Published
5 months agoon
By
UNI Kannada
ಬೆಂಗಳೂರು, ಡಿ ೧೨( ಯುಎನ್ ಐ) ಸರ್ಕಾರಿ ಆಸ್ತಿಗಳ ನಗದೀಕರಣ ಹಾಗೂ ಬಂಡವಾಳ ಹಿಂತೆಗೆತಕ್ಕೆ ಮುಂದಾಗಿರುವ ಕರ್ನಾಟಕ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟಿಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್ ಡಿ ಪಿ ಐ ) ಹೇಳಿದೆ.
ಸರ್ಕಾರಿ ಆಸ್ತಿಗಳ ನಗದೀಕರಣ ಹಾಗೂ ಬಂಡವಾಳ ಹಿಂತೆಗೆತ ಎಂಬುದು ದೇಶವನ್ನು ಬಂಡವಾಳ ಶಾಹಿಗಳ ಕೈಗೊಪ್ಪಿಸುವ ಒಂದು ಬಹು ದೊಡ್ಡ ಹುನ್ನಾರವಾಗಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ತಮ್ಮ ಕೃಪಾ ಭಿಕ್ಷೆ ತೋರಿರುವ, ತಮ್ಮ ಬಂಡವಾಳದ ಸಹಾಯz ಮೂಲಕವೇ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವ ಬಂಡವಾಳಿಗರ ಋಣ ಸಂದಾಯದ ಮುಂದುವರೆದ ಭಾಗವೇ ಈ ದೇಶ ವಿರೋಧಿಯಾದ ’ಸರ್ಕಾರಿ ಆಸ್ತಿಗಳ ನಗದೀಕರಣ ಮತ್ತು ಬಂಡವಾಳ ಹಿಂತೆಗೆತ’ ಎಂಬ ಯೋಜನೆ ಎಂದು ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಬಂದರು, ರೈಲ್ವೇ, ರಸ್ತೆ ಮತ್ತು ವಿಮಾನ ನಿಲ್ದಾಣಗಳನ್ನು ಇದೇ ರೀತಿಯಾದ ಜನವಿರೋಧಿ ಯೋಜನೆಗಳ ಮೂಲಕ ತಮ್ಮ ಪಕ್ಷದ ಪಾಲಕರ ಕೈಗಿಟ್ಟು ಕೃತಾರ್ಥವಾಗಿದೆ. ದೇಶದ ಹೆಮ್ಮೆಯ ಹೆಗ್ಗುರುತಾದ ಬ್ಯಾಂಕುಗಳು, ಸರ್ಕಾರಿ ಸ್ವಾಮ್ಯದ ಸಣ್ಣ ಸಣ್ಣ ಕೈಗಾರಿಕೆಗಳಿಂದ ಹಿಡಿದು, ಬೃಹತ್ ಸರ್ಕಾರಿ ಸ್ವತ್ತುಗಳನ್ನು ಮಾರುತ್ತಲೇ ಇದೆ. ದೇಶವನ್ನು ಅಕ್ಷರಶಃ ಖಾಸಗಿಯವರ ಕೈಗಿಟ್ಟು ಜನರನ್ನು ಬೇಡುವ ಸ್ಥಿತಿಗೆ ತಳ್ಳುತ್ತಿದೆ ಎಂದು ದೂರಿದೆ.
ಸರ್ಕಾರಿ ಆಸ್ತಿಗಳ ನಗದೀಕರಣ ಮತ್ತು ಬಂಡವಾಳ ಹಿಂತೆಗೆತ ಯೋಜನೆಯು ಸರ್ಕಾರಿ ಉದ್ಯೋಗ ಸೃಷ್ಟಿಯ ಮೇಲೆ ನೇರ ಹೊಡೆತವನ್ನು ಕೊಡುತ್ತದೆ. ಅಂಕಿ ಅಂಶಗಳ ಪ್ರಕಾರ, ಸರ್ಕಾರಿ ಉದ್ಯೋಗ ಸೃಷ್ಟಿಯ ಸೂಚ್ಯಂಕ ಈಗಾಗಲೇ ಮೈನಸ್೬೫ ರಲ್ಲಿ ದಾಖಲಾಗಿದೆ. ಇನ್ನು ಈ ಯೋಜನೆಯೂ ಜಾರಿಯಾಗಿ ಬಿಟ್ಟರೆ ಸರ್ಕಾರಿ ಉದ್ಯೋಗ ಸೃಷ್ಟಿಯ ಸೂಚ್ಯಂಕ ಪಾತಾಳ ಕಂಡರೂ ಆಶ್ಚರ್ಯವಿಲ್ಲ. ಇದರಿಂದಾಗಿ ಬಡವರು, ಶೋಷಿತರು, ಹಿಂದುಳಿದ ವರ್ಗಗಳ ಪ್ರತಿಭಾವಂತ, ಬಂಡವಾಳ ರಹಿತರ ಸರ್ಕಾರಿ ಉದ್ಯೋಗದ ಕನಸಿನ ಮೇಲೆ ನೇರವಾದ ಗದಾ ಪ್ರಹಾರವೇ ಆಗುತ್ತದೆ. ದೇಶದ ಯುವ ಜನರ ಉದ್ಯೋಗದ ಕನಸುಗಳು ಕಮರಿ ಬಾಳು ಬರಡಾಗುತ್ತವೆ. ಕೊನೆಗೆ ವಿದಿ ಇಲ್ಲದೆ, ಬಂಡವಾಳ ಶಾಹಿಗಳ ಜೀತದಾಳುಗಳಾಗಬೇಕಾಗುವ ದುರಂತಕ್ಕೆ ಯುವ ಜನರ ಬದುಕು ದೂಡಲ್ಪಡುತ್ತದೆ ಎಂದು ಎಸ್ ಡಿ ಪಿಐ ಹೇಳಿಕೆಯಲ್ಲಿ ತಿಳಿಸಿದೆ.
ವಿಧಾನಪರಿಷತ್ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆ
ಬಬುಲ್ ಸುಪ್ರಿಯೋ ಬಳಿಕ ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್! ಟಿಎಂಸಿ ಸೇರಿದ ಬಿಜೆಪಿ ಸಂಸದ
ಕೇಂದ್ರವು ರೈತರನ್ನು ಕ್ರೀಡಾಂಗಣದಲ್ಲಿ ಜೈಲಿನಲ್ಲಿಡಲು ಬಯಸಿತ್ತು: ಸಿಎಂ ಕೇಜ್ರಿವಾಲ್
ರೈತರು ಸರ್ಕಾರಗಳನ್ನು ಉರುಳಿಸಬಹುದು: ಸಿಎಂ ಕೆಸಿಆರ್
ದುರಹಂಕಾರವಲ್ಲ… ಅದು ವಿಶ್ವಾಸ: ರಾಹುಲ್ ಗಾಂಧಿಗೆ ಸಚಿವ ಜೈಶಂಕರ್ ತಿರುಗೇಟು
ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ರಾಜೀವ್ ಗಾಂಧಿ