Published
6 months agoon
By
Vanitha Jainಜೈಪುರ: ಜನವರಿ 04(ಯು.ಎನ್.ಐ) ಯುವತಿಯೊಬ್ಬಳು ಅಪ್ಪನ ಹೆಸರಿನ ಮೊದಲ ಅಕ್ಷರವನ್ನು ತನ್ನ ದುಪ್ಪಟ್ಟದ ಮೇಲೆ ಕಸೂತಿ ಮೂಲಕ ಹಾಕಿಸಿಕೊಂಡು ಮದುವೆಯಲ್ಲಿ ಅಪ್ಪನಿಲ್ಲದ ಕೊರಗನ್ನು ನೀಗಿಸಿಕೊಂಡಿದ್ದಾಳೆ.
ಯುವತಿ ಆ ದುಪ್ಪಟ್ಟವನ್ನು ಮದುವೆಯಲ್ಲಿ ಪಾಲ್ಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ವರ್ಷ ಕ್ಯಾನ್ಸರ್ನಿಂದಾಗಿ ಕಳೆದುಕೊಂಡ ತನ್ನ ತಂದೆಗೆ ಶ್ರದ್ಧಾಂಜಲಿ ಸಲ್ಲಿಸಲು ವಧು ಅವಳ ಮುಸುಕಿನ ದುಪ್ಪಟದ ಮೇಲೆ ಮೇಲೆ ಕಸೂತಿ ಮಾಡಿಕೊಂಡಿದ್ದು ನೆಟ್ಟಿಗರನ್ನು ಭಾವುಕಗೊಳಿಸಿದೆ.
ಇತ್ತೀಚೆಗಷ್ಟೇ ರಾಜಸ್ಥಾನದ ಖಿಮ್ಸರ್ ಕೋಟೆಯಲ್ಲಿ ಸುವಾನ್ಯಾ ಅವರು ಅಮನ್ ಕಲ್ರಾ ಅವರನ್ನು ವಿವಾಹವಾಗಿದ್ದಾರೆ. ಆಕೆಯ ಮೇ 2021ರಲ್ಲಿ ನಿಧನರಾಗಿದ್ದರು. ಅವರ ಉಪಸ್ಥಿತಿ ಮದುವೆಯಲ್ಲಿ ಇರಬೇಕೆಂದು ಆಶಿಸಿದ ವಧು ಈ ರೀತಿ ಆಲೋಚಿಸಿದಳು.
ಸುವನ್ಯಾ ತನ್ನ ಮದುವೆಗೆ ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಆಕೆಯ ಮದುವೆಯ ನೋಟವು ಸರಳವಾಗಿತ್ತು. ಆದಾಗ್ಯೂ, ಅವಳ ಉಡುಗೆ ವಿಶೇಷ ಕಾರಣಕ್ಕಾಗಿ ಎದ್ದು ಕಾಣುತ್ತದೆ. ಅದುವೇ ತಂದೆಯ ಹೆಸರಿನ ಮೊದಲ ಅಕ್ಷರಗಳು. “ನನ್ನ ಹೃದಯದಿಂದ ನಿನ್ನವರೆಗೆ,” ಅವಳ ಮುಸುಕಿನಲ್ಲಿ ಕಸೂತಿ ಮಾಡಲಾಗಿತ್ತು. ಲೆಹೆಂಗಾವನ್ನು ಸುನೈನಾ ಖೇರಾ ವಿನ್ಯಾಸಗೊಳಿಸಿದ್ದಾರೆ, ಅವರು ವಧುವಿನ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ