Connect with us


      
ದೇಶ

ಹೊಸ ವರ್ಷದ ಶುಭಾಶಯ ಕೋರಿದ ರಾಮನಾಥ್ ಕೋವಿಂದ್, ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್

Published

on

ನವದೆಹಲಿ, ಡಿಸೆಂಬರ್ 31(ಯು.ಎನ್.ಐ) 2021 ಇಂದು ಕೊನೆಗೊಳ್ಳುತ್ತಿದೆ. 2022 ಹೊಸ ವರ್ಷ ಪ್ರಾರಂಭವಾಗುತ್ತಿದೆ. ಕಳೆದು ಹೋದದನ್ನು ಮರೆತು ಹೊಸತು ಗುರಿ, ಬದುಕು, ಧ್ಯೇಯ ಉತ್ಸಾಹದೊಂದಿಗೆ ಮುಂದಿನ ಹೆಜ್ಜೆ ಇಡಲು ದೈಹಿಕವಾಗಿ, ಮಾನಸಿಕವಾಗಿ ಅಣಿಯಾಗುತ್ತಿದ್ದಾರೆ.

ಹೊಸ ವರ್ಷದ ಮುನ್ನಾದಿನದಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನ ಮಂತ್ರಿ ನರೇಂದ್ರ ಮೋದಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾರತೀಯ ನಾಗರಿಕರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

“ಹೊಸ ವರ್ಷದ ಹೊಸ ಅರುಣೋದಯವು ನಮ್ಮ ಜೀವನದಲ್ಲಿ ಶಾಂತಿ, ಸಮೃದ್ಧಿ ಮತ್ತು ಭ್ರಾತೃತ್ವದ ಚೈತನ್ಯವನ್ನು ಪುನರುಜ್ಜೀವನಗೊಳಿಸಲಿ. ನಮ್ಮ ಸಮಾಜ ಮತ್ತು ದೇಶ ಪ್ರಗತಿ ಸಾಧಿಸುವ ಪ್ರಯತ್ನಿಸುವ ಬಗ್ಗೆ ಹೊಸ ವರ್ಷದಲ್ಲಿ ಸಂಕಲ್ಪ ಮಾಡೋಣ” ಎಂದು ಹೇಳಿದರು.

“ಹೊಸ ವರ್ಷದ 2022 ರ ಸಂತೋಷದಾಯಕ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ನಮ್ಮ ಎಲ್ಲಾ ದೇಶವಾಸಿಗಳಿಗೆ ಹೊಸವರ್ಷದ ಶುಭಾಶಯಗಳನ್ನು ತಿಳಿಸುತ್ತೇನೆ. ಹೊಸ ವರ್ಷ, 2022, ನಿಮ್ಮ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಉತ್ತಮ ಆರೋಗ್ಯ ಮತ್ತು ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ ಎಂದು ಕೋವಿಂದ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹೊಸ ವರ್ಷದ ಸಂದೇಶದಲ್ಲಿ ಜನರು ಎಚ್ಚರಿಕೆಯಿಂದ ಇರುವಂತೆ ಕೇಳಿಕೊಂಡಿದ್ದಾರೆ. ಸೋಂಕುಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನು ಪರಿಗಣಿಸಿ ದಯವಿಟ್ಟು ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬೇಡಿ. ಮನೆಯಲ್ಲಿಯೇ ಇರಲು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಒತ್ತಾಯಿಸಿದರು. ಜನರು ಮತ್ತು ಸರ್ಕಾರ ಒಟ್ಟಾಗಿ ಹಿಂದಿನಂತೆ ಕೊರೊನಾವನ್ನು ಸೋಲಿಸೋಣ ಎಂದು ಹೇಳುತ್ತಾ ದೇಶದ ಜನರು ಸಂತೋಷದಿಂದ ಇರಲಿ ಎಂದು ಹಾರೈಸಿದರು

ಹೊಸ ವರ್ಷದ ಶುಭಾಶಯಗಳನ್ನು ಕೋರಿದ ಅವರು, “ನಮ್ಮ ದೇಶ ಮತ್ತು ಇಡೀ ಜಗತ್ತು ಆದಷ್ಟು ಬೇಗ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ, ಇಡೀ ದೇಶವು ಅಭಿವೃದ್ಧಿ ಹೊಂದಲಿ, ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ಧಿಯಾಗಲಿ, ಎಲ್ಲರೂ ಆರೋಗ್ಯವಾಗಿರಲಿ ಮತ್ತು ಸಂತೋಷವಾಗಿರಲಿ ಎಂದು ಹೇಳಿದರು.

ಟ್ವಿಟರಿನಲ್ಲಿ ಪಿಎಂ ನರೇಂದ್ರ ಮೋದಿ, ಹೊಸ ವರ್ಷದ ಮೊದಲ ದಿನ, 2022 ಅನ್ನು ದೇಶದ ಅನ್ನದಾತರಿಗೆ ಸಮರ್ಪಿಸಲಾಗುವುದು. ಪಿಎಂ-ಕಿಸಾನ್‍ನ 10ನೇ ಕಂತನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 12ಕ್ಕೆ ಬಿಡುಗಡೆ ಮಾಡಲಾಗುವುದು. ಇದರ ಅಡಿಯಲ್ಲಿ 10 ಕೋಟಿಗೂ ಹೆಚ್ಚು ರೈತ ಕುಟುಂಬಗಳು 20 ಸಾವಿರ ಕೋಟಿ ರೂ.ಗಳ ಮೊತ್ತವನ್ನು ವರ್ಗಾವಣೆ ಮಾಡುವ ಮೂಲಕ ಪ್ರಯೋಜನ ಪಡೆಯುತ್ತವೆ ಎಂದು ಹೇಳಿದರು.

ದೇಶ

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

Published

on

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ ಪತ್ತೆ ಹಚ್ಚಲಾಗುತ್ತಿದೆ. ಆದರೆ ಜಿನೋಮ್ ಸೀಕ್ವೆನ್ಸಿಂಗ್ ವಿಷಯದಲ್ಲಿ ಭಾರತವು ಇನ್ನೂ ಹಿಂದುಳಿದಿದೆ. ಆರ್‌ಟಿಪಿಸಿಆ‌ರ್ ಪರೀಕ್ಷೆ ಮೂಲಕ ಒಮೈಕ್ರಾನ್ ಅನ್ನು ಪತ್ತೆ ಹಚ್ಚಬಹುದಾಗಿದ್ದು, ಜೀನೋಮ್ ಟೆಸ್ಟ್ ಗಿಂತ ಕಡಿಮೆ ವೆಚ್ಚ ಮಾಡಬಹುದಾಗಿದೆ. ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ 5000 ರೂ.ವರೆಗೆ ಖರ್ಚು ತಗಲುತ್ತಿದ್ದರೆ, ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೇವಲ 260 ರೂಪಾಯಿಯಲ್ಲಿ ಒಮೈಕ್ರಾನ್ ಪತ್ತೆ ಮಾಡಬಹುದಾಗಿದೆ.
ಜಿನೋಮ್ ಸೀಕ್ವೆನ್ಸಿಂಗ್ ಎಂದರೇನು?
ಜೀನೋಮ್ ಸೀಕ್ವೆನ್ಸಿಂಗ್ ಅನ್ನೋದು ಮಾನವನ ಸಂಪೂರ್ಣ ಅನುವಂಶಿಕ ಮಾಹಿತಿ ಆಗಿದೆ. ಈ ಪರೀಕ್ಷೆಯಲ್ಲಿ ವ್ಯಕ್ತಿಯ ಆನುವಂಶಿಕ ವೈವಿಧ್ಯತೆ ಹಾಗೂ ಯಾವುದೇ ಹೊಸ ರೋಗ ಅಥವಾ ಹೊಸ ರೂಪಾಂತರದ ಬಗ್ಗೆ ತಿಳಿಕೊಳ್ಳಬಹುದಾಗಿದೆ. ಆದರೆ ಈ ಪರೀಕ್ಷೆಗಳನ್ನು ದೇಶದ ಕೆಲವೇ ರಾಜ್ಯಗಳಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯ ಜೀನೋಮ್ ಅನುಕ್ರಮವನ್ನು ಟೆಸ್ಟ್ ಮಾಡಲು ಸಾಧ್ಯವಿಲ್ಲ. ಈ ದುಬಾರಿ ಪರೀಕ್ಷೆಯನ್ನು ತಗ್ಗಿಸುವ ಸಂಬಂಧ ಕೇಂದ್ರ ಆರೋಗ್ಯ ಸಚಿವಾಲಯವು ಎರಡು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡುವಂತೆ ರಾಜ್ಯಗಳಿಗೆ ಸಲಹೆ ನೀಡಿದೆ. ಈ ರೀತಿಯಿಂದ ರೋಗ ಲಕ್ಷಣ ಕಾಣಿಸಿಕೊಂಡ ವ್ಯಕ್ತಿಯ ದೇಹದಲ್ಲಿ ಎಸ್-ಜೀನ್ ಕಾಣೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪತ್ತೆ  ಹಚ್ಚಬೇಕು. ಏಕೆಂದರೆ ಒಮೈಕ್ರಾನ್‌ ಸೋಂಕಿತರಲ್ಲಿ ಎಸ್-ಜೀನ್ ಕಾಣೆಯಾಗುತ್ತದೆ. ಆದರೆ ಡೆಲ್ಟಾ ರೂಪಾಂತರಿಯಲ್ಲಿ ಎಸ್-ಜೀನ್ ಇದ್ದೆ ಇರುತ್ತದೆ.
ಎಸ್-ಜೀನ್ ಕಾಣೆಯಾಗಿದ್ದರೆ ಒಮೈಕ್ರಾನ್ ಸೋಂಕಿತರಾಗಿದ್ದೀರಿ ಎಂದರ್ಥವೇ?
ಹೌದು, ಒಮೈಕ್ರಾನ್ ಅನ್ನು ಎಸ್-ಜೀನ್ ಮೂಲಕ ಮಾತ್ರ ಗುರುತಿಸಲಾಗುತ್ತಿದೆ. ಒಮೈಕ್ರಾನ್ ತಗುಲಿದಾಗ ಎಸ್-ಜೀನ್ ಇರಲ್ಲ ಎಂದು ಅನೇಕ ವಿಜ್ಞಾನಿಗಳು ಶೋಧ ಮಾಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಮಾದರಿಯಲ್ಲಿ S-ಜೀನ್ ಅನ್ನು ಕಳೆದುಕೊಂಡಿದ್ದರೆ ಅವರು ಒಮೈಕ್ರಾನ್ ಸೋಂಕಿತರಾಗಿದ್ದಾರೆ ಎಂದರ್ಥ.
ಎಸ್-ಜೀನ್ ಕುರಿತು WHO ಏನು ಹೇಳಿದೆ?
ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಪ್ರಕಾರ, ಒಮೈಕ್ರಾನ್‌ನಿಂದ ದೇಹದಲ್ಲಿ ಬಹು ರೂಪಾಂತರಗಳ ಉಪಸ್ಥಿತಿಯೇ ಎಸ್-ಜೀನ್ ಕಣ್ಮರೆಯಾಗಲು ಕಾರಣ ಎಂದು ಹೇಳಿದೆ. ಸೋಂಕಿತರಲ್ಲಿ ಎಸ್-ಜೀನ್ ಕಾಣೆಯಾಗಿದೆ ಎಂಬುದು ಒಮೈಕ್ರಾನ್ ಇರುವಿಕೆಯ ಸಂಕೇತವಾಗಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.
ಯಾವ ರಾಜ್ಯದಲ್ಲಿ ಆರ್‌ಟಿಪಿಸಿಆರ್ ಕಿಟ್‌ನೊಂದಿಗೆ ಒಮೈಕ್ರಾನ್ ಪರಿಶೀಲಿಸಲಾಗುತ್ತಿದೆ?
ಕೋವಿಡ್ ಮಾದರಿಗಳನ್ನು ಆರ್‌ಟಿ-ಪಿಸಿಆರ್ ಕಿಟ್‌ಗಳೊಂದಿಗೆ ಎರಡು ಬಾರಿ ಮಹಾರಾಷ್ಟ್ರದಲ್ಲಿ ಪರೀಕ್ಷಿಸಲಾಗುತ್ತಿದೆ. ಪರೀಕ್ಷಾ ಕಿಟ್‌ನಲ್ಲಿಯೂ ಸಹ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿಶ್ವದೆಲ್ಲೆಡೆ ಹೊಸ ಹೊಸ ತಳಿಯ ವೈರಸ್ ಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್‌ಟಿಪಿಸಿಆರ್ ನಲ್ಲಿ ಬದಲಾವಣೆ ಮಾಡಲಾಗಿದ್ದು, ಎಸ್-ಜೀನ್ ಇದೆಯೋ ಇಲ್ಲೋ ಅನ್ನೋದನ್ನು ಈ ಮೂಲಕ ಕಂಡುಹಿಡಿಯಲು ಸಾಧ್ಯವಾಗುತ್ತಿದೆ.

Continue Reading

ದೇಶ

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

Published

on

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೃತ ವಿದ್ಯಾರ್ಥಿಯನ್ನು ದರ್ಶನ್ ಮಾಳವಿಯಾ (26) ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಹಾಸ್ಟೆಲ್ ಕಟ್ಟಡದ ಭದ್ರತಾ ಸಿಬ್ಬಂದಿ ಗಮನಿಸಿ ಹಾಸ್ಟೆಲ್ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಳವಿಯಾ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಸ್ಪತ್ರೆಗೆ ದಾಖಲಿಸುವ ಮೊದಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಧ್ಯಪ್ರದೇಶ ಮೂಲದ ಮೃತ ವಿದ್ಯಾರ್ಥಿ ಕಳೆದ ಜುಲೈನಿಂದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಕೋರ್ಸ್ ಓದುತ್ತಿದ್ದರು. ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಯು ತನ್ನ ಹಾಸ್ಟೆಲ್ ಕೊಠಡಿಯಲ್ಲಿನ ಬೋರ್ಡ್‌ನಲ್ಲಿ ತಾನು ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಬರೆದಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊವೈ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಬುಧನ್ ಸಾವಂತ್ ತಿಳಿಸಿದ್ದಾರೆ.

Continue Reading

ದೇಶ

ಚುನಾವಣಾ ಆಯೋಗದ ಮಹತ್ವದ ಸಭೆ ಇಂದು

Published

on

ಹೊಸದಿಲ್ಲಿ : ಜನೆವರಿ 17 (ಯು.ಎನ್.ಐ.) ಪಂಜಾಬ್ ನ ಹಲವು ರಾಜಕೀಯ ಪಕ್ಷಗಳ ಮುಖಂಡರ ಕೋರಿಕೆ ಹಿನ್ನೆಲೆಯಲ್ಲಿ ಇಂದು ಚನಾವಣಾ ಆಯೋಗ ಮಹತ್ವದ ಸಭೆ ನಡೆಸಲಿದೆ. ಪಂಜಾಬ್ ನ ಎಲ್ಲ ರಾಜಕೀಯ ಪಕ್ಷಗಳು ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿಕೊಂಡಿದ್ವು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಚುನಾವಣಾ ಆಯೋಗದ ಮಹತ್ವದ ನಿರ್ಧಾರ ಹೊರಬೀಳಲಿದೆ.
ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಫೆಬ್ರವರಿ 14 ರಂದು ನಡೆಯಲಿರುವ ಚುನಾವಣೆಯನ್ನು ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ಕನಿಷ್ಠ 6 ದಿನಗಳ ಕಾಲ ಮುಂದೂಡಬೇಕೆಂದು ಮನವಿ ಮಾಡಿದ್ದಾರೆ.
“ಪಂಜಾಬ್‌ನ ಶೇಕಡಾ 32ರಷ್ಟು ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಟ ಜಾತಿಯ ಸಮುದಾಯದ ಜನ್ರು ಫೆಬ್ರವರಿ 10 ರಿಂದ 16 ರವರೆಗೆ ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 14 ರಂದು ನಡೆಯುವ ಚುನಾವಣೆಯಲ್ಲಿ ಮತದಾನ ಮಾಡಲು ಸಾಧ್ಯವಾಗುವದಿಲ್ಲ ಎಂದು ಆ ಸಮುದಾಯದ ಪ್ರತಿನಿಧಿಗಳು ತಿಳಿಸಿದ್ದಾರೆ. ಹೀಗಾಗಿ ಚುನಾವಣೆ ದಿನಾಂಕವನ್ನು ಆರು ದಿನಗಳ ಕಾಲ ಮುಂದೂಡಬೇಕೆಂದು” ಪಂಜಾಬ್ ಸಿಎಂ ಚನ್ನಿ ಆಯೋಗಕ್ಕೆ ಸಲಹೆ ನೀಡಿದ್ದಾರೆ.
ಇತ್ತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ಸಹ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದು, “ರಾಜ್ಯವು ಗುರು ರವಿದಾಸ್ ಜಿ ಅವರ ಅನುಯಾಯಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಇದರಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನಸಂಖ್ಯೆಯ ಶೇಕಡಾ 32 ರಷ್ಟಿದೆ. ಈ ಪರಿಸ್ಥಿತಿಯಲ್ಲಿ ಗುರುಪರ್ಬ್ ಆಚರಿಸಲು ಲಕ್ಷಾಂತರ ಭಕ್ತರು ಉತ್ತರ ಪ್ರದೇಶದ ಬನಾರಸ್ ಗೆ ಭೇಟಿ ನೀಡುತ್ತಾರೆ. ಹಾಗಾಗಿ ಅವರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ಚುನಾವಣೆ ದಿನಾಂಕವನ್ನು ಮುಂದೂಡವಂತೆ” ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗ ಈ ಹಿಂದೆ ಘೋಷಣೆ ಮಾಡಿದಂತೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ತೀರ್ಮಾನ ಕೈಗೊಂಡಿತ್ತು. ಮತಎಣಿಕೆ ಪ್ರಕ್ರಿಯೆಯನ್ನು ಮಾರ್ಚ್ 10 ರಂದು ನೆರವೇರಿಸಲು ನಿರ್ಧಾರ ಕೈಗೊಂಡಿತ್ತು. ಆದರೆ, ಎಲ್ಲ ಪಕ್ಷಗಳ ಮನವಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇಂದು ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

Continue Reading
Advertisement
ಕರ್ನಾಟಕ10 mins ago

ಪಿಎಂಎಫ್ಎಂಇ ಯೋಜನೆಗೆ ಶೇ.15 ರಷ್ಟು ರಾಜ್ಯದಿಂದ ಹೆಚ್ಚುವರಿ ಸಹಾಯಧನ

ಬೆಂಗಳೂರು: ಜನೆವರಿ 17 (ಯು.ಎನ್.ಐ.)ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಪಿಎಂಎಫ್ಎಂಇ ಯೋಜನೆಗೆ...

ಬೆಂಗಳೂರು27 mins ago

ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಕೋವಿಡ್

ಬೆಂಗಳೂರು, ಜ ೧೭(ಯುಎನ್ ಐ) ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆಆರ್ ಟಿ...

ದೇಶ41 mins ago

ಉಪಯುಕ್ತ ಮಾಹಿತಿ ; 5 ಸಾವಿರ ಅಲ್ಲ, ಕೇವಲ ₹260 ರಲ್ಲಿ ಒಮೈಕ್ರಾನ್ ಪತ್ತೆ ಹಚ್ಚಿ!

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಪ್ರತಿ ದಿನ ಒಮೈಕ್ರಾನ್ ಸೋಂಕು ದೇಶದಲ್ಲಿ ವೇಗವಾಗಿ ಹರಡಲಾರಂಭಿಸಿದೆ. ಕೊರೊನಾ ರೂಪಾಂತರಗಳಿಗಿಂತ ಒಮೈಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದ್ದು, ಜೀನೋಮ್ ಸೀಕ್ವೆನ್ಸಿಂಗ್ ಟೆಸ್ಟ್‌ನೊಂದಿಗೆ...

ದೇಶ41 mins ago

ಐಐಟಿ ಬಾಂಬೆಯ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಜನೆವರಿ 17  (ಯು.ಎನ್.ಐ.) ಐಐಟಿ ಬಾಂಬೆಯ ವಿದ್ಯಾರ್ಥಿ ಸೋಮವಾರ ಮುಂಜಾನೆ ಇಲ್ಲಿನ ಪೊವೈ ಕ್ಯಾಂಪಸ್ ನಲ್ಲಿರುವ ತನ್ನ ಹಾಸ್ಟೆಲಿನ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ...

ಕರ್ನಾಟಕ1 hour ago

ಕೋವಿಡ್‌ ಸೋಂಕು ಹೆಚ್ಚು; ಸಾವು ಕಡಿಮೆ:‌ ಸಚಿವ ಅಶೋಕ್

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ರಾಜ್ಯದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಹೆಚ್ಚಾಗಿದೆ.  ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ ಎಂದು ಕಂದಾಯ ಸಚಿವ ಆರ್.‌ ಅಶೋಕ್‌ ತಿಳಿಸಿದರು....

ಆರೋಗ್ಯ1 hour ago

ದೇಶದಲ್ಲಿ ಕಳೆದ ೨೪ ಗಂಟೆಗಳಲ್ಲಿ ೨ ಲಕ್ಷ ೫೮ ಸಾವಿರ ಕೋವಿಡ್ ಪ್ರಕರಣ

ನವದೆಹಲಿ,ಜ ೧೭(ಯು ಎನ್ ಐ)ದೇಶದಲ್ಲಿ ಈವರೆಗೆ ೮ ಸಾವಿರದ ೨೦೯ ಕೋವಿಡ್-೧೯ ರೂಪಾಂತರಿ ಒಮಿಕ್ರಾನ್ ಸೋಂಕು ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ ಶೇಕಡ ೬ರಷ್ಟು ಪ್ರಕರಣಗಳು...

ಕರ್ನಾಟಕ1 hour ago

ಗಾಂಧಿ ಕುರಿತು ಸಂದೇಹ, ಪ್ರಶ್ನೆಗಳಿವೆಯೇ ?

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಗಾಂಧಿ ವಿಚಾರ ವೇದಿಕೆಯು ಗಾಂಧೀಜಿ ಅವರ ಕುರಿತ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜಿಸಿದ್ದು, ಸಾರ್ವಜನಿಕರಿಂದ ಪ್ರಶ್ನೆಗಳನ್ನು ಆಹ್ವಾನಿಸಿದೆ....

ವಾಣಿಜ್ಯ2 hours ago

ವಿಶ್ವ ಆರ್ಥಿಕ ವೇದಿಕೆಯ ದಾವೂಸ್ ಸಭೆಯಲ್ಲಿಂದು ರಾತ್ರಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಜ ೧೭(ಯುಎನ್ ಐ) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ ೮.೩೦ಕ್ಕೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಭೆಯಲ್ಲಿ ’ಜಗತ್ತಿನ ಸ್ಥಿತಿಗತಿ’ ಕುರಿತು ವಿಶೇಷ...

ಕರ್ನಾಟಕ2 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಿಗೆ ಕೋವಿಡ್

ಬೆಂಗಳೂರು : ಜನೆವರಿ 17 (ಯು.ಎನ್.ಐ.) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಳೆದ 24 ಗಂಟೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ...

ಕರ್ನಾಟಕ2 hours ago

ಇಂದು ಮಣಿಪಾಲ್‌ ಆಸ್ಪತ್ರೆಗೆ ತೆರಳಲಿರುವ ಸಿಎಂ

ಬೆಂಗಳೂರು: ಜನೆವರಿ ೧೭ (ಯು.ಎನ್.ಐ.) ಕೋವಿಡ್‌ ೧೯ ಸೋಂಕಿಗೆ ಒಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನಗರದ ಮಣಿಪಾಲ್‌ ಆಸ್ಪತ್ರೆಗೆ ಪರೀಕ್ಷೆಗಾಗಿ ತೆರಳಲಿದ್ದಾರೆ. ಇಂದು ಮಧ್ಯಾಹ್ನದ...

ಟ್ರೆಂಡಿಂಗ್

Share