Published
6 months agoon
By
UNI Kannadaಬೆಂಗಳೂರು: ಜನೆವರಿ .02(ಯು.ಎನ್.ಐ) ಬಿಬಿಎಂಪಿ ವಾರ್ಡ್ ಗಳಲ್ಲಿ 150 ಇಂಜಿನಿಯರ್ಗಳನ್ನು ಸದ್ಯಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಮೂರ್ನಾಲ್ಕು ತಿಂಗಳ ಬಳಿಕ ಖಾಯಂ ಇಂಜಿನಿಯರ್ ಗಳ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವಾರ್ಡ್ಗಳ ಹೆಚ್ಚಳದಿಂದ ವಾರ್ಡ್ಗಳಲ್ಲಿನ ಅಭಿವೃದ್ಧಿ ಸಂಬಂದ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರನ್ನು ಪ್ರತಿನಿಧಿಸುವ ಸಚಿವರು,ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದು,ಕೆಲ ಸಂಸದರು ಶಾಸಕರು ವರ್ಚ್ಯುವಲ್ ಮೂಲಕ ಭಾಗಿಯಾಗಿದ್ದರು.
ಸಭೆ ಬಳಿಕ ಸಚಿವ ಆರ್.ಅಶೋಕ್ ಮಾತನಾಡಿ,ನಿರ್ಭಯ ಯೋಜನೆಯಡಿ 7000 ಸಿಸಿಟಿವಿ ಕ್ಯಾಮೆರಾಗಳನ್ನು ಬೆಂಗಳೂರಿನಲ್ಲಿ ಅಳವಡಿಸಲು ನಿರ್ಧಾರ ಮಾಡಲಾಗಿದೆ. ಬಿಬಿಎಂಪಿ ವಾರ್ಡ್ಗಳಲ್ಲಿ 150 ಚೀಫ್ ಇಂಜಿನಿಯರ್ಗಳ ನೇಮಕ ಮಾಡಲಾಗುತ್ತಿದೆ, ಸದ್ಯ ಗುತ್ತಿಗೆಯಾಧಾರದ ಮೇಲೆ ನೇಮಕ ಮಾಡುವುದಾಗಿ ಹೇಳಿದರು.
ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಪೂರ್ಣ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕಾಗಿ 1500 ಕೋಟಿ ರೂ ಹೆಚ್ಚುವರಿ ಹಣ ಕೊಡಲು ಸಿಎಂ ಹೇಳಿದ್ದಾರೆ. ಇದರಿಂದ ಮಳೆನೀರುಗಾಲುವೆಗಳ ದುರಸ್ತಿ, ಮಳೆ ಬಿದ್ದರೆ ಆಗುವ ಅನಾಹುತ ತಪ್ಪಿಸಲು ಈ ಹಣ ಬಳಕೆಯಾಗಲಿದೆ. ಸಭೆಯಲ್ಲಿ ಮುಖ್ಯವಾಗಿ ಗುಂಡಿ ಮುಚ್ಚಲು ಸಿಎಂ ಸೂಚನೆ ನೀಡಿದ್ದು ಇನ್ನೂ 730 ಕಿ.ಮೀ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮಾರ್ಚ್ 31 ರೊಳಗೆ ಮುಚ್ಚಲು ಸೂಚನೆ ನೀಡಿದ್ದಾರೆ. ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ 7 ಸಾವಿರ ಸಿಸಿಟಿವಿಗಳ ಅಳವಡಿಕೆಗೆ ಹಾಗೂ ಟಿಡಿಆರ್ ಸಮಸ್ಯೆ ಪರಿಹರಿಸಲು ಹೊಸ ಪಾಲಿಸಿ ಜಾರಿಗೆ ನಿರ್ಧರಿಸಲಾಗಿದೆ. ಜನವರಿ 31 ರೊಳಗೆ ನಗರದಲ್ಲಿ ಬೀದಿದೀಪಗಳ ಬದಲಾವಣೆ ಮಾಡಿ ಬಿಬಿಎಂಪಿಯಿಂದ ಎಲ್ಇಡಿ ಬೀದಿದೀಪಗಳನ್ನು ಅಳವಡಿಸುವುದಾಗಿ ಹೇಳಿದರು
ಬಿಬಿಎಂಪಿಯಲ್ಲಿ 243 ವಾರ್ಡ್ಗಳಾಗುತ್ತಿದ್ದು, ಟಿಡಿಆರ್ ಪಾಲಿಸಿ ನೆನೆಗುದ್ದಿಗೆ ಬಿದ್ದಿದೆ. ಟಿಡಿಆರ್ ಹೊಸ ಪಾಲಿಸಿಯನ್ನು ಇನ್ನೊಂದು ವಾರದಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.ಅಮೃತ ನಗರೋತ್ಥಾನ ಯೋಜನೆಯನ್ನು ಸಿಎಂ ಘೋಷಿಸಿದ್ದಾರೆ ಕ್ಯಾಬಿನೆಟ್ ಸಭೆಯಲ್ಲಿ ನಗರೋತ್ಥಾನ ಯೋಜನೆ ಮಾಹಿತಿಯನ್ನು ಸಿಎಂ ನೀಡುತ್ತಾರೆಂದು ತಿಳಿಸಿದರು.
ಇದೇ ವೇಳೆ ಜೆಡಿಎಸ್, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಬಿಜೆಪಿ ಸರ್ಕಾರದಿಂದ ಅನುದಾನ ತಾರತಮ್ಯ ಮಾಡಲಾಗುತ್ತಿದೆಯಾ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್, ಇದರ ಬಗ್ಗೆ ಚರ್ಚೆಯಾಗಿಲ್ಲ.ಯಾವುದೇ ಶಾಸಕರು ದೂರು ನೀಡಿಲ್ಲಅದಕ್ಕೆ ಬೇಕಾದ ಎಲ್ಲ ದಾಖಲೆ ನೀಡುವುದಾಗಿ ಹೇಳಿದರು.
ಇಂಧನ ಇಲಾಖೆ: 1385 ಅಭ್ಯರ್ಥಿಗಳಿಗೆ ಏಕಕಾಲಕ್ಕೆ ನೇಮಕ ಆದೇಶ
ಮೈಶುಗರ್ ಕಾರ್ಖಾನೆ ಆಗಸ್ಟ್ನಲ್ಲಿ ಪುನಾರಂಭ!
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲ
‘ಪ್ರತಿ ಹತ್ಯೆಯಲ್ಲೂ ಬಿಜೆಪಿ ಹೆಣದ ರಾಜಕೀಯ’ – ದಿನೇಶ್ ಗುಂಡೂರಾವ್
ರಾಜಸ್ಥಾನ ಹತ್ಯೆ: ಕಾಂಗ್ರೆಸ್ ಸರಕಾರ ವಜಾಗೊಳಿಸಲು ಕಟೀಲ್ ಆಗ್ರಹ
ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ: ಹತ್ಯೆ ಖಂಡಿಸಿದ ಎಚ್ಡಿಕೆ