Connect with us


      
ಕರ್ನಾಟಕ

ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಮಾರ್ಗಸೂಚಿ ದರದಲ್ಲಿ 10% ರಿಯಾಯತಿ: ಕಂದಾಯ ಸಚಿವ ‌ಆರ್ ಅಶೋಕ್

UNI Kannada

Published

on

ಬೆಂಗಳೂರು,ಜ.1( ಯು.ಎನ್.ಐ)ಕೋವಿಡ್ ಹಿನ್ನೆಲೆಯಲ್ಲಿ ಜನರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ನೋಂದಣಿಗೆ ಕಂದಾಯ ಇಲಾಖೆ ವಿಶೇಷ ರಿಯಾಯತಿ ಪ್ರಕಟಿಸಿದೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್,ಹೊಸ ವರ್ಷದ ಮೊದಲ ದಿನವೇ ಸರ್ಕಾರ ಈ ರಿಯಾಯಿತಿಯನ್ನು ಜನರ ಅನುಕೂಲಕ್ಕಾಗಿ ನೀಡುತ್ತಿದೆ. ಇಂದಿನಿಂದಲೇ ಈ ಸೌಲಭ್ಯವನ್ನು ಜನರು ಪಡೆದುಕೊಳ್ಳಬಹುದು. ಇದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ಸ್ವಲ್ಪ ಆದಾಯ ಕಡಿಮೆ ಆಗಬಹುದು. ಆದರೆ ಲಕ್ಷಾಂತರ ಜನರಿಗೆ ಇದು ಅನುಕೂಲವಾಗುತ್ತದೆ. ಎಷ್ಟೋ ರೈತರು ಅಗ್ರಿಮೆಂಟ್, ಜಿಪಿಎ ಮಾಡಿಕೊಂಡಿದ್ದರು. ಅವರೆಲ್ಲ ಈಗ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು.ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನಗಳು, ಕಟ್ಟಡಗಳು, ಅಪಾರ್ಟ್‌ಮೆಂಟ್ ಹಾಗೂ ಇತರ ಎಲ್ಲ ರೀತಿಯ ಸ್ಥಿರಾಸ್ತಿಗಳ ನೋಂದಣಿಗೆ ಮಾರ್ಗಸೂಚಿ ದರವನ್ನು 10% ರಷ್ಟು ಕಡಿತಗೊಳಿಸಲಾಗಿದೆ.ಈ ರಿಯಾಯಿತಿ ಜ.1ರಿಂದ ಮಾರ್ಚ್ ಅಂತ್ಯದವರೆಗೆ ಮಾತ್ರ ಲಭ್ಯ ಇರುತ್ತದೆ ಎಂದು ಅಶೋಲ್ ಮಾಹಿತಿ ನೀಡಿದರು.

Share