Published
5 months agoon
By
UNI Kannada
ನವದೆಹಲಿ, ಡಿ 12 (ಯುಎನ್ ಐ) – ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಬಗ್ಗೆ ಹರಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿದ್ದು, ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ಜನರು ಇಂತಹ ವದಂತಿಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.
ಭಜ್ಜಿ ಜೊತೆಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರ ಬಗ್ಗೆ ಕೂಡ ಇದೇ ರೀತಿಯ ಪ್ರಚಾರ ನಡೆಯುತ್ತಿದೆ. ಈ ವಿಷಯದ ಬಗ್ಗೆ ಯುವಿ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ
ಈ ನಡುವೆ 2017ರ ವಿಧಾನಸಭೆ ಚುನಾವಣೆ ವೇಳೆಯೂ ಹರ್ಭಜನ್ ಸಿಂಗ್ ಬಗ್ಗೆ ಇದೇ ರೀತಿಯ ಪ್ರಚಾರ ನಡೆದಿತ್ತು. ಆಗ ಭಜ್ಜಿ ಕಾಂಗ್ರೆಸ್ ಪಕ್ಷ ಸೇರುವ ಸುದ್ದಿ ಬಂದಿತ್ತು. ಮತ್ತೊಂದೆಡೆ, ಹರ್ಭಜನ್ ಶೀಘ್ರದಲ್ಲೇ ಎಲ್ಲಾ ಕ್ರಿಕೆಟ್ ಫಾರ್ಮ್ಯಾಟ್ಗಳಿಗೆ ವಿದಾಯ ಹೇಳಿ ಐಪಿಎಲ್ನಲ್ಲಿ ಕೋಚ್ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳಿವೆ.
ಥಾಮಸ್ ಕಪ್ ಗೆದ್ದ ಕನ್ನಡಿಗ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನ: ಸಿಎಂ ಬೊಮ್ಮಾಯಿ
ಮಿನಿ ಒಲಿಂಪಿಕ್ಸ್ ಗೆ ಅದ್ಧೂರಿ ಚಾಲನೆ
ಥಾಮಸ್ ಕಪ್ ಗೆಲುವು: ಬೆಂಗಳೂರಿಗ ಲಕ್ಷ್ಯ ಸೇನ್ಗೆ ರಾಜ್ಯ ಸರಕಾರದಿಂದ ಸನ್ಮಾನ
ಥಾಮಸ್ ಕಪ್ ಗೆದ್ದ ಭಾರತ: ಮುಖ್ಯಮಂತ್ರಿಗಳಿಂದ ಅಭಿನಂದನೆ
ಥಾಮಸ್ ಕಪ್ ಗೆದ್ದ ಭಾರತ: ಮೋದಿ ಅಭಿನಂದನೆ -1 ಕೋಟಿ ಬಹುಮಾನ!
ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ!