Connect with us


      




ವಿದೇಶ

ಪ್ರಯಾಣಿಕರ ಮುಕ್ತ ಓಡಾಟಕ್ಕೆ ಅವಕಾಶ ಕಲ್ಪಿಸಿದ ಅಮೆರಿಕ

Kumara Raitha

Published

on

ವಾಷಿಂಗ್ಟನ್: ನವೆಂಬರ್ 08 (ಯು.ಎನ್.ಐ.)ಮಹಾಮಾರಿ ಕೋವಿಡ್-19 ವೈರಸ್‍ನಿಂದಾಗಿ ಸತತ ಒಂದು ವರೆ ವರ್ಷಗಳ ಕಾಲ ಪ್ರಯಾಣಿಕರಿಗೆ ನಿರ್ಬಂಧ ಹೇರಿದ್ದ ಅಮೆರಿಕ ಇದೀಗ ಪ್ರಯಾಣಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿದೆ.
ದೇಶದೊಳಗೆ ಪ್ರವೇಶಿಸುವ ಪ್ರಯಾಣಿಕರಿಗೆ ಕೋವಿಡ್-19 ನಕಾರಾತ್ಮಕ ಪರೀಕ್ಷಾ ವರದಿ ಹಾಗೂ ವ್ಯಾಕ್ಸಿನೇಷನ್ ಪುರಾವೆ ಕಡ್ಡಾಯವಾಗಿದೆ.
ಅಮೆರಿಕವು ಮೆಕ್ಸಿಕೋ, ಯೂರೋಪ್, ಕೆನಡಾ ದೇಶಗಳ ಮೇಲಿನ ಪ್ರಯಾಣ ನಿರ್ಬಂಧ ತೆಗೆದು ಹಾಕಿದ್ದು, ಸೋಮವಾರದಿಂದ ಯುಎಸ್ ವಿಮಾನ ನಿಲ್ದಾಣಗಳು ಮತ್ತು ಭೂ ಗಡಿಗಳಲ್ಲಿ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಮುಕ್ತ ಪ್ರಯಾಣಕ್ಕೆ ಅವಕಾಶ ನೀಡಿದೆ.
ಭೂಪ್ರಯಾಣ ಮೂಲಕ ಮೆಕ್ಸಿಕೋ ಮತ್ತು ಕೆನಡಾ ತಲುಪುವ ಮಂದಿಗೆ ವ್ಯಾಕ್ಸಿನೇಷನ್ ದಾಖಲೆ ಅಗತ್ಯವಿರುತ್ತದೆ. ಆದರೆ ಯಾವುದೇ ಕೋವಿಡ್-19 ಪರೀಕ್ಷೆ ಇರುವುದಿಲ್ಲ. ಇನ್ನು ವಿಮಾನಯಾನ ಸಂಸ್ಥೆಗಳು ಯುರೋಪ್ ಮತ್ತು ಇತರೆಡೆಗಳಿಂದ ಹೆಚ್ಚಿನ ಪ್ರಯಾಣಿಕರನ್ನು ನಿರೀಕ್ಷಿಸುತ್ತಿವೆ. ಪ್ರಯಾಣ ಮತ್ತು ವಿಶ್ಲೇಷಣಾ ಸಂಸ್ಥೆಯ ಸಿರಿಯಮ್‍ನ ಡೇಟಾವು ಕಳೆದ ತಿಂಗಳಿಗಿಂತ ಈ ತಿಂಗಳು ಯುನೈಟೆಡ್ ಕಿಂಗ್‍ಡಮ್ ಮತ್ತು ಯುಎಸ್ ನಡುವಿನ ವಿಮಾನಯಾನಗಳನ್ನು 21% ರಷ್ಟು ಹೆಚ್ಚಿಸುತ್ತಿದೆ ಎಂದು ತೋರಿಸಿದೆ.
ವಿಮಾನಯಾನ ಸಂಸ್ಥೆಗಳು ವಿಮಾನ ಪ್ರಯಾಣಿಕರ ಲಸಿಕಾ ದಾಖಲೆಗಳನ್ನು ಜೊತೆಗೆ ಗುರುತಿನ ಚೀಟಿಯನ್ನು ಪರಿಶೀಲಿಸಲಿಸಲಿದ್ದಾರೆ. ಇದರಲ್ಲಿ ಕೊಂಚ ಬದಲಾವಣೆಗಳು ಕಂಡು ಬಂದರೂ ನಿಯಮ ಉಲ್ಲಂಘನೆ ಆಧಾರದ ಮೇಲೆ ಅಮೆರಿಕಾ ಡಾಲರ್ 35,000(25,91,032 ರೂ.) ದಂಡ ವಿಧಿಸಲಿದ್ದಾರೆ. ಸಂಪರ್ಕ ಪತ್ತೆಹಚ್ಚುವ ಮೂಲಕ ವಿಮಾನಯನ ಸಂಸ್ಥೆಯು ಪ್ರಯಾಣಿಕರ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತದೆ. ಇನ್ನು ಅಮೆರಿಕಾದ ಭೂ ಗಡಿಗಳಲ್ಲಿ ಪ್ರಯಾಣಿಕರನ್ನು ಪರೀಕ್ಷಿಸುವುದಕ್ಕಾಗಿ ಸಿಡಿಸಿ ಉದ್ಯೋಗಿಗಳನ್ನು ನಿಯೋಜಿಸಲಾಗಿದೆ. ಇನ್ನು ಕಸ್ಟಮ್ಸ್ ಆ್ಯಂಡ್ ಬಾರ್ಡರ್ ಪ್ರೊಟೆಕ್ಷನ್ ಸಿಬ್ಬಂದಿ ಲಸಿಕಾ ದಾಖಲೆ ಪರಿಶೀಲಿಸುತ್ತಾರೆ.

Share