Connect with us


      
ವಿದೇಶ

ಪಾಕಿಸ್ತಾನದಲ್ಲಿ ಭೀಕರ ಅಪಘಾತ: 12 ಮಂದಿ ಸಾವು

Iranna Anchatageri

Published

on

ಇಸ್ಲಾಮಾಬಾದ್: ಮೇ 13 (ಯು.ಎನ್‌.ಐ.) ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜ್ರಾನ್‌ವಾಲಾ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಮಹಿಳೆಯರು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ. ಜಿಯೋ ನ್ಯೂಸ್ ಪ್ರಕಾರ, ಈ ಅಪಘಾತದಲ್ಲಿ 10 ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ವ್ಯಾನ್ ಸರಗೋಡದಿಂದ ಗುಜ್ರನ್‌ವಾಲಾ ಕಡೆಗೆ ಪ್ರಯಾಣ ಮಾಡುತ್ತಿತ್ತು. ಅತಿವೇಗದ ಕಾರಣ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಎರಡೂ ವ್ಯಾನ್‌ಗಳಲ್ಲಿ 28 ಜನರು ಪ್ರಯಾಣ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಪೈಕಿ ಹೆಣ್ಣು ಮಗು ಕೂಡ ಸೇರಿದೆ.

ವರದಿಯ ಪ್ರಕಾರ, ಸುಮಾರು ಐವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

Share