Connect with us


      




ದೇಶ

ದೇಶದಲ್ಲಿ ಮತ್ತೆ ಇಳಿಕೆ ಕಂಡ ಕೊರೊನಾ ಸೋಂಕು ಪ್ರಕರಣ

Lakshmi Vijaya

Published

on

ನವದೆಹಲಿ: ಏಪ್ರಿಲ್ 19 (ಯು.ಎನ್.ಐ.) ದಿನೇ ದಿನೇ ಏರುತ್ತಿದ್ದ ಕೋವಿಡ್ ಪ್ರಕರಣಗಳಲ್ಲಿ ಕೊಂಚ ಇಳಿಮುಖವಾಗಿದೆ.  ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,247 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಇದು  ನಿನ್ನೆ ವರದಿಯಾದ ಒಟ್ಟು ಪ್ರಕರಣಗಳಲ್ಲಿ ಶೇ.43 ರಷ್ಟು ಇಳಿಕೆಯಾಗಿದೆ.

ಸೋಮವಾರ 2,183 ಹೊಸ ಕರೋನವೈರಸ್ ಸೋಂಕು ಪತ್ತೆಯಾಗಿತ್ತು. ಈ ಮೂಲಕ  ಹೊಸ ಪ್ರಕರಣಗಳಲ್ಲಿ ಶೇ.90ರಷ್ಟು  ದಿಢೀರ್ ಹೆಚ್ಚಳವಾಗಿತ್ತು.  ಹಾಗು ಕೋವಿಡ್ ಪಾಸಿಟಿವಿಟಿ ದರ ಶೇ.165 ರಷ್ಟು  ಏರಿಕೆಯಾಗಿತ್ತು  .

ಸೋಮವಾರ ದಿಢೀರನೆ ಸೋಂಕು ಹೆಚ್ಚಳಕ್ಕೆ ಕಾರಣವೂ ಸಿಕ್ಕಿದೆ. ಕೇರಳ ತನ್ನ ರಾಜ್ಯದ ಐದು ದಿನಗಳ ಕೋವಿಡ್ ಡೇಟಾವನ್ನು ಒಟ್ಟಿಗೆ ಸೋಮವಾರ ಅಪ್ ಡೇಟ್ ಮಾಡಿತ್ತು. ಇದರಿಂದ ಸೋಮವಾರದ ವರದಿಯಲ್ಲಿ ದಿಢೀರನೇ ಸೋಂಕು ಏರಿಕೆಯಾಗಿತ್ತು ಎಂದು  ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ಹಾಗು ಈ ಬಗ್ಗೆ ಅವರು ಕೇರಳದ ಆರೋಗ್ಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕೋವಿಡ್ ಡೇಟಾವನ್ನು ಪ್ರತಿದಿನ ಖಚಿತಪಡಿಸಿಕೊಳ್ಳುವಂತೆ ಹೇಳಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ ಇಂದು 4,30,45,527 ಕ್ಕೆ ಏರಿದೆ. 11,860  ಸಕ್ರಿಯ ಪ್ರಕರಣಗಳಿವೆ.

ಉತ್ತರ ಪ್ರದೇಶದಿಂದ ಒಂದು ಹೊಸ ಸಾವು ವರದಿಯಾಗಿದ್ದು ಸಾವಿನ ಸಂಖ್ಯೆ 5,21,966 ಕ್ಕೆ ಏರಿದೆ.ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ. 98.76 ರಷ್ಟಿದೆ.

Share