Published
6 months agoon
By
UNI Kannadaನವದೆಹಲಿ: ಜನೆವರಿ 07 (ಯು.ಎನ್.ಐ.) ಒಮಿಕ್ರಾನ್ ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬರುವ ಪ್ರಯಾಣಿಕರು ಇನ್ನು ಮುಂದೆ ಒಂದು ವಾರದವರೆಗೆ ಹೋಮ್ ಕ್ವಾರಂಟೈನ್ನಲ್ಲಿ ಇರಬೇಕು ಎಂದು ಕೇಂದ್ರ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ. ಇದರ ಭಾಗವಾಗಿ ಹೆಚ್ಚಿನ ಅಪಾಯವಿರುವ ದೇಶಗಳಿಂದ ಭಾರತಕ್ಕೆ ಬರುವವರು 7 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಕಡ್ಡಾಯವಾಗಿ ಉಳಿಯಬೇಕು. ಎಂಟನೇ ದಿನ ಕರೋನಾ ಪರೀಕ್ಷೆಗಳಿಗೆ ಒಳಗಾಗಲು ಸ್ಪಷ್ಟಪಡಿಸಿತು. ಹೊಸ ಮಾರ್ಗಸೂಚಿಗಳು ಜನವರಿ 11 ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಕೇಂದ್ರವು ವಿದೇಶಿ ಪ್ರಯಾಣಿಕರಿಗೆ ಇತ್ತೀಚಿನ ಮಾರ್ಗಸೂಚಿಗಳನ್ನು ಹೊಂದಿದೆ.
– ವಿದೇಶದಿಂದ ಬರುವ ಪ್ರಯಾಣಿಕರು ಏರ್ ಕನ್ವೀನಿಯನ್ಸ್ ಪೋರ್ಟಲ್ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಬೇಕು.
– ಸ್ವಯಂ ಘೋಷಣೆ ನಮೂನೆಯಲ್ಲಿ ಸಂಪೂರ್ಣ ಮಾಹಿತಿ ನೀಡಿದವರಿಗೆ ಮಾತ್ರ ವಿಮಾನ ಹತ್ತಲು ಅವಕಾಶ ನೀಡಬೇಕು.
– ಪ್ರಯಾಣಿಕರು ನಿರ್ಗಮಿಸುವ ಮೊದಲು RT-PCR ಪರೀಕ್ಷೆಗಳಿಗೆ ಒಳಗಾಗಬೇಕು (72 ಗಂಟೆಗಳ ಮೀರಬಾರದು). ನೆಗೆಟೀವ್ ಪ್ರಮಾಣಪತ್ರವನ್ನ ಅಪ್ಲೋಡ್ ಮಾಡಬೇಕು.
– ‘ಕೊರೋನ ಹೆಚ್ಚಿರುವ’ ದೇಶಗಳಿಂದ ಬರುವವರಿಗೆ ಭಾರತಕ್ಕೆ ಆಗಮಿಸಿದ ನಂತರ ಕರೋನಾ ಪರೀಕ್ಷೆಗಳು ಇರುತ್ತವೆ ಎಂದು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ತಿಳಿಸಬೇಕು.
-ಪ್ರಯಾಣಿಕರು ಈ ಪರೀಕ್ಷೆಗಳಿಗೆ ಏರ್ ಫೆಸಿಲಿಟಿ ಪೋರ್ಟಲ್ನಲ್ಲಿ ಮುಂಚಿತವಾಗಿ ಬುಕ್ ಮಾಡಬೇಕಾಗುತ್ತದೆ.
– ‘ಹೈ ರಿಸ್ಕ್’ ದೇಶಗಳಿಂದ ಬರುವ ಪ್ರಯಾಣಿಕರು ವಿಮಾನ ನಿಲ್ದಾಣ ಪರೀಕ್ಷೆಗಳಲ್ಲಿ ನೆಗೆಟೀವ್ ಬಂದರೂ ಸಹ 7 ದಿನಗಳ ಕಾಲ ಹೋಮ್ ಕ್ವಾರಂಟೈನ್ನಲ್ಲಿರಬೇಕು. 8 ನೇ ದಿನ RT-PCR ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ನಂತರ ವರದಿಯನ್ನು ಏರ್ ಫೆಸಿಲಿಟಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು.
-ಪಾಸಿಡೀವ್ ಬಂದ ವ್ಯಕ್ತಿಗಳು ಪ್ರೋಟೋಕಾಲ್ಗಳ ಪ್ರಕಾರ ಪ್ರತ್ಯೇಕ ಐಸೋಲೇಷನ್ ಕೇಂದ್ರಗಳಲ್ಲಿರಬೇಕು. ಅವರ ಸ್ಯಾಂಪಲ್ ಮಾದರಿಗಳನ್ನು ಜೀನೋಮ್ ಕೇಂದ್ರಕ್ಕೆ ಕಳುಹಿಸಬೇಕು.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ