Published
5 months agoon
By
UNI Kannadaಚಂಡಿಗಡ, ಡಿ ೧೩( ಯುಎನ್ ಐ) ಪತ್ನಿಯ ಅನುಮತಿಯಿಲ್ಲದೆ ಪತಿ ಆಕೆಯ ದೂರವಾಣಿ ಕರೆಗಳನ್ನು ರೆಕಾರ್ಡ್ ಮಾಡುವುದು ಆಕೆಯ ಖಾಸಗಿತನದ ಹಕ್ಕು ಉಲ್ಲಂಘಿಸಿದಂತೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಜನವರಿ ೨೦, ೨೦೨೦ರ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಮೇಲ್ಮನವಿ ಸಂಬಂಧ ನ್ಯಾಯಮೂರ್ತಿ ಲಿಸಾ ಗಿಲಾ ಈ ತೀರ್ಪು ನೀಡಿದ್ದಾರೆ. ಪಂಜಾಬ್ನ ಬಟಿಂಡಾ ಮೂಲದ ವ್ಯಕ್ತಿಯೊಬ್ಬರು ಪತ್ನಿ ತನಗೆ ಕಿರುಕುಳ ನೀಡುತ್ತಿದ್ದಾಳೆ. ಹಾಗಾಗಿ ಆಕೆಯಿಂದ ವಿಚ್ಛೇದನ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ತಮ್ಮ ಆರೋಪ ರುಜುವಾತುಪಡಿಸಲು ದೂರವಾಣಿ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದರು. ಈ ಸಂಬಂಧ ನ್ಯಾಯಾಲಯ ಈ ಆದೇಶ ನೀಡಿದೆ.
ಸದರಿ ದಂಪತಿಗಳು ೨೦೦೭ ಫೆಬ್ರವರಿ ೨೦, ವಿವಾಹವಾಗಿದ್ದರು. ಮೇ ೨೦೧೧ ರಲ್ಲಿ ಅವರಿಗೆ ಮಗಳು ಕೂಡ ಜನಿಸಿದ್ದಾಳೆ. ಆದರೆ ವೈಮನಸ್ಯದಿಂದಾಗಿ ಪತ್ನಿಯಿಂದ ವಿಚ್ಛೇದನ ಕೋರಿ ಪತಿ ೨೦೧೭ರಲಿ ಅರ್ಜಿ ಸಲ್ಲಿಸಿದ್ದರು. ಜುಲೈ ೯, ೨೦೧೯ ರಂದು ಪಾಟಿ ಸವಾಲು ಸಮಯದಲ್ಲಿ ಪತ್ನಿ ಮತ್ತು ಪತಿ ನಡುವಣ ದೂರವಾಣಿ ಸಂಭಾಷಣೆಯ ಸಿಡಿ ಮತ್ತು ಸಿಮ್ ಕಾರ್ಡ್ಗಳನ್ನು ಸಾಕ್ಷ್ಯವಾಗಿ ಹಾಜರುಪಡಿಸಿದ್ದರು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಮಗೆ ತಿಳಿಸಿದೆ ತನ್ನ ದೂರವಾಣಿ ಸಂಭಾಷಣೆ ರೆಕಾರ್ಡ್ ಮಾಡುವುದು ಗೌಪ್ಯತೆಯ ಉಲ್ಲಂಘನೆಯಾಗಿದೆ ಎಂದು ಅವರು ವಾದಿಸಿದ್ದರು. ಆದರೆ, ಪತ್ನಿಯ ಕಿರುಕುಳದ ಸಾಕ್ಷ್ಯವಾಗಿ ಮಾತ್ರ ಇವುಗಳನ್ನು ಪ್ರಸ್ತುತಪಡಿಸಲಾಗಿದ್ದು, ಆಕೆಯ ಖಾಸಗಿತನಕ್ಕೆ ಧಕ್ಕೆ ತರುವ ಉದ್ದೇಶವಲ್ಲ ಎಂದು ಪತಿಯ ವಕೀಲರು ವಾದಿಸಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ದೂರವಾಣಿ ಸಂಭಾಷಣೆಯ ದಾಖಲೆಗಳನ್ನು ಸಾಕ್ಷ್ಯವಾಗಿ ಪರಿಗಣಿಸಲಾಗದು ಪತ್ನಿಯ ಅನುಮತಿಯಿಲ್ಲದೆ, ಆಕೆಗೆ ಅರಿವಿಲ್ಲದಂತೆ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡುವುದು ಅಪರಾಧ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ. ಫೋನ್ ರೆಕಾರ್ಡಿಂಗ್ಗಳನ್ನು ಸಾಕ್ಷ್ಯವಾಗಿ ಪರಿಗಣಿಸದೆ ವಿಚ್ಛೇದನ ಪ್ರಕರಣದ ಕುರಿತು ಆರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಬಟಿಂಡಾ ಕೌಟುಂಬಿಕ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚಿಸಿದೆ.
ಜ್ಞಾನವಾಪಿ ಮಸೀದಿ ಸಮೀಕ್ಷೆ; ಕೊಳದಲ್ಲಿ ಶಿವಲಿಂಗ ಪತ್ತೆ: ವಕೀಲರ ಹೇಳಿಕೆ
ಜ್ಞಾನವಾಪಿ ಮಸೀದಿ; ಮೂರನೇ ದಿನಕ್ಕೆ ಸರ್ವೇ
ಜ್ಞಾನವಾಪಿ ಮಸೀದಿ; ಮುಂದುವರಿದ ಸಮೀಕ್ಷೆ ಕಾರ್ಯ
ಜ್ಞಾನವಾಪಿ ಶೃಂಗಾರ್ ಗೌರಿ ಸಂಕೀರ್ಣ ಸಮೀಕ್ಷೆ ತಡೆಗೆ ಸುಪ್ರೀಂ ನಿರಾಕರಣೆ
ತಾಜ್ಮಹಲ್ ಕೊಠಡಿ ಸಮೀಕ್ಷೆ; ಅರ್ಜಿ ತಿರಸ್ಕರಿಸಿದ ಕೋರ್ಟ್
ಜ್ಞಾನವಾಪಿ ಮಸೀದಿ ; ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ: ನ್ಯಾಯಾಲಯ