿ  ಸೋಮವಾರ  ನಡೆದ ಅಭ್ಯಾಸದ ವೇಳೆ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಎಸೆದ ಚೆಂಡು ರೋಹಿತ್ ಕೈಗೆ  ಬಲವಾಗಿ    ಬಡಿದಿದೆ.  ಇದರಿಂದ    ಅವರು   ಕೆಲ  ಕಾಲ  ತೀವ್ರ ಯಾತನೆ  ಅನುಭವಿಸಿದರು  ಎಂದು ವರದಿಯಾಗಿದೆ.  ಆದರೆ,  ಪ್ರಸ್ತುತ   ಅವರ  ಗಾಯ ಗಂಭೀರ ಸ್ವರೂಪಪಡೆದುಕೊಂಡಿದೆ   ಎಂದು ವರದಿಯಾಗಿದೆ.

 

ಇದರಿಂದ   ಅವರು   ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು  ಕೇಳಿ ಬಂದಿದೆ.   ವರದಿಗಳ  ಪ್ರಕಾರ, ಅವರ ಸ್ಥಾನಕ್ಕೆ ಭಾರತ-ಎ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್  ಆಯ್ಕೆಯಾಗಿದ್ದಾರೆ.   ಆದರೆ, ರೋಹಿತ್ ಗಾಯದ ಬಗ್ಗೆ ಬಿ ಸಿ ಸಿ ಐ  ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಪ್ರಸ್ತುತ     ಭಾರತ ತಂಡ  ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ  ಮುಂಬೈನ ಹೋಟೆಲ್‌ನಲ್ಲಿ  ಮೂರು ದಿನಗಳ ಕ್ವಾರಂಟೈನ್‌ನಲ್ಲಿ  ಕಳೆಯುತ್ತಿದೆ.   ಭಾರತ ತಂಡ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದೆ.

 

ಭಾರತ  ಟೆಸ್ಟ್ ತಂಡ:  ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್-ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್-ಕೀಪರ್ ), ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

 

 

 

 

Share