Connect with us


      
ಅಪರಾಧ

ಸಾಲನೀಡುವ ನೆಪದಲ್ಲಿ 1 ಕೋಟಿ 80 ಲಕ್ಷ ವಂಚಿಸಿದ ಕಂಪೆನಿ

Vanitha Jain

Published

on

ಬೆಂಗಳೂರು, ಡಿಸೆಂಬರ್ 9, (ಯು.ಎನ್.ಐ): ಉದ್ಯಮಿಯೊಬ್ಬರಿಗೆ ಸಾಲಕೊಡುವುದಾಗಿ ನೂರು ಕೋಟಿ ಸಾಲದ ಆಸೆ ತೋರಿಸಿ 1 ಕೋಟಿ 80 ಲಕ್ಷ ವಂಚನೆಗೈದಿರುವ ಘಟನೆ ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿ ನಡೆದಿದ್ದು ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ü ಹೈದರಾಬಾದ್ ಮೂಲದ ಉದ್ಯಮಿ ಮಂಥೆನಾ ತರುಣ್ ಗಾಂಧಿ ವಂಚನೆಗೊಳಗಾದ ವ್ಯಕ್ತಿ. ಕಾರ್ತಿವೇಲನ್ ವಂಚನೆಗೈದ ವ್ಯಕ್ತಿ.

ಮಂಥೆನಾ ತರುಣ್ ಗಾಂಧಿ ಹೊಸ ಉದ್ಯಮ ಆರಂಭಿಸುವ ಸಲುವಾಗಿ ಸಾಲದ ಹುಡುಕಾಟದಲ್ಲಿದ್ದರು. ಈ ವೇಳೆ ಇವರ ಸಂಬಂಧಿಕರೊಬ್ಬರು ಬೆಂಗಳೂರಿನ ಪ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಸಾಲ ಕೊಡುವುದಾಗಿ ಮಾಹಿತಿ ನೀಡಿದರು. ತದನಂತರ ಕಂಪೆನಿಯನ್ನು ಸಂಪರ್ಕಿಸಿದಾಗ ಕಂಪನಿ ಮುಖ್ಯಸ್ಥ ಕಾರ್ತಿವೇಲನ್ ಅವರು ನೂರು ಕೋಟಿ ಸಾಲ ನೀಡಬೇಕಾದರೆ ಮೂರು ತಿಂಗಳ ಬಡ್ಡಿಯನ್ನು ಮುಂಗಡವಾಗಿ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿದ ಮಂಥೆನಾ ತರುಣ್ ಮುಂಗಡವಾಗಿ 1 ಕೋಟಿ 80 ಲಕ್ಷ ನೀಡಿದ್ದಾರೆ. ಆದರೆ ಬಡ್ಡಿ ನೀಡಿದರೂ ಸಾಲ ಬರದಿದ್ದಾಗ ಆತ ಪರಾರಿಯಾಗಿರುವ ವಿಚಾರ ತಿಳಿದು ಬಂದಿದೆ.

ಈ ಕಡೆ ಸಾಲವೂ ನೀಡದೆ ಬಡ್ಡಿಯೂ ಇಲ್ಲದೇ ಕಾರ್ತಿವೇಲನ್ ಪರಾರಿಯಾಗಿದ್ದು, ಕಂಗಾಲಾದ ಉದ್ಯಮಿ ಎಚ್‍ಎಸ್‍ಆರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವರ ದೂರಿನನ್ವಯ ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಮುಖ್ಯ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Share