Connect with us


      




ದೇಶ

ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ನೀಡಲು ಯೋಜನೆ: ಅಮಿತ್‌ ಶಾ

Kumara Raitha

Published

on

ಬೆಂಗಳೂರು:  ನನಗೆ ಇಂದು ಸಹಕಾರ ಸಮ್ಮೇಳನಕ್ಕೆ ಬಂದು ನನ್ನ ಮನೆಗೆ ನಾನು ಬಂದ ಹಾಗೆ ಆಗಿದೆ. ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ಎ ಗ್ರೇಡ್ ಇದೆ. ಕರ್ನಾಟಕ ಸಹಕಾರ ಕ್ಷೇತ್ರ ಐತಿಹಾಸಿಕವಾಗಿದೆ. ಕರ್ನಾಟಕಕ್ಕೆ ಬಂದಾಗಲೆಲ್ಲ ಸಹಕಾರ ಮೂಲ.ಪುರುಷ ಗದಗ ಜಿಲ್ಲೆಯ ಸಿದ್ದನಗೌಡ ಸಂಗನಗೌಡ ಪಾಟೀಲರನ್ನು ನೆನೆಸುತ್ತೇನೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಹೇಳಿದರು.

ಅವರಿಂದು ನಗರದ ಅರಮನೆ ಆವರಣದಲ್ಲಿ ಆಯೋಜಿತವಾಗಿದ್ದ “ಸಹಕಾರ ಸಮ್ಮೇಳನ”ದಲ್ಲಿ ಮಾತನಾಡಿದರು. 1905 ರಲ್ಲಿ ಆರಂಭವಾದ ಈ ಚಳವಳಿ ಅಮೂಲ ರೂಪದಲ್ಲಿ ಬೆಳೆದಿದೆ. ಇಪ್ಕೊ ಕ್ರಿಪ್ಕೊ ಸಹಕಾರ ಕ್ಷೇತ್ರದ ದೊಡ್ಡ ಸಂಸ್ಥೆಗಳು. ನಂದಿನಿಯೂ 17000 ಕೋಟಿ ವ್ಯವಹಾರ ಮಾಡಿ ದೊಡ್ಡ ಸಂಸ್ಥೆಯಾಗಿ ಬೆಳೆಯಲಿದೆ. ಮುಂಬರುವ ದಿನಗಳಲ್ಲಿ ಸಹಕಾರಿ.ಕ್ಷೇತ್ರ.ದೊಡ್ಡ ಮಟ್ಟದಲ್ಲಿ ಬೆಳೆಯಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ವರ್ಷವಾಗಿದ್ದು 100 ವರ್ಷಗಳ ವರೆಗೆ ಅಮೃತ ಘಳಿಗೆ ಎಂದು ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ್ಯೊತ್ಸವಕ್ಕೆ 100 ವರ್ಷ ತುಂಬಿದಾಗ ಕರ್ನಾಟಕದ ಪ್ರತಿಯೊಂದು ಗ್ರಾಮದಲ್ಲಿ ಸಹಕಾರ ಬ್ಯಾಂಕ್ ಇರುವಂತೆ ನೊಡಿಕೊಳ್ಳಲಾಗುವುದು. ಸಹಕಾರ ಕ್ಷೇತ್ರದಲ್ಲಿ ಹಾಲು ಉತ್ಪಾದನೆ ಮೀನು ಸಾಕಾಣಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.

ಸಹಕಾರಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಕಟ್ಟಡ ಉದ್ಘಾಟನೆ ಮಾಡಿದ್ದೇನೆ. ಇದು ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕ ತರಲು ಮಾಡಲಾಗುತ್ತಿದೆ. ಹಾಲು ಉತ್ಪಾದಕರಿಗೆ ಕ್ರೆಡಿಟ್ ಕಾರ್ಡ್ ನೀಡಲು ಯೋಜನೆ ರೂಪಿಸಲಾಗುತ್ತಿದೆ. ದೇಶದಲ್ಲಿ ಹಾಲು ಉತ್ಪಾದಕರಿಗೆ ಪ್ರತ್ಯೇಕ ಬ್ಯಾಂಕ್ ಸ್ಥಾಪನೆ ಮಾಡಲು ಮೋದಿ ಯೋಜನೆ ರೂಪಿಸಿದ್ದಾರೆ. ಇದರಿಂದ ಹಾಲು ಉತ್ಪಾದಕರ ಸಮಗ್ರ ಅಭಿವೃದ್ಧಿ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಹಕಾರಿ ಇಲಾಖೆಯನ್ನು ಕೃಷಿ ಇಲಾಖೆಯಿಂದ ಪ್ರತ್ಯೇಕಗೊಳಿಸುವ ಕೆಲಸ ಮಾಡಿದ್ದು, ದೇಶದ ಮೊದಲ ಕೇಂದ್ರ ಸಹಕಾರ ಸಚಿವನಾಗಿರುವ ಹೆಮ್ಮೆ ನನಗಿದೆ.
ಕೇಂದ್ರ ಹಣಕಾಸು ಸಚಿವರು ಸಹಕಾರ ಇಲಾಖೆಗೆ 900 ಕೋಟಿ ರೂ ನೀಡಿದ್ದಾರೆ. ದೇಶದ 63 ಸಾವಿರ ಪ್ಯಾಕ್ಸ್ ಗಳನ್ನು ಕಂಪ್ಯೂಟರಿಕರಣ ಮಾಡಲು ತೀರ್ಮಾನಿಸಲಾಗಿದ್ದು ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

Share