Connect with us


      
ಆಹಾರ

ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ

Quis autem vel eum iure reprehenderit qui in ea voluptate velit esse quam nihil molestiae consequatur, vel illum qui dolorem.

Published

on

Photo: Shutterstock

ಬೇಜಾರಂದರೆ ಮುದ್ದೆ ನಮ್ಮ ಆಹಾರ ಪದ್ದತಿಯಿಂದ ಕಾಣೆಯಾಗುತ್ತಿದೆ. ಒಂದೆರಡು ದಿವಸ ಖುಷಿಗೆ ಮುದ್ದೆ ಮುರಿದು ರುಚಿ ಹತ್ತದೆ ನಿಲ್ಲಿಸಿಬಿಡುತ್ತಾರೆ. ಹೊರಗಿನವರು ವಿಚಾರಿಸಿದಾಗ ಪರಿಚಯಿಸಲು ಸಹ ಅಗತ್ಯ ಜ್ಞಾನವಿರದಿರುವಷ್ಟು ಬರಡಾಗಿದ್ದೇವೆ.

ಮುದ್ದೆಗೆ ಅದರದೆ ಆದ ಸೌಂದರ್ಯವಿದೆ. ಕಟ್ಟುವ ಕಲೆಯಿದೆ. ಒಮ್ಮೆಗೆ ಒಂದೇ ಮುದ್ದೆ ಬೇಯಿಸಿ ಕಟ್ಟುವ ಚತರುರು ಇರುವರು. ಅಡ್ಡಾದಿಡ್ಡಿ ಕಟ್ಟಿ ಏನೇನೊ ಅವತಾರ ನಡೆಸಿ ಅದರ ಸೌಂದರ್ಯ ಹಾಳುಗೆಡವಿದ್ದಾರೆ ಈಗಿನ ಜನ. ಮೂಲ ಜನರೇ ಇಲ್ಲಿ ಆಪಾದಿತರು. ಮುದ್ದೆ ಸಂಸ್ಕೃತಿಯನ್ನು ಹಸ್ತಾಂತರಿಸುವಲ್ಲಿ ಬಹಳಾನೆ ಎಡವಿದ್ದಾರೆ. ಎರಡು ದಶಕಗಳಲ್ಲಿ ಮುಕ್ಕಾಲು ಜ್ಞಾನ ಮಣ್ಣು ಸೇರಿದೆ.

ಮುದ್ದೆ ಕಟ್ಟುವುದೆಂದರೆ ಹಿಟ್ಟನ್ನು ಚನ್ನಾಗಿ ಕುದಿಸಿ ಬೇಯಿಸಿ ದುಂಡದುಂಡಗೆ ನಯಸ್ಸಾಗಿ ಕಟ್ಟಬೇಕು. ವಿಕಾರವಾಗಿ ಕಟ್ಟಿದರೆ ಅಲ್ಲೆ ಅರ್ಧ ಮನಸು ಬೀಳುತ್ತದೆ. ತುತ್ತನ್ನು ನಾಲಿಗೆ ಮೇಲಿಟ್ಟರೆ ಅದೆಟ್ಕೆ ಅದೇ ಗಂಟಲಿಗಿಳಿಯಬೇಕು, ಸುಯ್ಯನೆ ಅನ್ನನಾಳದ ಮೂಲಕ ಜಾರುಬಂಡಿಯಂತೆ ಜಾರಬೇಕು. ಸುಡುವ ತುತ್ತು ಅನ್ನನಾಳದಲ್ಲಿ ಜಾರುತ್ತಿರುವುದು ನಿಮಗೆ ಅರಿವಾಗುತ್ತದೆ. ಅದೆಂಥ ದಿವ್ಯ ಅನುಭವ ಗೊತ್ತೇ? ಅಷ್ಟು ಮೆತ್ತಗಿರಬೇಕು ಮುದ್ದೆ. ಗುಂಡಕಲ್ಲಿನಂತೆ ಕಟ್ಟಿದರೆ ಗಂಟಲಿನಲ್ಲಿ ಸಿಕ್ಕಿಕೊಳ್ಳುತ್ತದೆ, ಪಾಯಸದಂತೆ ಮಾಡಿದರೆ ಬಾಯಿಗೆ ಅಂಟಿಕೊಳ್ಳುತ್ತದೆ. ಹಲವರ ಹೊಸ ಪ್ರಯತ್ನಗಳಲ್ಲಿ ಹಿಟ್ಟಿನ ಗಂಟುಗಳು ಉಳಿದುಬಿಡುತ್ತವೆ. ಸ್ವಲ್ಪ ಅಕ್ಕಿ/ಅನ್ನ ಬೆರೆಸಿದರೆ ಸುಲಭವಾಗಿ ಗಂಟುಗಳನ್ನು ನಿವಾರಿಸಬಹುದು. ಥಂಬ್ ರೂಲ್- ನಿಮ್ಮ ಮುದ್ದೆ ಸಾರಿನಲ್ಲಿ ಕರಗುತ್ತಿದ್ದರೆ ಅದು ಮುದ್ದೆಯೇ ಅಲ್ಲ ಎಂದರ್ಥ.

ಆಗ ತಾನೆ ಬೇಯಿಸಿದ ಮುದ್ದೆ ಬೆಳಕನ್ನು ಪ್ರತಿಫಲಿಸಿ ಫಳ ಫಳ ಹೊಳೆಯುತ್ತಿರುತ್ತದೆ. ತಟ್ಟೆಯಲ್ಲಿ ಅದೇ ಬಾಸು. ಗತ್ತಿನಿಂದ ರಾಜನ ಸೀಟಿನಲ್ಲಿ ಕೂತಿರುತ್ತದೆ. ಪಲ್ಯ ದಳಪತಿ, ಸಾರು ಮಂತ್ರಿಮಹೋದಯರು. ಬಿಸಿಬಿಸಿಯಾದ ಮುದ್ದೆ ತಿನ್ನಬೇಕು. ನಿಮ್ಮ ದೋಸೆ ತರಹ. ಮಾಯಾವಿ ಇದು, ಆರಿದಂತೆಲ್ಲ ಸೊಗಸು ಆವಿಯಾಗುತ್ತದೆ. ಸಂಪೂರ್ಣ ಆರಿದ ನಂತರ ಪುನಃ ಮೆಲ್ಲಗೆ ಸೊಗಸನ್ನು ವಾಪಸ್ಸು ಹೀರಿಕೊಳ್ಳಲಾರಂಭಿಸುತ್ತದೆ. ತಂಗಳಾಗುವ ತನಕ. ತಂಗಳು ಹಿಟ್ಟು ಎನ್ನುತ್ತಾರಲ್ಲ ಅದು ಬಿಸಿ ಬಿಸಿ ಮುದ್ದೆಯಷ್ಟೇ ಅಲ್ಟಿಮೇಟು. ಅದನ್ನು ಮೊಸರು/ಮಜ್ಜಿಗೆಯೊಳಗೆ ಕಿವುಚಿರಿ. ಹಾ ಅಸಹ್ಯ ಪಟ್ಟುಕೊಳ್ಳದೆ ಬೆತ್ತಲೆ ಬೆರಳುಗಳಿಂದ ಕಿವುಚಿ, ಉಪ್ಪು ಹಾಕಿ ಕಲಸಿ. ಮುಂಬೆರಳುಗಳನ್ನು ಸಾಲಾಗಿ ಚಮಚದಂತೆ ಜೋಡಿಸಿ ಕಲಸಿದ ಮುದ್ದೆಯನ್ನು ಎತ್ತಿಕೊಂಡು ಬಾಯಿಯಲ್ಲಿಟ್ಟುಕೊಳ್ಳಿ. ತಂಗಳಿನ ಉಳಿ ಜೊತೆಗೆ ಹುಳಿ ಮಜ್ಜಿಗೆ ಬೆರೆತ ವಿಶಿಷ್ಟ ಸ್ವಾದ ನಿಮ್ಮ ಬಾಯಿ ತುಂಬ. ಕೊನೆಯಲ್ಲಿ ತಟ್ಟೆಯನ್ನು ಬಳಿಯುವುದು ಮರೆಯದಿರಿ. ಬಳಿದು ತಿನ್ನುವ ಕಡೆಯ ಭಾಗಕ್ಕೆ ಎಂದಿಗೂ ಅದರದೇ ಆದ ಗಮ್ಮತ್ತು ಇರುವುದು‌. ಸ್ಪೂನು ನಿಮ್ಮನ್ನು ಈ ಸುಖದಿಂದ ವಂಚಿಸಿದೆ.

ಇಷ್ಟಾಯಿತು; ಬಹಳಷ್ಟು ಜನ ಚನ್ನಾಗಿ ಮುದ್ದೆ ಕಟ್ಟಿದರೂ ಬಹುಬೇಗ ರುಚಿ ಕಳೆದುಕೊಂಡು ಮುದ್ದೆಯೆಂದರೆ ಇಷ್ಟೇ ಎಂದು ನಿರಾಸೆಯಾಗುತ್ತಾರೆ. ಕಾರಣ ಬೇರೆ ಇದೆ. ನಗರಗಳ ಸ್ಟಾಂಡರ್ಡ್ ತರಕಾರಿ ಹುಳಿಗಳು, ಎಂಟಿಆರ್ ಪುಡಿಯ ಸಾಂಬಾರು, ರಸಂ ಮುಂತಾದವುಗಳಲ್ಲೆಲ್ಲ ಮುದ್ದೆ ಅದ್ದಿ ಧರ್ಮಬ್ರಷ್ಟತೆ ಎಸಗಿರುತ್ತಾರೆ. ಮುದ್ದೆಯ ಅರ್ಧ ರುಚಿ ಇರುವುದು ಅದಕ್ಕೆಂದೇ ಸೀಮಿತವಾಗಿರುವ ಸಾರುಗಳಲ್ಲಿ. ದೊಡ್ಡ ಲೆಕ್ಕದಲ್ಲಿ ಈ ಸಾರುಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಸೊಪ್ಪಿನ ಸಾರುಗಳು, ಬಸ್ಸಾರುಗಳು(ಬಸಿದ ಸಾರು), ಕಾಳಿನ ಸಾರುಗಳು, ಮಸಾಲೆ ಸಾರುಗಳು(ಕೋಳಿ ಕುರಿ ಮೀನು ಏಡಿ…).
ಈ ನಾಲ್ಕರಿಂದ ನಲವತ್ತು ಐವತ್ತು ವಿಧಗಳ ಸಾರುಗಳನ್ನು ತಯಾರಿಸಬಹುದು. ಇವುಗಳೊಂದಿಗೆ ಅರ್ಧಾಂಭ್ರ, ಕಿವುಚಾಂಬ್ರ,ಸಪ್ನೀರು… ಇನ್ನೇನಿಲ್ಲ ಎರಡು ಬದನೆ ಎರಡು ಈರುಳ್ಳಿ ಎರಡು ಹಸಿ ಮೆಣಸಿನಕಾಯಿಯನ್ನು ಸುಟ್ಟು ಕಿವುಚಿ ನಾಲಿಗೆ ಮೇಲೆ ಬಿಟ್ಟುಕೊಂಡರೆ ಮುಗೀತು, ಬೆಂಕಿ ಧಗ್ ಎಂದು ಹತ್ತಿಕೊಳ್ಳುತ್ತದೆ. ಇನ್ನು ಮಸಾಲೆ ಸಾರುಗಳು ಕೇಳಬೇಕೇ- ಒಂದು ಮನೆಯಲ್ಲಿ ಸಾರು ಕುದಿಯುತ್ತಿದ್ದರೆ ಊರಿನ ಮೂಗಿನ ಹೊಳ್ಳೆಗಳೆಲ್ಲ ಅರಳುತ್ತವೆ. ಹಾಗೆ ಊರಿಗೆ ಬೆಂಕಿಯಿಟ್ಟಂತೆ ಘಮಘಮ ಅಂತಿರಬೇಕು ನಿಮ್ಮ ಮನೆಯ ಮಸಾಲೆ, ಅದರೊಳಗೆ ಬೇಯುವ ತುಂಡುಗಳು. ಸೊಪ್ಪುಗಳನ್ನು ಬೇಯಿಸಿ ಪಲ್ಯ ಮಾಡಿ ರಸದಿಂದ ಸಾರು ಮಾಡಬಹುದು, ಸೊಪ್ಪನ್ನೆ ಮಸೆಯಬಹುದು. ಕಾಳುಗಳನ್ನು ಸಹ ಮಸಾಲೆ ಹಾಕದೆ ಕೇವಲ ಉಪ್ಪು ಮೆಣಸಿನಲ್ಲಿ ಬೇಯಿಸಿ ರಸದಿಂದ ಸಾರು, ಕಾಳು ಪಲ್ಯಕ್ಕೆಂದು. ಮೊಳಕೆ ಕಟ್ಟಿದರೆ ಅದು ಇನ್ನೊಂದು ಬಗೆ. ಮುದ್ದೆ ಜೋಡಿಯ ತೊಂಭತ್ತು ಭಾಗದ ಸಾರುಗಳು ಎಣ್ಣೆ ಮತ್ತು ಮಸಾಲೆ ಬೇಡುವುದಿಲ್ಲ. ಅತ್ಯಂತ ನೈಸರ್ಗಿಕ ಸಾರುಗಳು ಇವು. ಹಿಂದೆ ಒಂದು ಮನೆಗೆ ತಿಂಗಳಿಗೆ ಒಂದು ಕೇಜಿ ಎಣ್ಣೆ ಖರ್ಚಾಗುತ್ತಿತ್ತೊ ಇಲ್ಲವೊ. ಈಗಿನವರು ಬೆಳಗ್ಗೆ ಎದ್ದರೆ ಸಾಕು ಮೊದಲ ಕೆಲಸ ಬಾಂಡ್ಲಿಯಲ್ಲಿ ನೂರು ಗ್ರಾಂ ಎಣ್ಣೆ ಸುರಿಯುತ್ತಾರೆ. ಆನಂತರ ಏನು ಅಡಿಗೆಯೆಂದು ಯೋಚಿಸುತ್ತಾರೆ.

ಮುದ್ದೆ ಕಾಣೆಯಾಗುತ್ತಿರುವುದಕ್ಕೆ ೧೦% ಮುದ್ದೆ ಕಟ್ಟಲು ಬರದಿರುವುದು , ೯೦% ಜೋಡಿ ಸಾರುಗಳು ಇಲ್ಲದಿರುವುದು. ನೀವು ತಿಪ್ಪರಲಾಗ ಹಾಕಿದರೂ ಅದನ್ನು ವರುಷಾನುಗಟ್ಟಲೆ ತರಕಾರಿ ಹುಳಿಗಳಲ್ಲಿ ತಿನ್ನಲಾರಿರಿ. ಇದು ಮಂತ್ರ- ನಿಮಗೆ ಮುದ್ದೆ ಆಸೆಯಿದ್ದಲ್ಲಿ ಮೊದಲು ಸಾರುಗಳನ್ನು ಕಲಿಯಿರಿ. ಆನಂತರ ಮುದ್ದೆ. ಮೊದಲೇ ಮುದ್ದೆಗೆ ಕೈಹಾಕಿದರೆ ಸೋಲು ನಿಶ್ಚಿತ.

ಆಗ ತಾನೆ ಕಟ್ಟುತ್ತಿರುವ ಮುದ್ದೆಯಲ್ಲಿ ಚೂರು ತೆಗೆದು ಅದರಲ್ಲಿ ಉಪ್ಪು ಮತ್ತು ತುಪ್ಪ ಬೆರೆಸಿ ಪಿಡಿಸೆ ಮಾಡಿ ಮಕ್ಕಳ ಕೈಗೆ ಕೊಟ್ಟು ನೋಡಿ. ಬಾಲ್ಯದಿಂದಲೆ ಮುದ್ದೆಯ ರುಚಿ ಹತ್ತಿಸುವುದು ಹಾಗೆ. ಮುದ್ದೆ ತಪ್ಪಲೆ ತಳದಲ್ಲಿ ಸೀಕಲು ಉಳಿದಿರುತ್ತದೆ. ಸುಮ್ಮನೆ ನಿಮ್ಮ ಚಕ್ಕುಲಿ ಹಪ್ಪಳಗಳಂತೆ ಅದನ್ನು ಎಬ್ಬಿ ತಿನ್ನಲು ಕೊಡಿ.

ಮಧು ವೈ.ಎನ್.

ಆರೋಗ್ಯ

ನಿಮ್ಮ ದೈನಂದಿನ ಆಹಾರದಲ್ಲಿ ಚೀಸ್​ನನ್ನು ಸೇರಿಸಿ: ಈ ಕೆಳಗಿನ ಪ್ರಯೋಜನಗಳನ್ನು ಪಡೆಯಿರಿ

Published

on

ನಿಮ್ಮ ದೇಹದಲ್ಲಿ ಲ್ಯಾಕ್ಟೋಸ್ ಅಂಶ ಕಡಿಮೆ ಇದ್ರೆ, ನಿಮಗೆ ಚೀಸ್ ಅತ್ಯಂತ ಪ್ರಯೋಜನಕಾರಿ. ಈ ಉತ್ಪನ್ನವು ಆರೋಗ್ಯಕ್ಕೆ ಅಮೂಲ್ಯವಾದ ಅನೇಕ ಅಂಶಗಳನ್ನು ಒಳಗೊಂಡಿದೆ. ನಮ್ಮ ದೇಹದ ಮೂಳೆಗಳನ್ನು ಬಲಪಡಿಸುವುದರಿಂದ ಹಿಡಿದು, ನಮ್ಮ ಹೃದಯದ ಆರೋಗ್ಯವನ್ನು ಕಪಾಡುವವರೆಗೆ ಚೀಸ್​​ ತುಂಬಾ ಪ್ರಯೋಜನಕಾರಿಯಾಗಿದೆ.

ಹೆಲ್ತ್‌ಲೈನ್ ವರದಿಯ ಪ್ರಕಾರ, ಚೀಸ್ ವಿಟಮಿನ್ ಎ, ವಿಟಮಿನ್ ಬಿ 12, ಸತು, ರಂಜಕ, ಮೆಗ್ನೀಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಇದು ಹಲ್ಲುಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಚೀಸ್‌ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಮತ್ತು ವಿಟಮಿನ್ ಕೆ 2 ಸಮೃದ್ಧವಾಗಿದೆ.

ಚೀಸ್​​ ವಿವಿಧ ಆರೋಗ್ಯ ಸಮಸ್ಯೆಗಳನ್ನು ನಮ್ಮಿಂದ ದೂರವಿಡುತ್ತದೆ. ಅಲ್ಲದೇ ಎನ್​ಬಿಟಿ ಪ್ರಕಾರ, ಪ್ರತಿದಿನ ಒಂದು ಸ್ಲೈಸ್ ಚೀಸ್​​ನನ್ನು ಸೇವಿಸುವುದು ಒಂದು ಲೋಟ ಹಾಲಿಗೆ ಸಮವಾಗಿದೆ.

ಚೀಸ್‌ನ ಕೆಲವು ಪ್ರಯೋಜನಗಳು ಇಲ್ಲಿವೆ:

1) ಕ್ಯಾವಿಟಿ ತೆಗೆದುಹಾಕುತ್ತದೆ: ಹೆಲ್ತ್‌ಲೈನ್ ಪ್ರಕಾರ, ಹಲ್ಲುಗಳನ್ನು ರಕ್ಷಿಸುವಲ್ಲಿ ಚೀಸ್ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ಹಲ್ಲುಗಳ ಸುತ್ತ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಹಲ್ಲಿನ ದಂತಕವಚವನ್ನು ರಕ್ಷಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಡಿ ಹಲ್ಲುಗಳನ್ನು ಒಳಗಿನಿಂದ ಗಟ್ಟಿಯಾಗಿರಿಸುತ್ತದೆ ಮತ್ತು ಹಾನಿಯಾಗದಂತೆ ತಡೆಯುತ್ತದೆ.

2) ತೂಕವನ್ನು ನಿಯಂತ್ರಿಸುತ್ತದೆ: ಪ್ರತಿದಿನ ಸಾಕಷ್ಟು ಪ್ರಮಾಣದ ಚೀಸ್ ಸೇವನೆಯು ಸ್ನಾಯುಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ನೀವು ತೂಕವನ್ನು ಕಳೆದುಕೊಳ್ಳಲು ಬಯಸಿದರೆ, ನಿಮ್ಮ ದೈನಂದಿನ ಆಹಾರದಲ್ಲಿ ಚೀಸ್​ನನ್ನು ಸೇರಿಸಿ.

3) ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ: ಚೀಸ್ ಉತ್ತಮ ಸೂಕ್ಷ್ಮ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಅವು ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇವು ಚಯಾಪಚಯ ಪ್ರಕ್ರಿಯೆಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಚೀಸ್ ಸ್ಯಾಚುರೇಟೆಡ್ ಕೊಬ್ಬು ಆಗಿದ್ದು, ಅದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

4) ಮೆದುಳಿಗೆ ಒಳ್ಳೆಯದು: ಚೀಸ್ ಒಮೆಗಾ 3, 6 ಮತ್ತು ಅಮೈನೋ ಆಮ್ಲಗಳಂತಹ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಮೆದುಳಿನಲ್ಲಿ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ.

5) ಎಲುಬುಗಳನ್ನು ಗಟ್ಟಿಗೊಳಿಸುತ್ತದೆ: ವಿಟಮಿನ್ ಬಿ, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಯಲ್ಲಿ ಸಮೃದ್ಧವಾಗಿರುವ ಇದು ಮೂಳೆಗಳನ್ನು ಬಲಪಡಿಸುತ್ತದೆ. ಹಾಗಾಗಿ ಇದು ಮಕ್ಕಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಆಸ್ಟಿಯೊಪೊರೋಸಿಸ್‌ನಿಂದ ವಯಸ್ಸಾದವರನ್ನು ರಕ್ಷಿಸಲು ಚೀಸ್​ನನ್ನು ಸಹ ಸೇವಿಸಬಹುದು.

Continue Reading

ಆರೋಗ್ಯ

ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆ ಹೊಂದಿದ್ದಾರೆ: WCD ministry

Published

on

ನವದೆಹಲಿ: ನ. 7 (ಯುಎನ್ಐ) ಭಾರತದಲ್ಲಿ 33 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದೆ.

ಕೋವಿಡ್ ಸಾಂಕ್ರಾಮಿಕದಿಂದ ಬಡ ಮಕ್ಕಳಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆ ಮತ್ತು ಅಪೌಷ್ಟಿಕತೆ ಹೆಚ್ಚಲು ಕಾರಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹೇಳಿದೆ. 17,76,902 (17.76 ಲಕ್ಷ/1.7 ಮಿಲಿಯನ್) ಮಕ್ಕಳು ಹೆಚ್ಚು ಅಪೌಷ್ಟಿಕತೆಯಿಂದ (SAM-severely acute malnourished children) ಬಳಲುತ್ತಿವೆ. 15, 46,420 (15.46 ಲಕ್ಷ/1.5 ಮಿಲಿಯನ್) ಮಕ್ಕಳು ಮಧ್ಯಮ ಅಪೌಷ್ಟಿಕತೆಯಿಂದ (MAM-moderately acute malnourished ) ಬಳಲುತ್ತಿವೆ. 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 33,23,322 (33.23 ಲಕ್ಷ/3.3 ಮಿಲಿಯನ್) ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂದು ಆರ್​ಟಿಐ ಪ್ರಶ್ನೆಗೆ ಸಚಿವಾಲಯ ಉತ್ತರ ನೀಡಿದೆ. ಕಳೆದ ವರ್ಷ ಅಭಿವೃದ್ಧಿಪಡಿಸಲಾದ ಪೋಶನ್ ಟ್ರ್ಯಾಕರ್ ಅಪ್ಲಿಕೇಶನ್‌ನಲ್ಲಿ ಸಂಖ್ಯೆಗಳನ್ನು ನೋಂದಾಯಿಸಲಾಗಿದೆ.

ನವೆಂಬರ್ 2020 ಮತ್ತು ಅಕ್ಟೋಬರ್ 14, 2021 ರ ನಡುವೆ SAM ಮಕ್ಕಳ ಸಂಖ್ಯೆಯಲ್ಲಿ 91 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ. ಅಂದರೆ 9,27,606 (9.27 ಲಕ್ಷ) ದಿಂದ ಈಗ 17.76 ಲಕ್ಷಕ್ಕೆ ಏರಿಕೆಯಾಗಿದೆ. ಆದ್ರೆ ಈ ಎರಡು ಅಂಕಿಅಂಶಗಳ ಡೇಟಾ ಸಂಗ್ರಹಣೆಯ ವಿಧಾನ ವಿಭಿನ್ನವಾಗಿದೆ. ಕಳೆದ ವರ್ಷ ಗುರುತಿಸಲಾದ SAM ಮಕ್ಕಳ ಸಂಖ್ಯೆಯನ್ನು ಆರು ತಿಂಗಳಿಂದ ಹಿಡಿದು ಆರು ವರ್ಷಗಳವರೆಗಿನ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿತ್ತು. ಇತ್ತೀಚಿನ ಅಂಕಿಅಂಶಗಳು ಪೋಶನ್ ಟ್ರ್ಯಾಕರ್ ಮೂಲಕ, ಅಲ್ಲಿ ಅಂಗನವಾಡಿಗಳಿಂದ ನೇರವಾಗಿ ಸಂಖ್ಯೆಗಳನ್ನು ನಮೂದಿಸಲಾಗಿದೆ ಮತ್ತು ಮಕ್ಕಳ ವಯಸ್ಸಿನ ಗುಂಪನ್ನು ನಿರ್ದಿಷ್ಟಪಡಿಸಲಾಗಿಲ್ಲ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎತ್ತರಕ್ಕೆ ತಕ್ಕ ತೂಕವಿಲ್ಲದಿರುವುದು, ದೇಹದ ಬೆಳವಣಿಗೆ ಸರಿಯಾಗಿ ಆಗದಿರುವುದು, 115 mm ಗಿಂತ ತೋಳಿನ ಸುತ್ತಳತೆ ಇರುವುದು ಇಂತವರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. ಮಧ್ಯ-ಮೇಲಿನ-ತೋಳಿನ ಸುತ್ತಳತೆ 115 mm ಗಿಂತ ಹೆಚ್ಚು ಅಥವಾ 125 mm ಗಿಂತ ಕಡಿಮೆ ಇದ್ದರೆ ಸ್ವಲ್ಪ ಮಟ್ಟಿನ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದೆ.

MAM ಮತ್ತು SAM ಎರಡೂ ಮಗುವಿನ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮವನ್ನು ಬೀರುತ್ತದೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಬೇಗನೇ ರೋಗಗಳಿಗೆ ತುತ್ತಾಗುತ್ತಾರೆ. MAM ನಿಂದ ಬಳಲುತ್ತಿರುವ ಮಕ್ಕಳು ಬಾಲ್ಯದಲ್ಲಿ ಹೆಚ್ಚು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಅಥವಾ ಮರಣ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ.

ಪೋಶನ್ ಟ್ರ್ಯಾಕರ್ ಅನ್ನು ಉಲ್ಲೇಖಿಸಿ ಆರ್​ಟಿಐ ನೀಡಿರುವ ಉತ್ತರದ ಪ್ರಕಾರ, ಮಹಾರಾಷ್ಟ್ರದಲ್ಲಿ MAMನಿಂದ 1,57,984 (1.57 ಲಕ್ಷ) ಮಕ್ಕಳು ಮತ್ತು SAM 4,58,788 (4.58 ಲಕ್ಷ) ಮಕ್ಕಳು ಬಳಲುತ್ತಿದ್ದು, ಒಟ್ಟು 6,16,772 (6.16 ಲಕ್ಷ) ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಿಹಾರದಲ್ಲಿ 4,75,824 (4.75 ಲಕ್ಷ) ಮಕ್ಕಳು ಅಪೌಷ್ಟಿಕತೆಯಿಂದ ಬಳುತ್ತಿದ್ದಾರೆ. ಇದರಲ್ಲಿ 3,23,741 MAM ಮಕ್ಕಳು ಮತ್ತು 1,52,083 SAM ಮಕ್ಕಳು ಇದ್ದಾರೆ.

ಗುಜರಾತ್ 1,55,101 (1.55 ಲಕ್ಷ) MAM ಮಕ್ಕಳು ಮತ್ತು 1,65,364 (1.65 ಲಕ್ಷ) SAM ಮಕ್ಕಳೊಂದಿಗೆ ಒಟ್ಟು 3,20,465 (3.20 ಲಕ್ಷ) ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಕೋವಿಡ್ ಸಾಂಕ್ರಾಮಿಕವು ಸಾಮಾಜಿಕ-ಆರ್ಥಿಕ ಸೂಚಕಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಕಳೆದ ದಶಕದಲ್ಲಿ ಆದ ಬೆಳವಣಿಗೆ ಈಗ ಕುಂಠಿತವಾಗುತ್ತಿದೆ. ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಯೋಜನೆ) ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಊಟದಂತಹ ಸೇವೆಗಳು ಶಾಲೆಗಳ ದೀರ್ಘಾವಧಿಯ ಮುಚ್ಚುವಿಕೆಯಿಂದ ಚಾಲ್ತಿಯಲ್ಲಿ ಇಲ್ಲದ ಕಾರಣ ಬಡ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಲು ಕಾರಣವಾಗಿದೆ. ಏಕೆಂದರೆ ಈ ಮಕ್ಕಳು ಇಂತಹ ಯೋಜನೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು ಎಂದು ಮಕ್ಕಳ ಹಕ್ಕುಗಳು ಮತ್ತು ನೀವು (CRY)ಸಿಇಒ ಪೂಜಾ ಮರ್ವಾಹಾ ಹೇಳಿದ್ದಾರೆ.

ಆಂಧ್ರಪ್ರದೇಶದಲ್ಲಿ 2,67,228 (2.76 ಲಕ್ಷ) ಅಪೌಷ್ಟಿಕ ಮಕ್ಕಳು (69,274 MAM ಮಕ್ಕಳು ಮತ್ತು 1,97,954 SAM ಮಕ್ಕಳು) ಮತ್ತು ಕರ್ನಾಟಕದಲ್ಲಿ 2,49,463 (2.49 ಲಕ್ಷ) ಮಕ್ಕಳು (1,82,178 MAM ಮಕ್ಕಳು ಮತ್ತು 67,285 SAM ಮಕ್ಕಳು) ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಉತ್ತರ ಪ್ರದೇಶದ 1,86,640 (1.86 ಲಕ್ಷ) ಅಪೌಷ್ಟಿಕ ಮಕ್ಕಳನ್ನು ಹೊಂದಿದೆ (1,14,094 MAM ಮಕ್ಕಳು ಮತ್ತು 72,546 SAM ಮಕ್ಕಳು). ತಮಿಳುನಾಡಿನಲ್ಲಿ ಅಪೌಷ್ಟಿಕತೆಯನ್ನು 1,78,060 (1.78 ಲಕ್ಷ) ಇದರಲ್ಲಿ (1,20,076 MAM ಮತ್ತು 57,984 SAM)ಹೊಂದಿದ್ದಾರೆ. ಅಸ್ಸಾಂನಲ್ಲಿ 1,76,462 (1.76 ಲಕ್ಷ) ಅಪೌಷ್ಟಿಕತೆಯ ಪ್ರಕರಣಗಳಿವೆ. (1,17,016 MAM ಮಕ್ಕಳು ಮತ್ತು 59,446 SAM ಮಕ್ಕಳು) ಮತ್ತು ತೆಲಂಗಾಣದಲ್ಲಿ 1,52,524 (1.52 ಲಕ್ಷ) ( 95,033 MAM ಮತ್ತು 57,491 SAM ಮಕ್ಕಳು) ಮಕ್ಕಳು ಅಪೌಷ್ಟಿಕತೆಯನ್ನು ಹೊಂದಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು 1,17,345 (1.17 ಲಕ್ಷ) ಮಕ್ಕಳು ಅಪೌಷ್ಟಿಕತೆಯನ್ನು ಹೊಂದಿದ್ದು, ಇದರಲ್ಲಿ 20,122 MAM ಮತ್ತು 97,223 SAM ಮಕ್ಕಳು ಇದ್ದಾರೆ. ಅಪೌಷ್ಟಿಕತೆಯನ್ನು ಮೊದಲೇ ಗುರುತಿಸುವುದು ಮತ್ತು ಅಪೌಷ್ಟಿಕತೆ ಹೆಚ್ಚಾಗುವುದನ್ನು ತಡೆಯಲು ಸೂಕ್ತವಾದ ಚಿಕಿತ್ಸೆ ಬಹಳ ಮುಖ್ಯ ಎಂದು ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಮಕ್ಕಳ ವೈದ್ಯ ಅನುಪಮ್ ಸಿಬಲ್ ಹೇಳಿದ್ದಾರೆ.

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಸೋಂಕಿನ ಅಪಾಯವನ್ನು ಹೊಂದಿರುತ್ತಾರೆ. ಕಡಿಮೆ ಶಕ್ತಿಯನ್ನು ಹೊಂದಿರುತ್ತಾರೆ ಮತ್ತು ಶಾಲೆಯಲ್ಲಿ ಅವರ ಆನುವಂಶಿಕ ಸಾಮರ್ಥ್ಯಕ್ಕಿಂತ ಕಡಿಮೆ ಸಾಧನೆ ಮಾಡುತ್ತಾರೆ ಎಂಬುದು ನಮಗೆ ತಿಳಿದಿದೆ. ಅಪೌಷ್ಟಿಕತೆಯನ್ನು ದೂರ ಮಾಡಲು ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಸಾಕಷ್ಟು ಪೋಷಕಾಂಶಯುಕ್ತ ಆಹಾರ ನೀಡುವ ಅಗತ್ಯವಿದೆ ಎಂದು ಸಿಬಲ್ ಹೇಳಿದ್ದಾರೆ.

ಅಪೌಷ್ಟಿಕತೆಗೆ ಚಿಕಿತ್ಸೆ ನೀಡುವುದರ ಜೊತೆಗೆ ಯಾವುದಕ್ಕೆ ಸಂಬಂಧಿಸಿದ ಅನಾರೋಗ್ಯ ಎನ್ನುವುದನ್ನು ನಿರ್ಣಯಿಸುವುದು ಮುಖ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಕೆಲವೊಮ್ಮೆ ಅಪೌಷ್ಟಿಕತೆ ಮೂತ್ರಪಿಂಡದ ಅಸ್ವಸ್ಥತೆ ಅಥವಾ ಮಧುಮೇಹ ಮತ್ತು ಕ್ಷಯರೋಗದಂತಹ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಅಪೌಷ್ಟಿಕತೆಯ ಮಕ್ಕಳ ಕೊನೆಯ ಅಂಕಿಅಂಶವು NFHS-4 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ನಿಂದ ಬಂದಿದೆ. 2015-16 ರ ಪ್ರಕಾರ ಐದು ವರ್ಷದೊಳಗಿನ ಶೇ. 38.4 ರಷ್ಟು ಮಕ್ಕಳು ಕಡಿಮೆ ಎತ್ತರದ ವಯಸ್ಸಿನವರು ಮತ್ತು ಶೇ. 21 ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿರುತ್ತಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾದ NFHS-5 ಯು 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿಅಂಶಗಳನ್ನು ನೀಡಿತು. ಇದು 2015-16 ಕ್ಕಿಂತ 2019-20 ರಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ ಎಂದು ತೋರಿಸಿದೆ. ಅಲ್ಲದೆ ಭಾರತವು 116 ದೇಶಗಳ ಜಾಗತಿಕ ಹಸಿವು ಸೂಚ್ಯಂಕ (GHI) 2021 ರಲ್ಲಿ 101 ನೇ ಸ್ಥಾನಕ್ಕೆ ಕುಸಿದಿದೆ. 2020 ರಲ್ಲಿ ಭಾರತ 94ನೇ ಸ್ಥಾನ ಪಡೆದಿತ್ತು. ಅಲ್ಲದೇ ಭಾರತವನ್ನು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ಹಿಂದಿಕ್ಕಿವೆ.

Continue Reading

ಆರೋಗ್ಯ

ಕ್ಯಾರೆಟ್ ಮತ್ತು ಅದರ ಜ್ಯೂಸ್‌ ಸೇವಿಸುವುದರಿಂದ ಏನೆಲ್ಲಾ ಉಪಯೋಗವಿದೆ ಗೊತ್ತಾ?

Published

on

ಚಳಿಗಾಲ ಪ್ರಾರಂಭವಾದ ತಕ್ಷಣ ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದು ವರ್ಷವಿಡಿ ಸುಲಭವಾಗಿ ದೊರೆಯುತ್ತದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಮಿಟಮಿನ್‌ಗಳಿವೆ.

ಪ್ರತಿದಿನ ಕ್ಯಾರೆಟ್ ಅಥವಾ ಅದರ ಜ್ಯೂಸ್​ನನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದಂತೆ.

1. ಪ್ರತಿದಿನ ಕ್ಯಾರೆಟ್ ತಿನ್ನುವುದರಿಂದ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಏಕೆಂದರೆ ಕ್ಯಾರೆಟ್‌ ಟಾಕ್ಸಿನ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಸಾಯುವುದನ್ನು ತಡೆಯುತ್ತದೆ. ಇದರಿಂದಾಗಿ ಚರ್ಮವು ಆರೋಗ್ಯಕರವಾಗಿ ಕಾಣುತ್ತದೆ.

2. ಕ್ಯಾರೆಟ್​​ನಲ್ಲಿ ಶೇ. 10ರಷ್ಟು ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲದೇ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ.

3. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.

4. ಕ್ಯಾರೆಟ್​​ನಲ್ಲಿ ಫೈಬರ್ ಹೇರಳವಾಗಿದ್ದು, ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದೆ. ಇದು ದೇಹದ ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡುತ್ತದೆ.

5. ಪ್ರತಿನಿತ್ಯ ಕ್ಯಾರೆಟ್ ತಿನ್ನುವುದರಿಂದ ವಸಡಿನ ರಕ್ತಸ್ರಾವವನ್ನು ನಿಲ್ಲಿಸಬಹುದು ಮತ್ತು ಇದರಿಂದ ನೀವು ಹೊಳೆಯುವ ಹಲ್ಲುಗಳನ್ನು ಪಡೆಯಬಹುದು.

6. ಕ್ಯಾರೆಟ್ ಜ್ಯೂಸ್‌ಗೆ ಸಕ್ಕರೆ ಮತ್ತು ಕಾಳುಮೆಣಸು ಬೆರೆಸಿ ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ ಮತ್ತು ಕಫದಿಂದಲೂ ಪರಿಹಾರ ಸಿಗುತ್ತದೆ.

7. ಬೀಟಾ ಕ್ಯಾರೋಟೀನ್ ಕೇವಲ ಕಣ್ಣಿನ ದೃಷ್ಟಿಗೆ ಮಾತ್ರವಲ್ಲ, ಮೆದುಳಿನ ಕ್ಷಮತೆ ಹೆಚ್ಚಿಸಲೂ ನೆರವಾಗುತ್ತದೆ. ವಯಸ್ಸಾದಂತೆ ಎದುರಾಗುವ ಸ್ಮರಣ ಶಕ್ತಿ ಕುಂದುವುದು, ಮರೆಗುಳಿತನ, ಅಲ್ಜೀಮರ್ಸ್ ಕಾಯಿಲೆ ಮೊದಲಾದವುಗಳು ಎದುರಾಗುವ ಸಾಧ್ಯತೆಯನ್ನು ಕ್ಯಾರೆಟ್ ಸೇವನೆಯಿಂದ ತಗ್ಗಿಸಬಹುದು.

Continue Reading
Advertisement
ಆರೋಗ್ಯ9 seconds ago

ಲಸಿಕೆ ನೀಡಿಕೆ.. ರಾಜ್ಯ ಅಪೂರ್ವ ಸಾಧನೆ

ಬೆಂಗಳೂರು, ಜ ೨೩(ಯುಎನ್ ಐ) ಕೊರೋನಾ ಲಸಿಕೆ ವಿಚಾರದಲ್ಲಿ ರಾಜ್ಯ ಅಪೂರ್ವ ಸಾಧನೆ ಮಾಡಿದ್ದು, ೧೮ ವರ್ಷ ಮೀರಿದ ಎಲ್ಲರಿಗೂ ಮೊದಲ ಡೋಸ್ ಲಸಿಕೆ ನೀಡುವ ಮೂಲಕ...

ದೇಶ11 mins ago

ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ಪ್ರಧಾನಿ ನಾಳೆ ಸಂವಾದ

ನವದೆಹಲಿ, ಜ ೨೩(ಯುಎನ್ ಐ) ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪುರಸ್ಕೃತರೊಂದಿಗೆ ನಾಳೆ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ....

ಅಂಕಣ13 mins ago

ಮಾಯಾಜಾಲದ ಬೆನ್ನು ಹತ್ತಿ

ಅಂಕಣ: ಮುಖಗಳು -೩ ಒಂಬತ್ತನೆ ತರಗತಿ ವಿದ್ಯಾರ್ಥಿ ತಂದೆಯೊಬ್ಬರು ಫೋನ್ ಮಾಡಿದ್ದರು. ‘ಮಗ ಮೊಬೈಲ್ ಕೊಡಿಸು ಎಂದು ಹಠ ಮಾಡುತ್ತಿದ್ದಾನೆ ಏನು ಮಾಡಲಿ?’ ಎಂದು ಕೇಳಿದ್ದರು. ‘ಅವನಿಗೇಕೆ...

ದೇಶ15 mins ago

ಟ್ರೈನ್ ಡ್ರೈವರ್‌ಗೆ ನಿದ್ದೆ ಎಂಬ ಚಿಂತೆ; ಪ್ರಯಾಣಿಕರಿಗೆ ಸುಸ್ತೋ ಸುಸ್ತು..!!

ಶಹಜಹಾನ್ಪುರ್/ಉತ್ತರಪ್ರದೇಶ: ಜನೆವರಿ 23 (ಯು.ಎನ್.ಐ.) “ನನ್ನ ನಿದ್ದೆ ಸಂಪೂರ್ಣವಾಗಿಲ್ಲ. ನಾನು ಸದ್ಯ ರೈಲು ಚಲಾಯಿಸುವುದಿಲ್ಲ.” ಉತ್ತರ ಪ್ರದೇಶದ ಶಹಜಹಾನ್‌ಪುರ ರೈಲು ನಿಲ್ದಾಣದಲ್ಲಿ ಶುಕ್ರವಾರ ಇಂಥದ್ದೊಂದು ವಿಚಿತ್ರ ಘಟನೆ...

ದೇಶ45 mins ago

ಬಂಗಾಳ: ನೇತಾಜಿ ಜನ್ಮದಿನದಂದು ಲಾಠಿ ಚಾರ್ಜ್

ಕೋಲ್ಕತ್ತಾ: ಜನೆವರಿ 23 (ಯು.ಎನ್.ಐ.) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಸಂದರ್ಭದಲ್ಲಿಯೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ರಾಜಕೀಯ ನಿಂತಿಲ್ಲ. ಪಶ್ಚಿಮ ಬಂಗಾಳದ...

ಅಂಕಣ2 hours ago

ದಟ್ಟ ಕಾಡಿನಲ್ಲಿ ʻಸಪ್ನೋಂ ಕೀ ರಾಣೀʼ

ಅಂಕಣ: ಒಂದೂರಲ್ಲಿ ಒಂದಿನ- 3 ಈ ಒಂದೂರು ಅನ್ನುವ ಮಾಯೆ ಇದೆಯಲ್ಲ, ಅದು ವಿಚಿತ್ರವಾದದ್ದು. ಅಪ್ಪ ಕಥೆ ಹೇಳುವಾಗ ಪ್ರತಿ ಸಲವೂ ಆ ಕಥೆ ಒಂದೂರಿನಲ್ಲಿ ಅಂತಲೇ...

ಕ್ರೀಡೆ2 hours ago

ಅಂಕುಶ್ ರಘುವಂಶಿ ಟೀಂ ಇಂಡಿಯಾದ ಉದಯೋನ್ಮುಖ ತಾರೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅಂಡರ್ 19 ವರ್ಲ್ಡ್ ಕಪ್ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಉದಯೋನ್ಮುಖ ಆಟಗಾರ ದೊರೆತಿದ್ದಾರೆ. ಅವರೇ ದೆಹಲಿ ಮೂಲದ ಅಂಕುಶ್...

ಅಂಕಣ3 hours ago

ಎಳವೆಯಿಂದ ರಂಗಭೂಮಿ

ನಾದಾಂಕಣ – ಡಾ. ನಾ. ದಾಮೋದರ ಶೆಟ್ಟಿ ಭಾರತೀಯ ಹಾಗೂ ಗ್ರೀಕ್‌ ರಂಗಭೂಮಿಗೆ ಬಹುದೊಡ್ಡ ಪರಂಪರೆಇದೆ ಎನ್ನುವುದು ಸಾರ್ವಕಾಲಿಕ ಸತ್ಯ. ಆದರೆ ಯುರೋಪಿನ ರಂಗಭೂಮಿಯಾಗಲೀ ರಷ್ಯಾ, ಅಮೇರಿಕಾ...

ದೇಶ3 hours ago

ಅರುಣಾಚಲದಿಂದ ನಾಪತ್ತೆಯಾಗಿದ್ದ ಯುವಕ ಚೀನಾ ಗಡಿಯಲ್ಲಿ ಪತ್ತೆ!

ಹೊಸದಿಲ್ಲಿ: ಜನೆವರಿ 23 (ಯು.ಎನ್.ಐ.) ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಭಾರತೀಯ ಯುವಕ ಚೀನಾ ಗಡಿಯಲ್ಲಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಚೀನಾ ಸೈನಿಕರು ಭಾರತೀಯ ಯೋಧರಿಗೆ ಮಾಹಿತಿ ನೀಡಿದ್ದು,...

ಹಣಕಾಸು4 hours ago

ಕೆಲಸ ಬದಲಾಯಿಸಿದ್ದೀರಾ? ಚಿಂತೆ ಬಿಡಿ.. ನಿಮ್ಮ ನೆರವಿಗೆ ಇದೆ ಇಪಿಎಫ್ಒ!

ಬೆಂಗಳೂರು: ಜನೆವರಿ 23 (ಯು.ಎನ್.ಐ.) ಉತ್ತಮ ಸಂಬಳ, ಭದ್ರತೆಯುಳ್ಳ ನೌಕರಿ, ವಿಶೇಷ ಸವಲತ್ತುಗಳು.. ಹೀಗೆ ನಾನಾ ಉದ್ದೇಶಗಳಿಂದ ಉದ್ಯೋಗಿಗಳು ತಮ್ಮ ಕೆಲಸವನ್ನು ಬದಲಾಯಿಸುತ್ತಾ ಇರುತ್ತಾರೆ. ಇಂತಹ ಸಂದರ್ಭದಲ್ಲಿ...

ಟ್ರೆಂಡಿಂಗ್

Share