Published
5 months agoon
By
UNI Kannada
ನವದೆಹಲಿ, ಡಿ 15( ಯುಎನ್ ಐ) – ವೃತ್ತಿ, ಉದ್ಯೋಗದೊಂದಿಗಿನ ಸಂಬಂಧವನ್ನು ಪರಿಗಣಿಸದೆ ಎಲ್ಲರಿಗೂ ಮೂಲ ಭೂತ ಹಕ್ಕುಗಳನ್ನು ಕಲ್ಪಿಸುವಂತೆ ದೇಶದ ಅತ್ಯುನ್ನತ ನ್ಯಾಯಸ್ಥಾನ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ಲೈಂಗಿಕ ಕಾರ್ಯಕರ್ತೆಯರಿಗೆ ಆ ಧಾರ್ ಕಾರ್ಡ್, ಮತದಾರರ ಚೀಟಿ, ಪಡಿತರ ಚೀಟಿ ನೀಡುವಂತೆ ಆದೇಶಿಸಿದೆ. ಗುರುತಿನ ಚೀಟಿ ಇಲ್ಲದವರಿಗೂ ಪಡಿತರ ಆಹಾರ ಧಾನ್ಯ ಕಲ್ಪಿಸುವಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಲೈಂಗಿಕ ಕಾರ್ಯಕರ್ತೆಯರು ಎದುರಿಸಿದ ಸಂಕಷ್ಟಗಳ ಕುರಿತು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು.
ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ಚೀಟಿ ನೀಡುವಂತೆ ಸುಪ್ರೀಂ ಕೋರ್ಟ್ 2011ರಲ್ಲಿಯೇ ಆದೇಶ ನೀಡಿದ್ದರೂ ಈವರೆಗೆ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಬಿ.ಆರ್.ಗವಾಯಿ ಹಾಗೂ ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು . ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ಚೀಟಿ, ಗುರುತಿನ ಚೀಟಿಗಳನ್ನು ವಿತರಿಸಲು ದಶಕದ ಹಿಂದೆ ಆದೇಶ ನೀಡಿದ್ದರೂ ಜಾರಿಗೊಳಿಸದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಿರ್ಲಕ್ಷ್ಯವನ್ನು ಪೀಠ ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿತು. ನಾಗರಿಕರ ವೃತ್ತಿ, ಉದ್ಯೋಗ ಪರಗಣಿತವಾಗದೆ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳಿವೆ ಎಂದು ಹೇಳಿದೆ. ದೇಶದಲ್ಲಿರುವ ಜನರಿಗೆ ಸರಕಾರಗಳು ಎಲ್ಲ ಸೌಲಭ್ಯಗಳನ್ನು ಯಥಾವತ್ತಾಗಿ ಒದಗಿಸಬೇಕು ಎಂಬುದನ್ನು ನೆನಪಿಸಿದೆ.
ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲೈಂಗಿಕ ಕಾರ್ಯಕರ್ತೆಯರಿಗೆ ಪಡಿತರ ಚೀಟಿ , ಮತದಾರರ ಚೀಟಿ ನೀಡುವ ಕಾರ್ಯಕ್ರಮ ಆರಂಭಿಸುವಂತೆ ಆದೇಶ ಹೊರಡಿಸಿದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ, ರಾಜ್ಯ ಏಡ್ಸ್ ನಿಯಂತ್ರಣ ಸಂಘಗಳ ನೆರವು ಪಡೆಯಬೇಕು ಎಂದು ಸಹ ಸೂಚಿಸಿದೆ. ಸಮುದಾಯ ಆಧಾರಿತ ಸಂಸ್ಥೆಗಳು ನೀಡುವ ಮಾಹಿತಿಯೊಂದಿಗೆ ಲೈಂಗಿಕ ಕಾರ್ಯಕರ್ತೆಯರ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಹೇಳಿದೆ. ಐಡಿ ಕಾರ್ಡ್ ಸಿದ್ದಪಡಿಸುವ ಕ್ರಮದಲ್ಲಿ ಅವರ ಹೆಸರು, ಗುರುತು ಗೌಪ್ಯವಾಗಿಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಜ್ಞಾನವಾಪಿ ಮಸೀದಿ ಸಮೀಕ್ಷೆ; ಕೊಳದಲ್ಲಿ ಶಿವಲಿಂಗ ಪತ್ತೆ: ವಕೀಲರ ಹೇಳಿಕೆ
ಜ್ಞಾನವಾಪಿ ಮಸೀದಿ; ಮೂರನೇ ದಿನಕ್ಕೆ ಸರ್ವೇ
ಜ್ಞಾನವಾಪಿ ಮಸೀದಿ; ಮುಂದುವರಿದ ಸಮೀಕ್ಷೆ ಕಾರ್ಯ
ಜ್ಞಾನವಾಪಿ ಶೃಂಗಾರ್ ಗೌರಿ ಸಂಕೀರ್ಣ ಸಮೀಕ್ಷೆ ತಡೆಗೆ ಸುಪ್ರೀಂ ನಿರಾಕರಣೆ
ತಾಜ್ಮಹಲ್ ಕೊಠಡಿ ಸಮೀಕ್ಷೆ; ಅರ್ಜಿ ತಿರಸ್ಕರಿಸಿದ ಕೋರ್ಟ್
ಜ್ಞಾನವಾಪಿ ಮಸೀದಿ ; ಮೇ ೧೭ರೊಳಗೆ ಸಮೀಕ್ಷೆ ಪೂರ್ಣಗೊಳಿಸಿ: ನ್ಯಾಯಾಲಯ