Connect with us


      
ಸಿನೆಮಾ

ಪವರ್ ಸ್ಟಾರ್ ಅಪ್ಪು ಸ್ಪೂರ್ತಿ; ಜನಾರ್ಧನ ರೆಡ್ಡಿ ಪುತ್ರ ಚಿತ್ರರಂಗ ಪ್ತವೇಶ

UNI Kannada

Published

on

ಬಳ್ಳಾರಿ: ಜನೆವರಿ 07 (ಯು.ಎನ್.ಐ.) ಕರ್ನಾಟಕದ ಮಾಜಿ ಸಚಿವ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸದ್ಯದಲ್ಲೇ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ನಿರ್ದೇಶಕ ರಾಧಾಕೃಷ್ಣ ನಿರ್ದೇಶನದ ಮೂಲಕ ಕಿರೀಟಿ ರೆಡ್ಡಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಮಗನಿಗೆ ಈಗಾಗಲೇ ನಟನೆ, ನೃತ್ಯ, ಫೈಟಿಂಗ್ ತರಬೇತಿಯನ್ನೂ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಕೊಡಿಸಿದ್ದಾರೆ.

ನಿರ್ದೇಶಕ ರಾಧಾಕೃಷ್ಣ ಕನ್ನಡದಲ್ಲಿ ಮಾಯಾಬಜಾರ್ ಚಿತ್ರವನ್ನು ನಿರ್ದೇಶಿಸಿದ್ದರು. ಮೂಲಗಳ ಪ್ರಕಾರ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಗ್ಗೆ ನಿರ್ದೇಶಕ ರಾಧಾಕೃಷ್ಣ ಹೇಳುವುದು ಹೀಗೆ. ನಟನಾಬೇಕೆಂಬುದು ಕಿರೀಟಿಯ ಬಹುದಿನದ ಕನಸು. ಅವರು ಈಗಾಗಲೇ ನಟನೆ, ನೃತ್ಯ, ಫೈಟಿಂಗ್ ಜೊತೆಗೆ ಮಾರ್ಷಲ್ ಆರ್ಟ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಜಾಕಿ’ ಚಿತ್ರದ ಸ್ಫೂರ್ತಿಯಿಂದ ಕಿರೀಟಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂದರು. ಈ ಚಿತ್ರಕ್ಕೆ ತೆಲುಗಿನಲ್ಲಿ ಲೆಜೆಂಡ್, ಯುದ್ಧ ಶರಣಂ ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ಸಾಯಿ ಕೊರ್ರಪಾಟಿ ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ನಿರ್ವಹಿಸಲಿದ್ದಾರೆ.

ಕರ್ನಾಟಕದ ಅನೇಕ ರಾಜಕಾರಣಿಗಳ ಮಕ್ಕಳು ಈಗಾಗಲೇ ಸಿನಿಮಾಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಕರ್ನಾಟಕದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್, ಜಮೀರ್ ಅಹಮದ್ ಪುತ್ರ ಜೈದ್ ಖಾನ್ ಹಾಗೂ ಚೆಲುವರಾಯ ಸ್ವಾಮಿ ಪುತ್ರ ಸಚಿನ್ ಈಗಾಗಲೇ ಹೀರೋ ಆಗಿ ಪರಿಚಯವಾಗಿದ್ದಾರೆ ಈಗ ಈ ಸಾಲಿಗೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಸೇರ್ಪಡೆಯಾಗಿದ್ದಾರೆ.

Share