Connect with us


      
ದೇಶ

ಪಂಜಾಬಿನಲ್ಲಿ ಪಾಕಿಸ್ತಾನದ ಹತ್ತು ಭಯೋತ್ಪಾದಕರ ಸೆರೆ

Vanitha Jain

Published

on

ಲಾಹೋರ್: ಜನವರಿ 01(ಯು.ಎನ್.ಐ) ನಿಷೇಧಿತ  ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ), ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‍ಗೆ ಸೇರಿದ ಒಟ್ಟು 10 ಭಯೋತ್ಪಾದಕರನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿವಿಧ ಭಾಗಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‍ನಲ್ಲಿ ಭಯೋತ್ಪಾದನೆಗಾಗಿ ಬಳಸುವ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ತಿಳಿಸಿದೆ.

ಸಿಟಿಡಿಯು ಪ್ರಾಂತ್ಯದಾದ್ಯಂತ ಗುಪ್ತಚರ-ಆಧಾರಿತ ಕಾರ್ಯಾಚರಣೆಗಳನ್ನು ನಡೆಸಿ ಐವರು ಟಿಟಿಪಿ ಭಯೋತ್ಪಾದಕರನ್ನು ಬಂಧಿಸಿತು. ಪಂಜಾಬ್‍ನ ಟೋಬಾ ಟೆಕ್ ಸಿಂಗ್ ಮತ್ತು ಒಕಾರಾ ಜಿಲ್ಲೆಗಳಲ್ಲಿ ಮುನೀಬ್ ಅಹ್ಮದ್, ರಫೀಕ್ ಹೈದರ್, ಮುಹಮ್ಮದ್ ನಯೀಮ್, ಮುಹಮ್ಮದ್ ಇಕ್ಬಾಲ್ ಖಾನ್ ಮತ್ತು ಗುಲಾಮ್ ಅಕ್ಬರ್ ಅವರನ್ನು ಬಂಧಿಸಲಾಗಿದೆ.

ಅಲ್-ಖೈದಾದ ಹಮದುರ್ ರೆಹಮಾನ್, ಶೌಕತ್ ಹುಸೇನ್, ಅಖ್ತರ್ ಖಾನ್ ಮತ್ತು ಅಹ್ಮದ್ ಅಫ್ತಾಬ್ ಎಂದು ಗುರುತಿಸಲಾಗಿದ್ದು ಈ ನಾಲ್ವರನ್ನು ಗುಜರಾತ್ ಜಿಲ್ಲೆಯಲ್ಲಿ, ಐಎಸ್‍ನ ಮುಹಮ್ಮದ್ ಅಹ್ಸಾನ್ ಅವರನ್ನು ಸರ್ಗೋಧಾ ನಗರದಲ್ಲಿ ಬಂಧಿಸಲಾಗಿದೆ.

ಬಂಧಿತ ಭಯೋತ್ಪಾದಕರ ವಿರುದ್ಧ ಭಯೋತ್ಪಾದನೆ ಆರೋಪ, ಭಯೋತ್ಪಾದನೆಗೆ ಹಣಕಾಸು ನೆರವು, ದ್ವೇಷಪೂರಿತ ಭಾಷಣ ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ ಎಂದು ಅದು ಹೇಳಿದೆ.

ಭಯೋತ್ಪಾದಕ ದಾಳಿಗಳಲ್ಲಿ ಪ್ರಾಂತ್ಯದಲ್ಲಿ ಪೆÇಲೀಸರ ಹತ್ಯೆಯಲ್ಲಿ ಭಾಗಿಯಾಗಿರುವುದರೊಂದಿಗೆ ಸಂಬಂಧ ಹೊಂದಿದ ಕಾರಣ ಕೆಲವು ಬಂಧಿತ ಶಂಕಿತರನ್ನು ವಿಚಾರಣೆ ನಡೆಸುತ್ತಿದೆ. ಕಳೆದ ತಿಂಗಳು, ಸಿಟಿಡಿ ಕಾರ್ಯಾಚರಣೆಯ ಸಮಯದಲ್ಲಿ ಪಂಜಾಬ್‍ನಿಂದ ಟಿಟಿಪಿ ಮತ್ತು ಐಎಸ್‍ನ 11 ಭಯೋತ್ಪಾದಕರನ್ನು ಬಂಧಿಸಿತ್ತು.

Share