Connect with us


      
ದೇಶ

ಮೋದಿಜಿ ಮೌನ ಮುರಿಯಿರಿ ಎಂದು ಆಗ್ರಹಿಸಿದ ರಾಹುಲ್ ಗಾಂಧಿ

UNI Kannada

Published

on

ನವದೆಹಲಿ:ಜನೆವರಿ 03 (ಯು.ಎನ್.ಐ) ಚೀನಾ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸುವುದನ್ನು ಮುಂದುವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿಯವರನ್ನು ಗುರಿಯಾಗಿಸಿದ್ದಾರೆ.
ಈ ಬಾರಿ ಹೊಸ ವರ್ಷದ ಸಂದರ್ಭದಲ್ಲಿ ಗಾಲ್ವಾನ್‌ನಲ್ಲಿ ಚೀನಾ ಧ್ವಜವನ್ನು ಹಾರಿಸಿದ್ದಾರೆ. ಆದರೆ ಗಾಲ್ವಾ‌ನ್ನಲ್ಲಿ ನಮ್ಮ ಭಾರತದ ತ್ರಿವರ್ಣಧ್ವಜ ಹಾರಿದರೆ ಚೆಂದ ಎನ್ನುವುದನ್ನು ಮೋದಿ ಚೀನಾಕ್ಕೆ ತಕ್ಕ ಉತ್ತರ ನೀಡಬೇಕು.ಗಾಲ್ವಾರ್‌ನಲ್ಲಿ ಚೀನಾ ಧ್ವಜ ಹಾರಾಡಿದ್ದಕ್ಕೆ ಮೋದಿಜೀ, ಮೌನವನ್ನು ಮುರಿಯಿರಿ ಎಂದು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಎಂದು ಹೇಳಲಾದ ಪತ್ರಿಕೆಯೊಂದು ಜನವರಿ 1 ರಂದು ವರದಿಯೊಂದನ್ನು ಪ್ರಕಟಿಸಿ ಹೊಸ ವರ್ಷದ ಸಂದರ್ಭದಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಧ್ವಜವನ್ನು ಹಾರಿಸಲಾಗಿದೆ ಎಂದು ಹೇಳಿದೆ. 2022 ರ ಮೊದಲ ದಿನದಂದು ಚೀನಾದ ಪಂಚತಾರಾ ಕೆಂಪು ಧ್ವಜವನ್ನು ದೇಶಾದ್ಯಂತ ಹಾರಿಸಲಾಯಿತು ಎಂದು ವರದಿ ಹೇಳಿದೆ. ಇವುಗಳಲ್ಲಿ ‘ಹಾಂಗ್ ಕಾಂಗ್ ಮತ್ತು ಗಾಲ್ವಾನ್ ಕಣಿವೆಯ ವಿಶೇಷ ಆಡಳಿತ ಪ್ರದೇಶ’ ಸೇರಿದೆ ಎಂದಿದೆ.
ಇನ್ನು ಅರುಣಾಚಲ ಪ್ರದೇಶದಲ್ಲಿ ಹೆಸರು ಬದಲಾಯಿಸುವ ವಿಷಯದ ಬಗ್ಗೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿ ಅದು ಸತ್ಯವನ್ನು ಬದಲಾಯಿಸುವುದಿಲ್ಲ ಎಂದು ಹೇಳಿದೆ. ಆದರೆ ಗಾಲ್ವಾನ್ ಘಟನೆಯ ಬಗ್ಗೆ ಭಾರತ ಸರ್ಕಾರ ಇನ್ನೂ ಏನನ್ನೂ ಹೇಳಿಲ್ಲ.

ವರದಿಯ ಪ್ರಕಾರ, ಭಾರತದ ಗಡಿಯ ಸಮೀಪವಿರುವ ಗಾಲ್ವಾನ್ ಕಣಿವೆಯ ಬಂಡೆಯೊಂದರ ಮೇಲೆ ಬರೆದಿರುವ “ಒಂದು ಇಂಚು ಭೂಮಿಯನ್ನು ಸಹ ಬಿಡಬೇಡಿ” ಎಂಬ ಘೋಷಣೆಯ ಮುಂದೆ ಚೀನಾ ಸೈನಿಕರು ನಿಂತಿರುವುದನ್ನು ತೋರಿಸುವ ವೀಡಿಯೊವನ್ನು ಪತ್ರಿಕೆಗೆ ಕಳುಹಿಸಲಾಗಿದ್ದು ಚೀನೀ ಜನರು ಹೊಸ ವರ್ಷದಂದು” ನಾವು ನಮ್ಮ ಗಡಿಯನ್ನು ರಕ್ಷಿಸುತ್ತೇವೆ ಎಂದು ನಾವು ನಮ್ಮ ತಾಯ್ನಾಡಿಗೆ ಭರವಸೆಯನ್ನು ನೀಡುತ್ತೇವೆ”ಎಂದು ಹೇಳಿದ್ದಾರೆ.
ಪತ್ರಿಕೆ ಪ್ರಕಾರ, ತರಬೇತಿ ಪಡೆಯುತ್ತಿರುವ ವೆಸ್ಟರ್ನ್ ಥಿಯೇಟರ್ ಕಮಾಂಡ್ ಆಫ್ ಚೀನಾದ ಸೈನಿಕರು ಸೆಲ್ಯೂಟ್ ಹೊಡೆದು ಚೀನಾ ದೇಶಕ್ಕೆ ಶುಭ ಹಾರೈಸಿದ್ದಾರೆ.

ಇದಾದ ಒಂದು ದಿನದ ನಂತರ, ಪತ್ರಿಕೆ ಮತ್ತೆ ಎರಡು ಟ್ವೀಟ್‌ಗಳನ್ನು ಮಾಡಿದೆ ಹೊಸ ವರ್ಷದ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶುಭಾಶಯ ಕೋರಲಾಗಿದೆ. ಇದು ನಿಜವಾಗಿದ್ದರೆ, ಅಕ್ಟೋಬರ್‌ನಲ್ಲಿ ಉಭಯ ದೇಶಗಳ ನಡುವಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಭಾರತದ ಕಡೆಯ ಅಸಂಬದ್ಧ ಬೇಡಿಕೆಯಿಂದಾಗಿ ಬಿಕ್ಕಟ್ಟಿನಲ್ಲಿ ಕೊನೆಗೊಂಡಾಗಿನಿಂದ ಇದನ್ನು ಸಕಾರಾತ್ಮಕ ಹೆಜ್ಜೆಯಾಗಿ ನೋಡಬೇಕು ಎಂದು ಪತ್ರಿಕೆ ಟ್ವೀಟ್ ಹೇಳಿದೆ.

ಹೊಸ ವರ್ಷದ ದಿನದಂದು, ಭಾರತ ಮತ್ತು ಚೀನಾದ ಸೈನಿಕರು ಪೂರ್ವ ಲಡಾಖ್‌ನ ಪೋಸ್ಟ್‌ಗಳು ಸೇರಿದಂತೆ ಎಲ್‌ಎಸಿಯ ಉದ್ದಕ್ಕೂ ಹಲವಾರು ಪೋಸ್ಟ್‌ಗಳಲ್ಲಿ ಪರಸ್ಪರ ಸಿಹಿ ಹಂಚಿದರು ಮತ್ತು ಪರಸ್ಪರ ಶುಭಾಶಯ ಕೋರಿದರು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿದ್ದು ವರದಿಯಾಗಿದೆ.

ವರದಿಯ ಪ್ರಕಾರ, ಕಳೆದ ಒಂದೂವರೆ ವರ್ಷಗಳಿಂದ ಹಲವೆಡೆ ಸ್ಥಗಿತದ ಪರಿಸ್ಥಿತಿ ಇರುವ ಸಮಯದಲ್ಲಿ ಎರಡೂ ಕಡೆಯವರು ಈ ಕ್ರಮ ಕೈಗೊಂಡಿದ್ದಾರೆ.ಕಳೆದ ವರ್ಷ ಮೇ 5 ರಂದು ಪೂರ್ವ ಲಡಾಖ್‌ನ ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಎರಡೂ ದೇಶಗಳ ಸೇನೆಗಳ ನಡುವೆ ಹಿಂಸಾತ್ಮಕ ಸಂಘರ್ಷ ನಡೆದಿತ್ತು, ನಂತರ ಎರಡೂ ದೇಶಗಳು ಕ್ರಮೇಣ ಈ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರು ನಿಯೋಜಿಸಲಾಗಿದೆ.

ಚೀನಾ ಸೇನೆಯು ಈ ಪ್ರದೇಶದಲ್ಲಿ ತಮ್ಮ ಡೇರೆಗಳನ್ನು ಸ್ಥಾಪಿಸಿ, ಕಂದಕಗಳನ್ನು ಅಗೆದು, ಭಾರತವು ತನ್ನ ಭೂಪ್ರದೇಶವೆಂದು ಪರಿಗಣಿಸುತ್ತಿರುವ ಪ್ರದೇಶದೊಳಗೆ ಹಲವಾರು ಕಿಲೋಮೀಟರ್ಗಳಷ್ಟು ಭಾರವಾದ ಉಪಕರಣಗಳನ್ನು ತಂದಿದೆ ಎಂದು ಹೇಳಲಾಗಿದೆ.
ಈ ಘಟನೆಯಿಂದ ಆಘಾತಕ್ಕೊಳಗಾದ ಭಾರತವು ಸಾವಿರಾರು ಸೈನಿಕರು ಮತ್ತು ಮಿಲಿಟರಿ ಉಪಕರಣಗಳನ್ನು ಲಡಾಖ್‌ಗೆ ಕಳುಹಿಸಿತ್ತು. ಕಳೆದ ಜೂನ್ 15-16 ರ ರಾತ್ರಿ, ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೇನೆಗಳ ನಡುವೆ ಚಕಮಕಿ ನಡೆದಿದ್ದು ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಸೇರಿದಂತೆ 20 ಸೈನಿಕರು ಕೊಲ್ಲಲ್ಪಟ್ಟಿದ್ದರು. ಇದಕ್ಕೆ ಭಾರತ ಮತ್ತು ಚೀನಾ ಎರಡೂ ಪರಸ್ಪರ ದೂಷಿಸಿದ್ದವು.

Share