Connect with us


      




ಜಾನಪದ

ವಾಯುಪಡೆಯ ಹೆಲಿಕಾಪ್ಟರ್ ಪತನ 13 ಮಂದಿ ಸಾವು; ಪ್ರತಿಕೂಲ ಹವಾಮಾನವೇ ಕಾರಣವೇ?

Vanitha Jain

Published

on

ನವದೆಹಲಿ, ಡಿಸೆಂಬರ್ 8, (ಯು.ಎನ್.ಐ): ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಒಳಗೊಂಡಂತೆ ಇತರೆ 14 ಮಂದಿ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡ ಪರಿಣಾಮ 14 ಮಂದಿಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

ಪ್ರತಿಕೂಲ ಹವಾಮಾನವೇ ಅಪಘಾತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಪತ್ತೆಯಾದ ದೇಹಗಳ ಗುರುತು ಮರಣೋತ್ತರ ಪರೀಕ್ಷೆಯ ಬಳಿಕವೇ ಖಚಿತಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬಿಪಿನ್ ರಾವತ್ ಮನೆಗೆ ಭೇಟಿ ನೀಡಿದ್ದಾರೆ.

ರಾವತ್ ಅವರ ಪತ್ನಿ ಮಧುಲಿಕಾ ರಾವತ್, ಅವರ ಡಿಎ ಬ್ರಿಗೇಡಿಯರ್ ಎಲ್‍ಎಲ್ ಲಿಡ್ಡರ್, ಅವರ ಎಸ್‍ಒ ಲೆಫ್ಟಿನೆಂಟ್ ಕರ್ನಲ್ ಹಜಿರ್ಂದರ್ ಸಿಂಗ್ ಸೇರಿದಂತೆ 14 ಜನರ ಪೈಕಿ ಹೆಲಿಕಾಪ್ಟರ್‍ನಲ್ಲಿದ್ದ ಐವರು ಸಿಬ್ಬಂದಿ ಪತನಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊಯಮತ್ತೂರಿನ ಸೂಲೂರು ವಾಯುನೆಲೆಯಿಂದ ಬುಧವಾರ ಬೆಳಗ್ಗೆ ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಹೆಲಿಕಾಪ್ಟರ್ ಹೊರಟು ನೀಲಗಿರಿಯ ವೆಲ್ಲಿಂಗ್ಟನ್‍ಗೆ ತೆರಳಿತ್ತು. ಹೆಲಿಕಾಪ್ಟರ್ ತನ್ನ ಗಮ್ಯಸ್ಥಾನವನ್ನು ತಲುಪುವ 10 ನಿಮಿಷಗಳ ಮೊದಲು ಅಪಘಾತಕ್ಕೀಡಾಗಿದೆ

ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಸೇನಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Share