Connect with us


      
ಸಿನೆಮಾ

ಮದುವೆ ಬಳಿಕ ಶೂಟಿಂಗ್ ಗೆ ಮರಳಿದ ನಟಿ ಆಲಿಯಾ ಭಟ್

Lakshmi Vijaya

Published

on

ಮುಂಬೈ: ಏಪ್ರಿಲ್ 19 (ಯು.ಎನ್.ಐ.)  ನಟ ರಣಬೀರ್ ಕಪೂರ್ ಅವರನ್ನು ವರಿಸಿದ ಬಳಿಕ ನಟಿ ಆಲಿಯಾ ಭಟ್ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್ 14 ರಂದು ಮದುವೆಯಾದ ಆಲಿಯಾ ಭಟ್ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ರಾಝಿ ಚಿತ್ರದ  ನಟಿ ಗುಲಾಬಿ ಬಣ್ಣದ ಸೂಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು.

ವಿವಾಹದ ಬಳಿಕ ನಿನ್ನೆಯಷ್ಟೇ ನಟ ರಣಬೀರ್ ಕಪೂರ್ ಸಿನಿ ಕೆಲಸಕ್ಕೆ ಮರಳಿದ್ದರು. ಇದೀಗ ಆಲಿಯಾ ಭಟ್ ಕೂಡ ತಮ್ಮ ಚಿತ್ರದ ಕಾರ್ಯಗಳನ್ನು ಪುನನಾರಂಭಿಸಿದ್ದಾರೆ.

ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ನಟಿಸ್ತಿರುವ ಆಲಿಯಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ  ಎಂಬ ವರದಿಯಾಗಿದೆ.

ಅಯಾನ್ ಮುಖರ್ಜಿಯ ಬ್ರಹ್ಮಾಸ್ತ್ರದ ಸೆಟ್‌ನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪರಸ್ಪರ ಪ್ರೀತಿಯಲ್ಲಿ ಸಿಲುಕಿದರು. ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಅವರು ಏಪ್ರಿಲ್ 14 ರಂದು ಮುಂಬೈನಲ್ಲಿ ವಿವಾಹವಾದರು.

Share