Connect with us


      
ಸಿನೆಮಾ

ವಿದೇಶದಲ್ಲೂ ಸಹಕರಿಸದ ಶಾರುಖ್ ಖಾನ್ ಫಾಲೋವರ್

Published

on

ನವದೆಹಲಿ,ಜನವರಿ.03(ಯು.ಎನ್.ಐ) ಭಾರತದ ಖ್ಯಾತ ನಟ,ಬಾಲಿವುಡ್‌ನ ಕಿಂಗ್ ಖಾನ್ ಬಾದಷಾಹ್ ಶಾರುಖ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ.ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಬಹುತೇಕ ಅವರ ಅಭಿಮಾನಿಗಳನ್ನು ಖಂಡಿತವಾಗಿ ಕಾಣಬಹುದು. ಆದರೆ ಅವರ ಫ್ಯಾನ್ ಫಾಲೋಯಿಂಗ್ ಕ್ವಾಲಿಟಿ ಹೇಗಿದೆಯೆಂದರೆ ಅನೇಕರ ಕೆಲಸಗಳು ವಿದೇಶದಲ್ಲೂ ಬಹಳ ಸುಲಭವಾಗಿ ನಡೆಯುತ್ತದೆ. ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಒಂದು ಟ್ವೀಟ್ ಮುಖ್ಯಾಂಶ ಹೀಗೊಂದು ಸದ್ದು ಮಾಡುತ್ತಿದೆ. ಇಂತಹದೊಂದು ಕಾರಣ ಈ ಟ್ವೀಟ್ ಹಿಂದೆ ಅಡಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಟ್ವೀಟ್‌ನಲ್ಲಿ, ಶಾರುಖ್ ಅಭಿಮಾನಿಯೊಬ್ಬರು ಹಿಂಜರಿಕೆಯಿಲ್ಲದೆ ವಿದೇಶದಲ್ಲಿ ಹೇಗೆ ಸಹಾಯ ಮಾಡಿದರು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವವರು ಅಶ್ವಿನಿ ದೇಶಪಾಂಡೆ, ಅವರ ಟ್ವಿಟರ್ ಪ್ರೊಫೈಲ್ ಪ್ರಕಾರ ಅಶ್ವಿನಿ ಅಶೋಕ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ.

ಈಜಿಪ್ಟ್‌ನಲ್ಲಿ ಟ್ರಾವೆಲ್ ಏಜೆಂಟ್ ಹಣವನ್ನು ವರ್ಗಾಯಿಸಬೇಕಾಗಿತ್ತು. ಆದರೆ ಹಣ ವರ್ಗಾವಣೆಯಲ್ಲಿ ಸಮಸ್ಯೆ ಉಂಟಾಗಿತ್ತು.ಆದರೆ ಈ ವೇಳೆ ಟ್ರಾವೆಲ್ ಏಜೆಂಟ್ ನೀವು ಶಾರುಖ್ ಖಾನ್ ದೇಶದವರು ಎಂದು ಹೇಳಿ ನಾನು ನಿಮ್ಮನ್ನು ನಂಬುತ್ತೇನೆ.ನೀವು ನಂತರ ನನಗೆ ಹಣ ಪಾವತಿಸಿ ಹಣ ನಾನು ಬುಕ್ ಮಾಡುತ್ತೇನೆ” ಎಂದು ಏಜೆಂಟದ ಸಹಾಯ ಮಾಡಿದ್ದನ್ನ ಅಶ್ವಿನಿ ಟ್ವೀಟ್ ಮಾಡಿದ್ದಾರೆ.

ಅಶ್ವಿನಿ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿ,ಇದರಿಂದಾಗಿ ಅವರ ಟ್ವೀಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ. ಟ್ವಿಟರ್‌ನಲ್ಲಿ ಶಾರುಖ್ ಹೆಸರಿನ ಅನೇಕ ಅಭಿಮಾನಿ ಪುಟಗಳು ಈ ಟ್ವೀಟ್ ಅನ್ನು ಹಂಚಿಕೊಂಡಿವೆ. ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು ಶಾರುಖ್ ಖಾನ್ ವಾಸ್ತವವಾಗಿ ರಾಜ ಎಂದಿದ್ದಾರೆ.ಅಶ್ವಿನಿ ಅವರ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

ಸಿನೆಮಾ

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

Published

on

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌ ಅವರ ಅಲಾ ವೈಕುಂಠಪುರಮುಲು ಸಿನಿಮಾ ಬಾಲಿವುಡ್ ಅಂಗಳಕ್ಕೆ ಕಾಲಿಡಲು ಸಜ್ಜಾಗಿದೆ.

ಹೌದು ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಅಲಾ ವೈಕುಂಠಪುರಮುಲು 2020ರಲ್ಲಿ ಟಾಲಿವುಡ್ ನಲ್ಲಿ ಬಹಳ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಹಿಂದಿ ಭಾಷೆಗೆ ಡಬ್ ಆಗಿದ್ದು, ಜನೆವರಿ ೨೬ರಂದು ಹಿಂದಿಯಲ್ಲಿ ಎಲ್ಲಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಪ್ರಸ್ತುತ ನೆಟ್‌ಫ್ಲಿಕ್ಸಿನಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಚಿತ್ರವು 2020 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ. ಅಲಾ ವೈಕುಂಠಪುರಮುಲೂ ಒಂದು ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾ ಆಗಿದ್ದು, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಿದ್ದಾರೆ.

ಪುಷ್ಪ ಸಿನಿಮಾವು ಹಿಟ್ ಆದ ನಂತರ, ತಯಾರಕರು ಅಲಾ ವೈಕುಂಠಪುರಮುಲುವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಟ್ವಿಟರ್ ‌ನಲ್ಲಿ ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಅಲಾ ವೈಕುಂಠಪುರಮುಲೂ ಸಿನಿಮಾದಲ್ಲಿ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಮತ್ತು ಸಮುದ್ರಕನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದಲ್ಲಿ ಟಬು, ಜಯರಾಮ್, ಸುಶಾಂತ್, ನಿವೇತಾ ಪೇತುರಾಜ್, ನವದೀಪ್ ಮತ್ತು ರಾಹುಲ್ ರಾಮಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ.

Continue Reading

ಸಿನೆಮಾ

ಖಾಸಗಿ ಕಂಪೆನಿಯ ಮೇಲೆ 100 ಕೋಟಿ ಹೂಡಿಕೆ ಮಾಡಲಿರುವ ನಯನತಾರ

Published

on

ಚೆನ್ನೈ : ಜನೆವರಿ 16 (ಯು.ಎನ್.ಐ.) ಸ್ಟಾರ್ ಹೀರೋಯಿನ್ ನಯನತಾರಾ ಸಿನಿಮಾಗಳಲ್ಲಿ ಬಂಡವಾಳ ಹೂಡುತ್ತಲೇ ಬೇರೆ ವ್ಯವಹಾರಗಳಲ್ಲೂ ಹಣ ತೊಡಗಿಸುತ್ತಿದ್ದಾರೆ. ಗೆಳೆಯ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಇತ್ತೀಚೆಗೆ ಮತ್ತೊಂದು ಉದ್ಯಮವನ್ನು ಪ್ರಾರಂಭಿಸಲು ಜೊತೆಯಾಗಿದ್ದಾರೆ. ದುಬೈನಲ್ಲಿ ತೈಲ ಕಂಪನಿಯಲ್ಲಿ ಹೂಡಿಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ.

ಇದಲ್ಲದೆ, ನಯನತಾರಾ ಮತ್ತು ವಿಘ್ನೇಶ್ ಅವರು ತೈಲ ಕಂಪನಿಯಲ್ಲಿ ಜಂಟಿಯಾಗಿ 100 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅದಕ್ಕಾಗಿಯೇ ಕಳೆದ ತಿಂಗಳು ನಯನತಾರ ತನ್ನ ಭಾವಿ ಪತಿ ವಿಘ್ನೇಶ್ ಜೊತೆ ದುಬೈಗೆ ಪ್ರವಾಸಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಆದರೆ, ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಮತ್ತೊಂದೆಡೆ ಅವರು ನಿರ್ಮಾಣ ಸಂಸ್ಥೆ ರೌಡಿ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

Continue Reading

ಸಿನೆಮಾ

ಸುಕುಮಾರ್‌ಗೆ ಬಾಲಿವುಡ್ ಸ್ಟಾರ್‌ನಿಂದ ಬಂಪರ್ ಆಫರ್

Published

on

ಹೈದರಬಾದ್ : ಜನೆವರಿ 15 (ಯು.ಎನ್.ಐ.) ಬಾಲಿವುಡ್ ಇಂಡಸ್ಟ್ರಿಯಲ್ಲಿ ತೆಲುಗು ನಿರ್ದೇಶಕರ ಹವಾ ಜೋರಾಗಿದೆ. ನಿರ್ದೇಶಕ ರಾಜಮೌಳಿ ಸೃಷ್ಟಿಸಿದ ಪ್ಯಾನ್ ಇಂಡಿಯಾ ಇಂಡಸ್ರ್ಟಿಯನ್ನ ಈಗ ಎಲ್ಲರೂ ಬಹಳ ಕ್ರಮಬದ್ಧವಾಗಿ ಬಳಸಿಕೊಳ್ಳುತ್ತಿದ್ದಾರೆ. ಪುಷ್ಪ ಸಿನಿಮಾದ ಮೂಲಕ ಸುಕುಮಾರ್ ಕಂಪ್ಲೀಟ್ ಆ್ಯಕ್ಷನ್ ಸಿನಿಮಾ ಮಾಡಿದರೆ ಹೇಗಿರುತ್ತೆ ಎಂಬ ಸ್ಪಷ್ಟತೆ ಎಲ್ಲರಿಗೂ ಈಗಾಗಲೆ ಸಿಕ್ಕಿದೆ. ಈ ಸಿನಿಮಾ ನೋಡಿದ ಬಳಿಕ ಬಾಲಿವುಡ್ ನಾಯಕನಟ ಸುಕುಮಾರ್ ಗೂ ಕರೆ ಮಾಡಿ ಆಫರ್ ನೀಡಿದ್ದಾರೆ.

ಪುಷ್ಪ ಸಿನಿಮಾ ನೋಡಿದ ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಕೂಡ ಸುಕುಮಾರ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಇದೇ ವಿಚಾರವನ್ನ ಇತ್ತೀಚೆಗಷ್ಟೇ ಸುಕುಮಾರ್ ಬಹಿರಂಗವಾಗಿ ಹೇಳಿದ್ದರು. ಸುಕುಮಾರ್ ಗೆ ಅಕ್ಷಯ್ ಕುಮಾರ್ ಫೋನ್ ಮಾಡಿ ಚಿತ್ರ ಅದ್ಭುತವಾಗಿದೆ ಎಂದಿದ್ದರು ಮತ್ತು ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದು ಹೇಳಿದ್ದರು ಎಂದು ನಿರ್ದೇಶಕ ಸುಕುಮಾರ್ ತಿಳಿಸಿದ್ದಾರೆ.

ಆರ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪರಿಚಿತರಾದ ಸುಕುಮಾರ್, ಸಿನಿಮಾರಂಗಕ್ಕೆ ಬರುವುದಕ್ಕೂ ಮುಂಚೆ ಲೆಕ್ಕದ ಮಾಸ್ಟರ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು. ಅವರು ಮೊದಲು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗುವ ಅವಕಾಶಕ್ಕಾಗಿ ಅನೇಕ ನಿರ್ದೇಶಕರ ಸುತ್ತ ಸುತ್ತಿದ್ದರು. ಆದರೆ ಯಾರು ಅವಕಾಶ ನೀಡಲೇ ಇಲ್ಲ. ಅಂತಿಮವಾಗಿ ದಿಲ್ ರಾಜು ಬ್ಯಾನರ್ ಅಡಿ ಸುಕುಮಾರ್ ಒಬ್ಬ ಒಳ್ಳೆಯ ನಿರ್ದೇಶಕ ಎಂಬ ವಿಶಿಷ್ಟ ಮನ್ನಣೆಯನ್ನು ಪಡೆದುಕೊಂಡರು.

Continue Reading
Advertisement
ದೇಶ2 mins ago

ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ಸಂಕೇತ: ರಾಹುಲ್ ಗಾಂಧಿ

ನವದೆಹಲಿ: ಜನೆವರಿ 17 (ಯು.ಎನ್.ಐ.) ದಲಿತ ನಾಯಕ ರೋಹಿತ್ ಮೇಮುಲ ಪ್ರತಿರೋಧದ ನಾಯಕ ಮತ್ತು ಸಂಕೇತ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ವೇಮುಲಾ...

ಕರ್ನಾಟಕ30 mins ago

ಬೆಂಗಳೂರಲ್ಲಿ ಆತಂಕ ಹೆಚ್ಚಿಸಿದ ಒಮೈಕ್ರಾನ್!

ಬೆಂಗಳೂರು: ಜನೆವರಿ 17 (ಯು.ಎನ್.ಐ) ರಾಜಧಾನಿ ಬೆಂಗಳೂರಲ್ಲಿ ಒಂದೇ ದಿನ ಬರೋಬ್ಬರಿ 287 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಸರ್ಕಾರ ತೀವ್ರ ನಿಗಾದ ಮಧ್ಯೆಯೇ ಒಮೈಕ್ರಾನ್ ಪ್ರಕರಣಗಳು...

ದೇಶ43 mins ago

ಪಂಜಾಬ್ ಚುನಾವಣಾ ದಿನಾಂಕ ಮುಂದೂಡಿಕೆ

ಚಂಡೀಗಢ: ಜನೆವರಿ 17 (ಯು.ಎನ್.ಐ.) ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ. ಗುರು ರವಿದಾಸ್ ಜಯಂತಿ ಆಚರಣೆಗೆ ಅನುಕೂಲ...

ದೇಶ45 mins ago

ದೇಶವನ್ನು ಕೊರೋನಾ ಮುಕ್ತಗೊಳಿಸಲು ಪಣ ತೊಡೋಣ; ಕೇಜ್ರಿವಾಲ್

ನವದೆಹಲಿ: ಜನೆವರಿ 17 (ಯು.ಎನ್.ಐ.) ಸಾಂಕ್ರಾಮಿಕ ರೋಗವಾದ ಕೋವಿಡ್ -೧೯ ಪರಿಸ್ಥಿತಿಯನ್ನು ಆಪಾದನೆ ಮಾಡುತ್ತಾ ಕುಳಿತುಕೊಂಡರೆ ಯಾವುದೇ ಪ್ರಯೋಜನವಿಲ್ಲ. ಇಡೀ ದೇಶದಿಂದ ತೊಡೆದುಹಾಕು ಪಣ ತೊಡಬೇಕು ಎಂದು...

ಸಿನೆಮಾ1 hour ago

ಹಿಂದಿಯಲ್ಲಿ ತೆರೆ ಕಾಣುತ್ತಿದೆ ಅಲ್ಲು ಅರ್ಜುನ್‌ ಅಭಿನಯದ ‘ಅಲಾ ವೈಕುಂಠಪುರಮುಲು’

ಹೈದರಾಬಾದ್: ಜನೆವರಿ 17 (ಯು.ಎನ್.ಐ.) ಇದೀಗ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ದಿ ರೈಸ್ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಮತ್ತೊಂದು ಸಂತೋಷದ ವಿಚಾರವೆಂದರೆ ಅಲ್ಲು ಅರ್ಜುನ್‌...

ದೇಶ1 hour ago

ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ಖುಂಟಿ: ಜನೆವರಿ 17 (ಯು.ಎನ್.ಐ.) ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು...

ದೇಶ1 hour ago

ಪದ್ಮಶ್ರೀ ಪುರಸ್ಕೃತೆ, ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ನಿಧನ: ಮೋದಿ ಸಂತಾಪ

ರಾಯಗಡ: ಜನೆವರಿ ೧೭ (ಯು.ಎನ್.ಐ.) ಪದ್ಮಶ್ರೀ ಪುರಸ್ಕೃತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಾಂತಿ ದೇವಿ ಭಾನುವಾರ ರಾತ್ರಿ ಒಡಿಶಾದ ರಾಯಗಡ ಜಿಲ್ಲೆಯ ಗುಣಪುರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ....

ಕರ್ನಾಟಕ2 hours ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು2 hours ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ2 hours ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ಟ್ರೆಂಡಿಂಗ್

Share