Connect with us


      




ದೇಶ

1 ರಿಂದ 7ನೇ ತರಗತಿಗಳು ಪುನಾರಂಭ

Vanitha Jain

Published

on

ಪುಣೆ, ಡಿಸೆಂಬರ್ 16(ಯು.ಎನ್.ಐ) ಕೋವಿಡ್-19 ಹೊಸ ರೂಪಾಂತರ ತಳಿ ಒಮೈಕ್ರಾನ್ ಭಿತಿಯ ನಡುವೆಯೂ ಮಹಾರಾಷ್ಟ್ರದ ಪುಣೆಯಲ್ಲಿ ಆನ್‍ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿ 1 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪುನರಾರಂಭಿಸಲಾಗಿದೆ.

ಪೋಷಕರ ಒಪ್ಪಿಗೆಯ ಪತ್ರ ತಂದ ವಿದ್ಯಾರ್ಥಿಗಳಿಗೆ ಮಾತ್ರ ಶಾಲೆಯ ಒಳಗೆ ಅನುಮತಿ ನೀಡಲಾಗಿದೆ. ಇನ್ನು ಒಂದು ತರಗತಿಯಲ್ಲಿ 50 ಪ್ರತಿಶತದಷ್ಟು ಹಾಜರಾತಿ ಇರಲಿದೆ. ಇನ್ನು ನೈರ್ಮಲ್ಯ, ಥರ್ಮಲ್ ಚೆಕ್ ಸ್ಕ್ಯಾನ್ ಅನ್ನು ಕಡ್ಡಾಯಗೊಳಿಸಲಾಗಿದೆ.

ಆನ್‍ಲೈನ್- ಆಫ್‍ಲೈನ್ ಎರಡು ತರಗತಿಗಳು ನಡೆಯುತ್ತಿವೆ. ಪೋಷಕರು ಒಪ್ಪಿಗೆ ನೀಡಿದ ವಿದ್ಯಾರ್ಥಿಗಳಿಗೆ ಮಾತ್ರ ಭೌತಿಕ ತರಗತಿಗೆ ಅನುವು ಮಾಡಿಕೊಡಲಾಗುತ್ತಿದೆ.

ಶಾಲೆಗಳನ್ನು ಪುನಾರಂಭಿಸಲು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಆದೇಶಿಸಿದ್ದು, ಕೆಲವು ಶಾಲೆಗಳು ಡಿಸೆಂಬರ 15 ರಮದು ತೆರೆದರೆ, ಪುಣೆಯಲ್ಲಿ ಇಂದಿನಿಂದ (ಡಿ.16)ರಿಂದ ತೆರೆಯಲಾಗಿದೆ.,

ಮುಂಬೈನಲ್ಲಿ 12, ಪಿಂಪ್ರಿ-ಚಿಂಚ್‍ವಾಡ್‍ನಲ್ಲಿ 10 (ಪುಣೆ ಜಿಲ್ಲೆಯ ಕೈಗಾರಿಕಾ ಟೌನ್‍ಶಿಪ್), ಪುಣೆ ನಗರದಲ್ಲಿ ಎರಡು, ಕಲ್ಯಾಣ್-ಡೊಂಬಿವಲಿ, ನಾಗ್ಪುರ, ಲಾತೂರ್ ಮತ್ತು ವಸೈ-ವಿರಾರ್‍ನಲ್ಲಿ ತಲಾ ಒಂದು ಒಮೈಕ್ರಾನ್ ಪ್ರಕರಣಗಳು ಕಂಡುಬಂದಿವೆ

Share