Published
5 months agoon
By
UNI Kannadaನವದೆಹಲಿ,ಡಿ.16(ಯು.ಎನ್.ಐ) ಬಹುಕಾಲ ಚರ್ಚೆಯ ವಿಷಯವಾಗಿ ಸುದ್ದಿಕೇಂದ್ರದಲ್ಲಿದ್ದ ಶೀನಾ ಬೋರಾ ಹತ್ಯೆ ಪ್ರಕಟಣಕ್ಕೊಂದು ಟ್ವಿಸ್ಟ್ ಸಿಕ್ಕಿದೆ. ಶೀನಾ ಬೋರಾ ಹತ್ಯೆಯ ಪ್ರಮುಖ ಆರೋಪಿ
ಇಂದ್ರಾಣಿ ಮುಖರ್ಜಿ ಅವರು ತನ್ನ ಮಗಳು ಶೀನಾ ಬೋರಾ ಇನ್ನೂ ಜೀವಂತವಾಗಿದ್ದಾಗಿದ್ದಾಳೆ,ಕಾಶ್ಮೀರದಲ್ಲಿದ್ದಾಳೆ ಎಂದು ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಹೀಗೆ ಸಿಬಿಐಗೆ ಬರೆದ ಪತ್ರದಲ್ಲಿ ಇಂದ್ರಾಣಿ ಮುಖರ್ಜಿ, ಇತ್ತೀಚೆಗೆ ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಜೈಲಿನಲ್ಲಿ ಭೇಟಿಯಾಗಿರುವುದಾಗಿ ಮಹಿಳೆಯೊಬ್ಬಳು ಹೇಳಿದ್ದಾಳೆಂದು ಉಲ್ಲೇಖಿಸಿ ಕಾಶ್ಮೀರದಲ್ಲಿ ಶೀನಾ ಬೋರಾಳನ್ನು ಸಿಬಿಐ ಹುಡುಕಬೇಕು ಎಂದು ಇಂದ್ರಾಣಿ ಹೇಳಿದ್ದಾರೆ.
2012ರಲ್ಲಿ ಶೀನಾ ಬೋರಾ ಕೊಲೆಯಾಗಿದ್ದು 2015 ರಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿಯನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಇವರನ್ನು 2015 ರಿಂದ ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿದೆ. ಕಳೆದ ತಿಂಗಳು ಇಂದ್ರಾಣಿ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಅವರೀಗ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮುಂಡ್ಕಾ ಬೆಂಕಿ ದುರಂತ; ೨೭ ಸಾವು, ೧೯ ಮಂದಿ ಕಾಣೆ
ಮಧ್ಯ, ಪೂರ್ವ ಯುರೋಪ್ನಲ್ಲಿ ಮಾನವ ಕಳ್ಳಸಾಗಣೆ ಗ್ಯಾಂಗ್ ಪತ್ತೆ
ಕಸ್ಟಡಿ ಸಾವು: 6 ಪೊಲೀಸರ ಬಂಧನ
ತೆಲಂಗಾಣದಲ್ಲಿ ಮರ್ಯಾದೆಗೇಡು ಹತ್ಯೆ ಕೇಸ್; ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದ ಓವೈಸಿ
ಆನೆಬೇಟೆ ಪ್ರಕರಣಗಳು; ತನಿಖಾ ತಂಡ ರಚಿಸಿದ ಮದ್ರಾಸ್ ಹೈಕೋರ್ಟ್
‘ಘೋಸ್ಟ್ ಗನ್’ಗಳ ನಿಯಂತ್ರಣಕ್ಕೆ ನೂತನ ಎಟಿಎಫ್ ಮುಖ್ಯಸ್ಥರ ನೇಮಕ; ಬಿಡೆನ್ ಕ್ರಮ