Connect with us


      




ಹಣಕಾಸು

ವಿದೇಶಗಳಲ್ಲಿರುವ   ಕಪ್ಪುಹಣ  ಪ್ರಮಾಣ ಅಧಿಕೃತ ಅಂದಾಜು ಇಲ್ಲ;  ಕೇಂದ್ರ ಸರ್ಕಾರ

UNI Kannada

Published

on

 

ನವದೆಹಲಿ, ಡಿ 15(ಯುಎನ್‌ ಐ) – ವಿದೇಶಿ ಬ್ಯಾಂಕ್‌ ಖಾತೆಗಳಲ್ಲಿ ಕಾಳಧನ ಎಷ್ಟು ಪ್ರಮಾಣದಲ್ಲಿದೆ ಎಂಬ ಅಂಶದ ಬಗ್ಗೆ ಕಳೆದ ಐದು ವರ್ಷಗಳಲ್ಲಿ ಯಾವುದೇ ಅಧಿಕೃತ ಅಂದಾಜು ಇಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್‌ ಚೌದರಿ ರಾಜ್ಯ ಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಉತ್ತರಿಸಿದ್ದಾರೆ. ಆದರೆ, 2015ರಲ್ಲಿ ಮೂರು ತಿಂ ಗಳ ಒನ್‌ – ಟೈಮ್‌ ಸೆಟಿಲ್‌ಮೆಂಟ್‌ ವಿಂಡೊ ದಡಿ ರೂ 2,476 ಕೋಟಿ ರೂ ತೆರಿಗೆ, ದಂಡವನ್ನಾಗಿ ವಸೂಲಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಪ್ಪುಹಣ (ಅಘೋಷಿತ ವಿದೇಶಿ ಆದಾಯ-ಆಸ್ತಿಗಳು) ತೆರಿಗೆ ಕಾಯಿದೆ, 2015 ರ ಅಡಿಯಲ್ಲಿ ಸೆಪ್ಟಂಬರ್‌ 30, 2015ರೊಂದಿಗೆ ಮುಗಿದ ಮೂರು ತಿಂಗಳ ಒನ್‌ ಟೈಮ್‌ ವಿಂಡೊದಡಿ ರೂ. 4,164 ಕೋಟಿ ಮೌಲ್ಯದ ಬಹಿರಂಗಪಡಿಸದ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಹಿವಾಟುಗಳ ಸಂಖ್ಯೆ 648 ಎಂದು ಉತ್ತರದಲ್ಲಿ ಸಚಿವರು ವಿವರಿಸಿದ್ದಾರೆ.

 

Share