Connect with us


      
ದೇಶ

ಹರಿಯಾಣ: ಗಣಿಗಾರಿಕೆಯಿಂದ ಪರ್ವತ ಬಿರುಕು; ಸಾವುನೋವು

UNI Kannada

Published

on

ಹರಿಯಾಣ,ಜ.1(ಯು.ಎನ್.ಐ) ಹೊಸ ವರ್ಷದ ಮುನ್ನಾದಿನದಂದು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಗಣಿಗಾರೊಕೆಯಿಂದ ದೊಡ್ಡ ಅಪಘಾತ ಸಂಭವಿಸಿದೆ.‌ಇಲ್ಲಿ ಪರ್ವತ ಬಿರುಕು ಬಿಟ್ಟಿದ್ದರಿಂದ 8ರಿಂದ 10 ವಾಹನಗಳು ಹೂತು ಹೋಗಿವೆ. ಸುಮಾರು 15 ರಿಂದ 20 ಜನರು ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ.  ಮೂವರನ್ನು ಹೊರ ತೆಗೆಯಲಾಗಿದೆ.

ಮಾಹಿತಿಯ ಪ್ರಕಾರ, ದಾದಮ್ ಗಣಿಗಾರಿಕೆ ಪ್ರದೇಶದಲ್ಲಿ ಪರ್ವತದ ಹೆಚ್ಚಿನ ಭಾಗವು ಬಿರುಕು ಬಿಟ್ಟಿದ್ದರಿಂದ ಈ ಅಪಘಾತ ಸಂಭವಿಸಿದೆ. ಆಡಳಿತ ಸಿಬ್ಬಂದಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದು,ಈ ಸ್ಥಳದಲ್ಲಿ ಮಾಧ್ಯಮದವರು ಹಾಗೂ ಜನಸಾಮಾನ್ಯರ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಕೃಷಿ ಸಚಿವ ಜೆ.ಪಿ ದಲಾಲ್ ಮತ್ತು ಎಸ್ಪಿ ಅಜಿತ್ ಸಿಂಗ್ ಶೇಖಾವತ್ ಘಟನೆಯ ಬಗ್ಗೆ ಪರಿಶೀಲನೆ ನಡೆಸಿದರು.
ಮಾಹಿತಿ ನೀಡಿದ ಭಿವಾನಿ ಎಸ್ಪಿ ಅಶೋಕ್ ಶೇಖಾವತ್,  ಪರ್ವತದ ಒಂದು ಭಾಗದ ಮಣ್ಣಿನಡಿ ಹೂತು ಹೋಗಿರುವ ವಾಹನಗಳನ್ನು ಹೊರತೆಗೆಯಲು  ನಾಲ್ಕು ಪೊಕ್ಲೇನ್, 4 ಡಂಪರ್ ಮತ್ತು ಇತರ ಯಂತ್ರಗಳನ್ನು ಬಳಸಲಾಗಿದೆ.  ಅವಶೇಷಗಳಡಿಯಲ್ಲಿ ಎಷ್ಟು ಮಂದಿ ಸಮಾಧಿಯಾಗಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದ ಕುರಿತು ಹರಿಯಾಣ ಕೃಷಿ ಸಚಿವ ಜೆಪಿ ದಲಾಲ್, ಈ ಅಪಘಾತದಲ್ಲಿ ಎಷ್ಟು ಜನರು ಸಮಾಧಿಯಾಗಿದ್ದಾರೆಂದು ಸ್ಪಷ್ಟವಾಗಿ ತಿಳಿದಿಲ್ಲ, ಆದರೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲ ಯಂತ್ರೋಪಕರಣಗಳನ್ನು ಬಳಸಿ ಆದಷ್ಟು ಬೇಗ ಜನರನ್ನು ಸ್ಥಳಾಂತರಿಸುವಂತೆ ಆಡಳಿತಕ್ಕೆ ಆದೇಶ ನೀಡಲಾಗಿದೆ ಎಂದಿದ್ದಾರೆ.

ಸದ್ಯಕ್ಕೆ ಪರ್ವತದ ಒಂದುಭಾಗ ಕುಸಿಯಲು ಕಾರಣ ತಿಳಿದುಬಂದಿಲ್ಲ. ಪರ್ವತವು ತನ್ನಷ್ಟಕ್ಕೆ ಕುಸಿದಿದೆಯೇ ಅಥವಾ ಸ್ಫೋಟದಿಂದ ಅಪಘಾತ ಸಂಭವಿಸಿದೆಯೇ ಎಂಬುದರ ಕುರಿತು ಏನೂ ಬಹಿರಂಗವಾಗಿಲ್ಲ. ಗಾಯಾಳುಗಳನ್ನು ಅವಶೇಷಗಳಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ.

ಶುಕ್ರವಾರದಿಂದ ಗಣಿಗಾರಿಕೆ ಕಾಮಗಾರಿ: ತೋಷಮ್ ಪ್ರದೇಶದ ಖಾನಕ್ ಮತ್ತು ದಾಡಮ್‌ನಲ್ಲಿ ಪರ್ವತ ಗಣಿಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತದೆ. 2 ತಿಂಗಳ ಹಿಂದೆ ಗಣಿಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೆ ಗುರುವಾರವೇ ಗಣಿಗಾರಿಕೆ ಪುನರಾರಂಭಿಸಲು ಎನ್‌ಜಿಟಿ ಅನುಮತಿ ನೀಡಿತ್ತು. ಎನ್‌ಜಿಟಿಯಿಂದ ಅನುಮತಿ ಪಡೆದು ಶುಕ್ರವಾರದಿಂದಲೇ ಗಣಿಗಾರಿಕೆ ಆರಂಭಿಸಲಾಗಿತ್ತು. 2 ತಿಂಗಳಿನಿಂದ ಗಣಿಗಾರಿಕೆ ಸ್ಥಗಿತಗೊಂಡಿದ್ದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳ ಕೊರತೆ ಉಂಟಾಗಿದೆ. ಈ ಕೊರತೆ ನೀಗಿಸಲು ಅಲ್ಲಿ ದೊಡ್ಡ ಮಟ್ಟದಲ್ಲಿ ಬ್ಲಾಸ್ಟಿಂಗ್ ಮಾಡಿರುವ ಸಾಧ್ಯತೆಯೂ ಇದೆ.

Share