Connect with us


      




ದೇಶ

ರಾಷ್ಟ್ರವ್ಯಾಪಿ ದಾಳಿ ನಡೆಸಿದ ಎನ್ಐಎ, ಇಡಿ: 100ಕ್ಕೂ ಹೆಚ್ಚು ಪಿಎಫ್ ಐ ಕಾರ್ಯಕರ್ತರ ಬಂಧನ

Vanitha Jain

Published

on

ನವದೆಹಲಿ: ಸೆಪ್ಟೆಂಬರ್ 22 (ಯು.ಎನ್.ಐ.) ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಾರಿ ನಿರ್ದೇಶನಾಲಯ ಗುರುವಾರ ರಾಷ್ಟ್ರವ್ಯಾಪಿ ದಾಳಿ ನಡೆಸಿ 100ಕ್ಕೂ ಹೆಚ್ಚು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಕಾರ್ಯಕರ್ತರನ್ನು ಬಂಧಿಸಿದೆ.

ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆ ಪಿಎಫ್‌ಐ ಅಧ್ಯಕ್ಷ ಓಎಂಎ ಸಲಾಂ ಮತ್ತು ಪಿಎಫ್‌ಐನ ಇತರ ಮುಖಂಡರನ್ನು ವಶಕ್ಕೆ ಪಡೆಯಲಾಯಿತು. ತನಿಖಾ ಸಂಸ್ಥೆಯು ದೆಹಲಿ ಪಿಎಫ್‌ಐ ಮುಖ್ಯಸ್ಥ ಪರ್ವೇಜ್ ಅಹ್ಮದ್ ಮತ್ತು ಅವರ ಸಹೋದರನನ್ನು ಓಖ್ಲಾದಿಂದ ಗುರುವಾರ ಬೆಳಗಿನ ಜಾವ 3.30ಕ್ಕೆ ಬಂಧಿಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ದಾಳಿ ನಡೆಸಿದ ನಂತರ ನಾಲ್ವರು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಎನ್‌ಐಎ ಸೆಪ್ಟೆಂಬರ್ 19 ರಂದು ರಿಮಾಂಡ್ ವರದಿಯನ್ನು ಸಲ್ಲಿಸಿತ್ತು. ಪಿಎಫ್ ಐ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸುತ್ತಿದೆ ಮತ್ತು ನಿರ್ದಿಷ್ಟ ಧರ್ಮದ ಜನರನ್ನು ಗುರುತಿಸಿ ಕೊಲ್ಲಲು ಪಿಎಫ್ಐ ಕಾರ್ಯಕರ್ತರಿಗೆ ತರಬೇತಿ ನೀಡುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ.

10 ರಾಜ್ಯಗಳು, 100ಕ್ಕೂ ಹೆಚ್ಚು ಬಂಧನಗಳು

ದಕ್ಷಿಣ ಭಾರತದಲ್ಲಿ, ಎನ್ ಐಎ ಅನೇಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ. ತನಿಖಾ ಸಂಸ್ಥೆಯು ಹತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ದಾಳಿಗಳನ್ನು ನಡೆಸಿ ಕನಿಷ್ಠ 106 ಜನರನ್ನು ಬಂಧಿಸಿತು. ಆಂಧ್ರಪ್ರದೇಶ (5), ಅಸ್ಸಾಂ (9), ದೆಹಲಿ (3), ಕರ್ನಾಟಕ (20), ಕೇರಳ (22), ಮಧ್ಯಪ್ರದೇಶ (4), ಮಹಾರಾಷ್ಟ್ರ (20), ಪುದುಚೇರಿ (3), ರಾಜಸ್ಥಾನ (2), ತಮಿಳುನಾಡು (10) ಮತ್ತು ಉತ್ತರ ಪ್ರದೇಶ (8)ಗಳಿಂದ ಬಂಧಿಸಲಾಗಿದೆ.

ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಘಟನೆಗಳಿಗೆ ಸೇರಲು ಜನರನ್ನು ತೀವ್ರಗಾಮಿಗೊಳಿಸುವಲ್ಲಿ ತೊಡಗಿರುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಸ್ಥಳಗಳಲ್ಲಿ ಹುಡುಕಾಟ ನಡೆಸಿದೆ.

Share