Connect with us


      
ದೇಶ

ತಂಬಾಕು ಉತ್ಪನ್ನಗಳಿಗೆ ಶಾಕ್ ಕೊಟ್ಟ ಆಂಧ್ರ ಸರ್ಕಾರ

Vanitha Jain

Published

on

ಆಂಧ್ರಪ್ರದೇಶ, ಡಿಸೆಂಬರ್ 7, (ಯು.ಎನ್.ಐ): ತಂಬಾಕು ಉತ್ಪನ್ನಗಳನ್ನ ಮೇಲೆ ಸಂಚಲನಾತ್ಮಕ ನಿರ್ಣಯವನ್ನು ತೆಗೆದುಕೊಂಡ ಆಂಧ್ರಪ್ರದೇಶ ಸರ್ಕಾರ. ತಂಬಾಕು,ಗುಟ್ಕಾ, ಪಾನ್ ಮಸಾಲಗಳನ್ನು ಒಂದು ವರ್ಷದವರೆಗೆ ನಿಷೇಧಿಸಿದೆ.

ಡಿಸೆಂಬರ್ 7 ರಿಂದ ಒಂದು ವರ್ಷದವರೆಗೆ ತಂಬಾಕು ಉತ್ಪನ್ನಗಳನ್ನ ಮೇಲೆ ನಿಷೇಧ ಜಾರಿಯಲ್ಲಿರುತ್ತದೆ, ಜೊತೆಗೆ ನಿಕೊಟಿನ್ ಮಿಶ್ರಿತ ಆಹಾರ ಉತ್ಪನ್ನಗಳ ಮೇಲೂ ನಿಷೇಧ ಜಾರಿಮಾಡಿದೆ.

ಈ ವಿಚಾರವಾಗಿ ಕುಟುಂಬ ಸಂಕ್ಷೇಮ ಮತ್ತು ಆಹಾರ ಭದ್ರತಾ ಶಾಖೆಯ ಕಮಿಷನರ್ ಕಾಟಮನೇನಿ ಭಾಸ್ಕರ್ ಆದೇಶ ಜಾರಿಮಾಡಿದ್ದಾರೆ. ನಿಷೇಧ ಮಾಡಿದ ತಂಬಾಕು ಉತ್ಪನ್ನಗಳನ್ನು ಬೇರೆ ಯಾವುದೇ ಹೆಸರಿನಲ್ಲಿ ಮತ್ತೆ ಮಾರಾಟ ಮತ್ತು ಸರಬರಾಜು ಮಾಡಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ಕಮಿಷನರ್ ಎಚ್ಚರಿಸಿದ್ದಾರೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲೂ ಗುಟ್ಕಾ,ಪಾನ್ ಮಸಾಲದ ಮೇಲೆ ನಿಷೇಧಿಸಿದೆ. ಆದರೆ ಗುಟ್ಕಾ ನಿಷೇಧವನ್ನು ಪ್ರಶ್ನಿಸಿ 160 ಪಿಟಿಷನ್‍ಗಳು ಹೈಕೋರ್ಟ್ ಮೆಟ್ಟಿಲೇರಿದೆ. ಎಲ್ಲಾ ಪಿಟಿಷನ್‍ಗಳನ್ನೂ ತಳ್ಳಿಹಾಕಿದ ಹೈಕೋರ್ಟ್ ರಾಜ್ಯದ ಜನತೆ ಕೊರೊನಾಗಿಂತ ಹೆಚ್ಚಾಗಿ ಗುಟ್ಕಾ ಪಾನ್ ಮಸಾಲದಿಂದಲೇ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ.

Share