Published
7 months agoon
By
Vanitha Jainಅಮೃತಸರ: ಜನೆವರಿ 06 (ಯು.ಎನ್.ಐ.) ಇಟಲಿಯ ಮಿಲನ್ನಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿದ್ದ 179 ಪ್ರಯಾಣಿಕರ ಪೈಕಿ 125 ಪ್ರಯಾಣಿಕರಿಗೆ ಕೋವಿಡ್ 19 ದೃಢಪಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿದ ವಿಮಾನ ನಿಲ್ದಾಣ ನಿರ್ದೇಶಕ ವಿ.ಕೆ ಸೇಠ್, ಇಟಲಿಯಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆ ಕೊರೋನಾ ಮಾರ್ಗಸೂಚಿಯಂತೆ ಪ್ರಯಾಣಿಕರಿಗೆಲ್ಲಾ ಕೋವಿಡ್ ಪರೀಕ್ಷೆ ನಡೆಸಲಾಯಿತು. ಅದರಲ್ಲಿ 125 ಮಂದಿಗೆ ಕೋವಿಡ್ ಕಾಣಿಸಿಕೊಂಡಿದೆ ಎಂದು ಹೇಳಿದರು.
ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಮಾನ ವೈಯು-661ನಲ್ಲಿ ಒಟ್ಟು 179 ಪ್ರಯಾಣಿಕರಿದ್ದರು. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಇಟಲಿಯು ಅಪಾಯದಲ್ಲಿರುವ ದೇಶಗಳಲ್ಲಿ ಒಂದಾಗಿರುವುದರಿಂದ, ಎಲ್ಲಾ ಅರ್ಹ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಯಿತು.
179 ಪ್ರಯಾಣಿಕರಲ್ಲಿ 19 ಮಕ್ಕಳು ಮತ್ತು ಶಿಶುಗಳು ಇದ್ದುದರಿಂದ ಅವರನ್ನು ಆರ್ ಟಿಪಿಸಿಆರ್ ಪರೀಕ್ಷೆಯಿಂದ ವಿನಾಯಿತಿ ನೀಡಲಾಯಿತು. ಇಟಲಿಯ ಮಿಲನ್ ಮತ್ತು ಪಂಜಾಬ್ನ ಅಮೃತಸರ ನಡುವಿನ ಚಾರ್ಟರ್ ಫ್ಲೈಟ್ ಅನ್ನು ಪೆÇೀರ್ಚುಗೀಸ್ ಕಂಪನಿ ಯುರೋ ಅಟ್ಲಾಂಟಿಕ್ ಏರ್ವೇಸ್ ನಿರ್ವಹಿಸುತ್ತಿದೆ ಹೇಳಿದರು