ನವದೆಹಲಿ, ನ ೧೪(ಯುಎನ್ ಐ)- ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಇದುವರೆಗೆ ೧೨೪ ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ಪೂರೈಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಲಸಿಕೆಗಳನ್ನು ಉಚಿತವಾಗಿ ಮತ್ತು ರಾಜ್ಯಗಳ ನೇರ ಖರೀದಿ ವಿಧಾನದಡಿ ಪೂರೈಕೆ ಮಾಡಲಾಗಿದೆ. ೧೮ ಕೋಟಿ ೭೪ ಲಕ್ಷಕ್ಕೂ ಅಧಿಕ ಬಳಕೆಯಾಗದ ಲಸಿಕೆ ಡೋಸ್, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ ಲಭ್ಯವಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಕೋವಿಡ್-೧೯ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಮತ್ತು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿರುವುದಾಗಿ ಸಚಿವಾಲಯ ತಿಳಿಸಿದೆ.